ಡಿ.ಕೆ.ಶಿವಕುಮಾರ್ ಎಂದಾದರೂ ಕಣ್ಣೀರು ಹಾಕಿದ್ದಾರಾ: ಎಚ್ ಡಿಡಿ ಪ್ರಶ್ನೆ

| Published : Nov 09 2024, 01:04 AM IST

ಸಾರಾಂಶ

ರೌಡಿ ಕೊತ್ವಾಲ್ ರಾಮಚಂದ್ರನ ಹತ್ತಿರ ನೂರು ರುಪಾಯಿಗೆ ಕೆಲಸ ಮಾಡುತ್ತಿದ್ದ ಡಿ.ಕೆ.ಶಿವಕುಮಾರ್ ಇವತ್ತು ನೆಹರು, ಇಂದಿರ ಗಾಂಧಿ ಆಳ್ವಿಕೆ ಮಾಡಿದ ಪಕ್ಷದ ಅಧ್ಯಕ್ಷನಾಗಿದ್ದಾನೆ. ದೇಶಕ್ಕೆ ಅನ್ನ ನೀರುವ ರೈತನಿಗೆ ನೋವಾದಾಗ ಹೃದಯ ಮೊರಗಿ ನಮಗೆ ಕಣ್ಣೀರು ಬರುತ್ತಿದೆ. ಆದರೆ, ಡಿ.ಕೆ.ಶಿವಕುಮಾರ್ ಎಂದಾದರೂ ಕಣ್ಣೀರು ಹಾಕಿದ್ದಾನಾ..?

ಕನ್ನಡಪ್ರಭ ವಾರ್ತೆ ಪಾಂಡವಪುರ

ದೇಶಕ್ಕೆ ಅನ್ನ ನೀಡುವ ರೈತರು, ಬಡವರಿಗೆ ನೋವಾದಾಗ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಂದಾದರೂ ಕಣ್ಣೀರು ಹಾಕಿದ್ದಾರಾ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ಚನ್ನಪಟ್ಟಣ ಚುನಾವಣೆ ಪ್ರಚಾರದ ವೇಳೆ ನಿಖಿಲ್ ಕುಮಾರಸ್ವಾಮಿ ಭಾವುಕರಾರ ವಿಚಾರವಾಗಿ ಮಾಡುವ ಡಿಸಿಎಂ ಡಿಕೆಶಿ ಸೇರಿದಂತೆ ಕಾಂಗ್ರೆಸ್ ನಾಯಕರ ವಿಡಂಬನೆ ಕುರಿತು ಪ್ರತಿಕ್ರಿಯಿಸಿದರು.

ರೌಡಿ ಕೊತ್ವಾಲ್ ರಾಮಚಂದ್ರನ ಹತ್ತಿರ ನೂರು ರುಪಾಯಿಗೆ ಕೆಲಸ ಮಾಡುತ್ತಿದ್ದ ಡಿ.ಕೆ.ಶಿವಕುಮಾರ್ ಇವತ್ತು ನೆಹರು, ಇಂದಿರ ಗಾಂಧಿ ಆಳ್ವಿಕೆ ಮಾಡಿದ ಪಕ್ಷದ ಅಧ್ಯಕ್ಷನಾಗಿದ್ದಾನೆ. ದೇಶಕ್ಕೆ ಅನ್ನ ನೀರುವ ರೈತನಿಗೆ ನೋವಾದಾಗ ಹೃದಯ ಮೊರಗಿ ನಮಗೆ ಕಣ್ಣೀರು ಬರುತ್ತಿದೆ. ಆದರೆ, ಡಿ.ಕೆ.ಶಿವಕುಮಾರ್ ಎಂದಾದರೂ ಕಣ್ಣೀರು ಹಾಕಿದ್ದಾನಾ ಎಂದು ಪ್ರಶ್ನೆ ಮಾಡಿದರು.

ರೈತನಿಗೆ ನೋವಾದರೆ ನಮ್ಮ ವಂಶವೇ ಕಣ್ಣೀರು ಹಾಕುತ್ತದೆ. ನಾವು ಬಡವತವನ್ನು ಅನುಭವಿಸಿ ಬಂದಿದ್ದೇವೆ. ನಮಗೆ ಬಡವರ ಬಗ್ಗೆ ನೋವಿದೆ. ರೈತರ ಕಷ್ಟದ ಬಗ್ಗೆ ತಿಳಿದಿದೆ. ಅಂತವರಿಗಾಗಿ ಈ ದೇವೇಗೌಡ, ಕುಮಾರಸ್ವಾಮಿ, ನಿಖಿಲ್ ಕಣ್ಣೀರು ಹಾಕಿದ್ದಾರೆ. ಕಣ್ಣೀರು ಹಾಕುವುದು ನಮ್ಮ ತಂದೆಯಿಂದಲೇ ಬಂದಿದೆ ಎಂದರು.

ಎಚ್‌ಡಿಕೆ ವರ್ಸಸ್ ಡಿಕೆ ಎಂದು ಓಲೈಕೆ ಮಾಡಬೇಡಿ. ಚನ್ನಪಟ್ಟಣದಲ್ಲಿ ಈಗ ಚರ್ಚೆ ಆಗುತ್ತಿವೆ. ಹೇಮಾವತಿ, ಹಾರಂಗಿ ಕಟ್ಟಿದ್ದು ಯಾರು?, ಆದರೆ, ಮಾತನಾಡೋಕೆ ತುಂಬಾ ವಿಚಾರಗಳಿವೆ. ಕೆಲವರು ಆರು ತಿಂಗಳಿಂದ ನಾನೇ ಅಭ್ಯರ್ಥಿ ಎಂದು ಓಡಾಡ್ತಾ ಇದ್ರು. ಆದರೆ, ಆಗಲಿಲ್ಲ. ಅವರ ತಲೆಯಲ್ಲಿ ಇನ್ನೇನಿದೆಯೋ ಎಂದು ಡಿಸಿಎಂ ಡಿಕೆಶಿ ವಿರುದ್ಧ ಹರಿಹಾಯ್ದರು.

ದೇವೇಗೌಡರಿಂದ ರುತ್ವಿಅಕ್ಷಯ್ ಕನ್ವೆನ್ ಷನ್ ಹಾಲ್ ಲೋಕಾರ್ಪಣೆ

ಪಾಂಡವಪುರ:

ತಾಲೂಕಿನ ಎಲೆಕೆರೆ ಹ್ಯಾಂಡ್ ಪೋಸ್ಟ್‌ನಲ್ಲಿ ಹೊಸದಾಗಿ ನಿರ್ಮಿಸಿರುವ ರುತ್ವಿ ಅಕ್ಷಯ್ ಕನ್ವೆನ್‌ಷನ್ ಹಾಲ್‌ ಅನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಶುಕ್ರವಾರ ಲೋಕಾರ್ಪಣೆಗೊಳಿಸಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮೊದಲು ಕಲ್ಯಾಣ ಮಂಟಪದ ಆವರಣದಲ್ಲಿ ನಿರ್ಮಿಸಿರುವ ಶ್ರೀಗಣಪತಿ ದೇವಸ್ಥಾನ ಹಾಗೂ ಕಲ್ಯಾಣಿ ಕೊಳವನ್ನು ಉದ್ಘಾಟಿಸಿದರು. ನಂತರ ಕಲ್ಯಾಣ ಮಂಟಪದ ಆವರಣದಲ್ಲಿ ನಿರ್ಮಿಸಿರುವ ತಮ್ಮ ಪ್ರತಿಮೆ ಕಂಡ ದೇವೇಗೌಡರು ಅಭಿಮಾನ ವ್ಯಕ್ತಪಡಿಸಿದರು.

ಬಳಿಕ ಮಾತನಾಡಿದ ಎಚ್.ಡಿ.ದೇವೇಗೌಡರು, ಡಿಸಿಸಿ ಬ್ಯಾಂಕ್ ನಿರ್ದೇಶಕ ಚಲುವರಾಜು ಅವರು ವ್ಯವಸ್ಥಿತವಾದ ಕಲ್ಯಾಣ ಮಂಟಪ ನಿರ್ಮಿಸಿದ್ದಾರೆ. ಅಲ್ಲದೇ, ಆವರಣದಲ್ಲಿಯೇ ಸ್ಫೂರ್ತಿದಾಯಕವಾಗಿ ನನ್ನ ಪ್ರತಿಮೆ ನಿರ್ಮಿಸುವ ಮೂಲಕ ಅಭಿಮಾನ ಮೆರೆದಿದ್ದಾರೆ. ಅವರ ಅಭಿಮಾನ, ಪ್ರೀತಿಗೆ ನಾನು ಚಿರಋಣಿಯಾಗಿದ್ದೇನೆ ಎಂದರು.

ಇದೇ ವೇಳೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಜೆಡಿಎಸ್ ಮುಖಂಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಚಲುವರಾಜು, ಸಿವಿಲ್ ಎಂಜಿನಿಯರ್ ಅಕ್ಷಯ್ ದಂಪತಿ ಅಭಿನಂದಿಸಿದರು.

ಈ ವೇಳೆ ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ಎ.ಮಲ್ಲೇಶ್, ಗುರುಸ್ವಾಮಿ, ವಿ.ಎಸ್.ನಿಂಗೇಗೌಡ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.