ಸುಹಾಸ್ ಶೆಟ್ಟಿ ಹತ್ಯೆಗೂ ಮುನ್ನ ಆರೋಪಿಗಳ ಭರ್ಜರಿ ಪಾರ್ಟಿ?

| Published : May 06 2025, 12:18 AM IST

ಸುಹಾಸ್ ಶೆಟ್ಟಿ ಹತ್ಯೆಗೂ ಮುನ್ನ ಆರೋಪಿಗಳ ಭರ್ಜರಿ ಪಾರ್ಟಿ?
Share this Article
  • FB
  • TW
  • Linkdin
  • Email

ಸಾರಾಂಶ

ಮೇ 2 ರಂದು ಸುಹಾಸ್ ಶೆಟ್ಟಿ ಹತ್ಯೆಗೆ ಸ್ಕೆಚ್ ರೂಪಿಸಲು ರಹಸ್ಯ ಸ್ಥಳದಲ್ಲಿ ಆರೋಪಿಗಳು ಪಾರ್ಟಿ ಮಾಡಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸುತ್ತಾರೆ. ಚಿಕ್ಕಮಗಳೂರಿನ ಕಳಸದ ರೆಸಾರ್ಟ್ ಒಂದರಲ್ಲಿ ಆರೋಪಿಗಳು ಪಾರ್ಟಿ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆರೋಪಿಗಳು ರಾತ್ರಿ ಪಾರ್ಟಿ ಮಾಡಿರುವ ಫೋಟೋಗಳು ಮಾಧ್ಯಮಗಳಿಗೆ ಲಭಿಸಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಹಿಂದು ಕಾರ್ಯಕರ್ತ ಸುಹಾಸ್‌ ಶೆಟ್ಟಿ ಹತ್ಯೆಗೂ ಮುನ್ನ ಆರೋಪಿಗಳು ಭರ್ಜರಿ ಪಾರ್ಟಿ ಮಾಡಿದ್ದರೇ?

ಮೇ 2 ರಂದು ಹತ್ಯೆಗೆ ಸ್ಕೆಚ್ ರೂಪಿಸಲು ರಹಸ್ಯ ಸ್ಥಳದಲ್ಲಿ ಆರೋಪಿಗಳು ಪಾರ್ಟಿ ಮಾಡಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸುತ್ತಾರೆ.

ಚಿಕ್ಕಮಗಳೂರಿನ ಕಳಸದ ರೆಸಾರ್ಟ್ ಒಂದರಲ್ಲಿ ಆರೋಪಿಗಳು ಪಾರ್ಟಿ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆರೋಪಿಗಳು ರಾತ್ರಿ ಪಾರ್ಟಿ ಮಾಡಿರುವ ಫೋಟೋಗಳು ಮಾಧ್ಯಮಗಳಿಗೆ ಲಭಿಸಿದೆ.

ಕ್ಯಾಂಪ್ ಫೈರ್ ಹಾಕಿ ಭರ್ಜರಿ ಪಾರ್ಟಿ ಮಾಡಿರುವ ಫೋಟೋ ಲಭ್ಯವಾಗಿದ್ದು, ಫಾಸಿಲ್ ಸಹೋದರ ಆದಿಲ್ ನೀಡಿದ ಸುಪಾರಿ ಮೊತ್ತದಲ್ಲಿ ಆರೋಪಿಗಳು ಮಜಾ ಉಡಾಯಿಸಿದ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಸುಹಾಸ್‌ ಹತ್ಯೆಗಾಗಿ ಮೊದಲು ಮೂರು ಲಕ್ಷ ರು. ಮೊತ್ತ ನೀಡಿದ್ದ ಫಾಸಿಲ್ ಸಹೋದರ, ಬಳಿಕ ಅದೇ ಹಣದಲ್ಲಿ ಮೂವರು ಆರೋಪಿಗಳಿಂದ ಕಳಸದಲ್ಲಿ ಪಾರ್ಟಿ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಚಿಕ್ಕಮಗಳೂರು ಮೂಲದ ರಂಜಿತ್ ಜೊತೆ ಸೇರಿ ಪಾರ್ಟಿ ಮಾಡಿದ್ದಾರೆ ಎನ್ನಲಾಗಿದ್ದು, ಕೊಲೆ ಆರೋಪದಲ್ಲಿ ಬಂಧಿತರಾಗಿರುವ ಮೂವರು ಆರೋಪಿಗಳು ಪಾರ್ಟಿಯಲ್ಲಿರುವ ಫೋಟೋ ಲಭ್ಯವಾಗಿದೆ. ಅದೇ ರಹಸ್ಯ ಜಾಗದಲ್ಲಿ ಹತ್ಯೆಗೆ ಪಕ್ಕಾ ಪ್ಲಾನ್ ಸಿದ್ಧಪಡಿಸಿರುವ ಸಾಧ್ಯತೆ ಹೇಳಲಾಗಿದೆ. ಮುಜಮ್ಮಿಲ್, ನಿಯಾಜ್ ಹಾಗೂ ರಂಜಿತ್ ಪಾರ್ಟಿಯಲ್ಲಿ ಭಾಗಿಯಾಗಿದ್ದು, ಈ ಮೂವರ ಜೊತೆ ಇನ್ನೂ ಐದು ಮಂದಿ ಅಪರಿಚಿತರು ಇದ್ದರು ಎಂದು ಹೇಳಲಾಗುತ್ತಿದೆ.

ಇದೇ ಪಾರ್ಟಿಯಲ್ಲಿ ರಂಜಿತ್‌ನನ್ನು ಮುಜಮ್ಮಿಲ್‌ಗೆ ನಿಯಾಜ್‌ ಪರಿಚಯ ಮಾಡಿಸಿದ್ದ. ಈ ವೇಳೆ ಸುಹಾಸ್ ಹತ್ಯೆ ಬಗ್ಗೆ ಮಾತುಕತೆ ನಡೆದಿರುವ ಅನುಮಾನ ಪೊಲೀಸರದ್ದು.

ಸುಹಾಸ್‌ ಹತ್ಯೆಗೆ ವಿದೇಶಿ ಫಂಡಿಂಗ್‌?:

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಗೆ ವಿದೇಶದಿಂದ ಹರಿದು ಬಂದಿತ್ತಾ ಹಣ? ಅಥವಾ ಕೇವಲ 5 ಲಕ್ಷ ರು.ಗೆ ಸುಹಾಸ್ ಶೆಟ್ಟಿ ಹತ್ಯೆ ನಡೆಸಲಾಯ್ತಾ? ಈ ಕೃತ್ಯದ ಹಿಂದೆ ಅನೇಕ ಕಾಣದ ಕೈಗಳ ಕೈವಾಡದ ಶಂಕೆ ಇದ್ದು, ಪೊಲೀಸರು ವಿವಿಧ ಬ್ಯಾಂಕ್ ಖಾತೆಗಳ ಪರಿಶೀಲನೆ ನಡೆಸಲು ಮುಂದಾಗಿದ್ದಾರೆ.

ಸುಹಾಸ್ ಶೆಟ್ಟಿಯನ್ನ ಹತ್ಯೆ ಮಾಡಲೇ ಬೇಕು ಎಂದು ಪಕ್ಕಾ ಪ್ಲಾನ್ ಮಾಡಿಕೊಂಡಿದ್ದ ತಂಡ, ಹತ್ಯೆ ನಡೆಸಲು ನೆರವು ನೀಡುವಂತೆ ಪ್ರಮುಖ ಆರೋಪಿ ಸಫ್ವಾನ್‌ ಅನೇಕರನ್ನು ಸಂಪರ್ಕಿಸಿದ್ದ. ಮುಜಾಮಿಲ್ ಮೂಲಕ ವಿದೇಶದಲ್ಲಿರುವ ಹಲವರಿಂದ ಹಣಕಾಸು ನೆರವು ಪಡೆದಿರುವ ಶಂಕೆ ಇದೆ. ಸಂಪರ್ಕದ ವೇಳೆ ಜೈಲ್ - ಬೇಲ್ ನೆರವಿಗಾಗಿ ಸಫ್ವಾನ್‌ ಕೈಚಾಚಿದ್ದ. ಹತ್ಯೆಯಾದ ಕೂಡಲೇ ಸರೆಂಡರ್ ಆಗುವ ಬಗ್ಗೆಯೂ ಈ ಹಂತಕರ ತಂಡ ಚರ್ಚೆ ನಡೆಸಿತ್ತು ಎಂದು ತಿಳಿಯಲಾಗಿದೆ. ಬಿ ಪ್ಲಾಸ್‌ ಕೂಡ ರೆಡಿಯಾಗಿತ್ತು!: ಜನವರಿಯಲ್ಲೇ ಸಫ್ವಾನ್ ತಂಡಕ್ಕೆ ಫಾಜಿಲ್‌ ತನ್ನ ಅದಿಲ್‌ 3 ಲಕ್ಷ ರು. ಹಣ ನೀಡಿದ್ದ. ಅಲ್ಲದೆ ಕೃತ್ಯಕ್ಕಾಗಿ ಒಂದು ಪಿಕ್ ಅಪ್ ವಾಹನ, ಸ್ವಿಫ್ಟ್ ಕಾರ್ ಬಳಕೆಗೆ ಸೂಚಿಸಿದ್ದ. ಅಕಸ್ಮಾತ್ ಸುಹಾಸ್ ಶೆಟ್ಟಿ ತಪ್ಪಿಸಿಕೊಂಡರೆ ಪ್ಲಾನ್ ಬಿ ಅನ್ನೂ ತಂಡ ಸಿದ್ಧಪಡಿಸಿತ್ತು. ಹಂತಕರಿಗೆ ಬೇಕಾದ ಎಲ್ಲ ವ್ಯವಸ್ಥೆಯನ್ನೂ ಕಾಣದ ಕೈಗಳ ಗುಂಪು ಮಾಡಿತ್ತು ಎಂದು ಹೇಳಲಾಗುತ್ತಿದೆ. ಅಲ್ಲದೆ ಹಿಂದು ಕಾರ್ಯಕರ್ತನ ನೆತ್ತರು ಹರಿಸಲು ವಿದೇಶದಿಂದಲೂ ಹಣ ಹರಿದು ಬಂದಿತ್ತಾ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸುಹಾಸ್ ಶೆಟ್ಟಿ ಬರ್ಬರ ಹತ್ಯೆಗೆ ಮೂರು ತಿಂಗಳ ಹಿಂದೆಯೇ ಡೆಡ್ಲಿ ಟೀಮ್ ಸಿದ್ಧಪಡಿಸಿದ್ದ ಸಫ್ವಾನ್, ಸುಹಾಸ್ ಶೆಟ್ಟಿ ಚಲನವಲನದ ಮೇಲೆ ದೃಷ್ಠಿ ಇರಿಸಿದ್ದ. 15 ದಿನಗಳಿಂದ ಸುಹಾಸ್ ಶೆಟ್ಟಿಯ ಚಲನವಲನದ ಬಗ್ಗೆ ಹುಡುಗರನ್ನು ಬಿಟ್ಟು ರೇಖಿ ಮಾಡಿಸಿದ್ದ ಸಫ್ವಾನ್. 15 ದಿನಗಳ ಹಿಂದೆಯೇ ಹಂತಕರ ತಂಡ ಸುಹಾಸ್ ಶೆಟ್ಟಿಗಾಗಿ ಹೊಂಚು ಹಾಕುತ್ತಿತ್ತು. ಆರೋಪಿಗಳಾದ ಕಳಸದ ರಂಜಿತ್‌ ಮತ್ತು ನಾಗರಾಜ್‌ ಇವರು 15 ದಿನಗಳಿಂದಲೇ ಸಫ್ವಾನ್‌ನ ಮನೆಯಲ್ಲಿದ್ದರು. ಈ ವೇಳೆ

ಸುಹಾಸ್ ಶೆಟ್ಟಿ ಬಜಪೆಗೆ ಬರುವ ಬಗ್ಗೆ ಸ್ಥಳೀಯ ಆರೋಪಿ ಅಜರುದ್ದೀನ್‌ ಮಾಹಿತಿ ನೀಡಿದ್ದ. ಸುಹಾಸ್‌ ಎಷ್ಟು ಗಂಟೆಗೆ ಹೊರಡುತ್ತಾನೆ, ಅವನೊಂದಿಗೆ ಯಾರಿದ್ದಾರೆ ಎಂಬುದನ್ನು ಸಫ್ವಾನ್‌ಗೆ ಅಜರುದ್ದೀನ್‌ ಮಾಹಿತಿ ನೀಡಿದ್ದ.

ಸುಹಾಸ್‌ ಶೆಟ್ಟಿ ಹತ್ಯೆಯಾಗುತ್ತಿದ್ದಂತೆ ಅಜರುದ್ದೀನ್‌ ತಲೆ ಮರೆಸಿಕೊಂಡಿದ್ದಾನೆ. ಈತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಸುಖಾನಂದ ಶೆಟ್ಟಿ ಹತ್ಯೆ ಆರೋಪಿಯೇ ಗೈಡ್‌?:

19 ವರ್ಷಗಳ ಹಿಂದಿನ ಬಿಜೆಪಿ ಮುಖಂಡನ ಹತ್ಯೆ ಆರೋಪಿಯೇ ಸುಹಾಸ್ ಹತ್ಯೆ ಗೈಡ್ ಎಂದು ಹೇಳಲಾಗುತ್ತಿದ್ದು, ಪೊಲೀಸರು ಈ ಬಗ್ಗೆ ತನಿಖೆ ತೀವ್ರಗೊಳಿಸಿದ್ದಾರೆ.

ಬಿಜೆಪಿ ಮುಖಂಡ ಸುಖಾನಂದ ಶೆಟ್ಟಿ ಹತ್ಯೆ ಆರೋಪಿಯಿಂದ ಸುಹಾಸ್ ಶೆಟ್ಟಿ ಹತ್ಯೆಗೆ ಪಕ್ಕಾ ಸ್ಕೆಚ್ ಆಗಿದೆ ಎಂದು ಹೇಳಲಾಗುತ್ತಿದೆ. 2006ರಲ್ಲಿ ರಾಜ್ಯದಲ್ಲಿ ಸುಖಾನಂದ ಶೆಟ್ಟಿ ಹತ್ಯೆ ಭಾರೀ ಸಂಚಲನ ಮೂಡಿಸಿತ್ತು. ಸುಖಾನಂದ ಶೆಟ್ಟಿ ಹತ್ಯೆ ಮಾದರಿಯಲ್ಲೇ ಸುಹಾಸ್ ಶೆಟ್ಟಿ ಹತ್ಯೆ ಕೂಡ ನಡೆಸಲಾಗಿದೆ. 2006ರ ಡಿಸೆಂಬರ್ 1ರಂದು ಮಂಗಳೂರಿನ ಕುಳಾಯಿ ಬಳಿ ಸುಖಾನಂದ ಶೆಟ್ಟಿ ಹತ್ಯೆ ನಡೆದಿತ್ತು. ಈ ಹತ್ಯೆಯಲ್ಲಿ ಪ್ರಮುಖ ಆರೋಪಿಯಾಗಿದ್ದ ನಟೋರಿಯಸ್ ನೌಶದ್, ಸುಹಾಸ್ ಶೆಟ್ಟಿ ಕೊಲೆ ಆರೋಪಿ ನಿಯಾಜ್‌ನ ಸಂಬಂಧಿ‌. ಸುಹಾಸ್ ಶೆಟ್ಟಿ ಹತ್ಯೆಗೆ ಮುನ್ನ ನೌಷದ್‌ನನ್ನು ಸಫ್ವಾನ್‌ ತಂಡ ಸಂಪರ್ಕಿಸಿತ್ತು. ಕುಳಾಯಿಯ ಮಾರ್ಬಲ್ ಟ್ರೇಡಿಂಗ್ ಕಂಪನಿ ಬಳಿ ಕ್ವಾಲಿಸ್ ವಾಹನದಲ್ಲಿ ಬಂದು ಸುಖಾನಂದ ಶೆಟ್ಟಿ ಹತ್ಯೆ ಮಾಡಲಾಗಿತ್ತು. ಅದೇ ಮಾದರಿಯಲ್ಲಿ ಪ್ಲಾನ್ ರೂಪಿಸಲು ನೌಷದ್ ಬಳಿಗೆ ಈ ತಂಡ ಬಂದಿತ್ತು. ಈ ವೇಳೆ ಸಫ್ವಾನ್ ತಂಡಕ್ಕೆ ‌ಹತ್ಯೆ ಪ್ಲಾನ್ ಬಗ್ಗೆ ಗೈಡ್ ನೌಷದ್ ಮಾರ್ಗದರ್ಶನ ಮಾಡಿದ್ದ. ಕಾರುಗಳ ಬಳಕೆ, ಎಂಟ್ರಿ ಮತ್ತು ಎಕ್ಸಿಟ್‌ಗಳ ಬಗ್ಗೆ ನೌಷದ್ ತಿಳಿಸಿದ್ದ. ಲೊಕೇಶನ್ ಮ್ಯಾಪ್ ಜೊತೆ ಇಡೀ ಹತ್ಯೆ ಪ್ಲಾನ್ ಬಗ್ಗೆ ನೌಷದ್‌ ವಿವರಿಸಿದ್ದ. ಅದರಂತೆಯೇ ಸುಹಾಸ್ ಶೆಟ್ಟಿ ಹತ್ಯೆ ಸ್ಕೆಚ್ ರೂಪುಗೊಂಡಿತ್ತು ಎಂದು ಹೇಳಲಾಗಿದೆ. ಸುಖಾನಂದ ಶೆಟ್ಟಿ ಹತ್ಯೆ ಕೇಸ್ ನಲ್ಲಿ 23 ಆರೋಪಿಗಳ ಬಂಧನವಾಗಿತ್ತು. ಇದರಲ್ಲಿ ಮೂಲ್ಕಿ ರಫೀಕ್ ಹಾಗೂ ಅತಿಕ್ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದರು. ಉಳಿದ ಆರೋಪಿಗಳನ್ನು 2018ರಲ್ಲಿ ಮಂಗಳೂರು ಕೋರ್ಟ್ ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ಖುಲಾಸೆ ಮಾಡಿತ್ತು. ಆ ಬಳಿಕ ಮತ್ತೆ ನೌಷದ್ ಕ್ರಿಮಿನಲ್ ಚಟುವಟಿಕೆಗಳಿಗೆ ಇಳಿದಿರುವ ಸಾಧ್ಯತೆ ಇದೆ.