ಹೊಸಕೋಟೆ: ಇತ್ತೀಚಿನ ದಿನಗಳಲ್ಲಿ ಪೌಷ್ಟಿಕ ರಹಿತ ಆಹಾರ ಮತ್ತು ಒತ್ತಡದ ಜೀವನ ಶೈಲಿಯಿಂದ ಸಾಕಷ್ಟು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಭಕ್ತರಹಳ್ಳಿ ರಾಮಚಂದ್ರ ತಿಳಿಸಿದರು

ಹೊಸಕೋಟೆ: ಇತ್ತೀಚಿನ ದಿನಗಳಲ್ಲಿ ಪೌಷ್ಟಿಕ ರಹಿತ ಆಹಾರ ಮತ್ತು ಒತ್ತಡದ ಜೀವನ ಶೈಲಿಯಿಂದ ಸಾಕಷ್ಟು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಭಕ್ತರಹಳ್ಳಿ ರಾಮಚಂದ್ರ ತಿಳಿಸಿದರು.

ತಾಲೂಕಿನ ಭಕ್ತರಹಳ್ಳಿ ಗ್ರಾಮದಲ್ಲಿ ಆದಿತ್ಯ ಬಿರ್ಲಾ ಪ್ಯಾಷನ್ ಆ್ಯಂಡ್ ರಿಟೇಲ್ ಜನ ಕಲ್ಯಾಣ ಟ್ರಸ್ಟ್ ನ ಸಿಎಸ್‌ಆರ್ ಅನುದಾನದಡಿ ನೇತ್ರ ತಪಾಸಣೆ ಮಾಡಿಸಿ ಅಗತ್ಯವುಳ್ಳವರಿಗೆ ಕನ್ನಡಕ ವಿತರಿಸಿ ಮಾತನಾಡಿದ ಅವರು, ಪ್ರಸ್ತುತ ಮನುಷ್ಯ ಮಧುಮೇಹ, ರಕ್ತದೊತ್ತಡ, ಕಣ್ಣಿನ ಸಮಸ್ಯೆ, ಹಲ್ಲಿನ ಸಮಸ್ಯೆ ಸೇರಿ ಮೂಳೆ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆ. ಆದ್ದರಿಂದ ಸ್ವಯಂ ಸೇವಾ ಸಂಸ್ಥೆಗಳು, ವಿವಿಧ ಖಾಸಗಿ ಆಸ್ಪತ್ರೆಗಳು ಗ್ರಾಮೀಣ ಭಾಗಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು. ಆದಿತ್ಯ ಬಿರ್ಲಾ ಪ್ಯಾಷನ್ ಆ್ಯಂಡ್ ರಿಟೇಲ್ ಜನ ಕಲ್ಯಾಣ ಟ್ರಸ್ಟ್ನ ಸಿಎಸ್‌ಆರ್ ವ್ಯವಸ್ಥಾಪಕ ಮುನಿರಾಜು ಮಾತನಾಡಿ, ತಾಲೂಕಿನ ಪ್ರತಿ ಗ್ರಾಮವನ್ನು ಅಂಧತ್ವ ರಹಿತವನ್ನಾಗಿಸುವ ಆಶಯದಿಂದ ಪ್ರತಿ ಹಳ್ಳಿಯಲ್ಲೂ ಮನೆ ಬಾಗಿಲಿಗೆ ತೆರಳಿ ಕಣ್ಣಿನ ತಪಾಸಣೆ ಮಾಡುವ ಶಿಬಿರಗಳನ್ನು ಆಯೋಜಿಸುತ್ತಿದ್ದೇವೆ. ಗ್ರಾಮಸ್ಥರು ಕೀಳರಿಮೆ ತೊರೆದು ತಪಾಸಣೆ ಮಾಡಿಸಿಕೊಂಡು ಅಗತ್ಯವಿದ್ದರೆ ಚಿಕಿತ್ಸೆಗೂ ಸಹಕರಿಸಬೇಕು ಎಂದು ಹೇಳಿದರು.