ಸೋದರತೆ ಸಂಬಂಧಗಳನ್ನು ಬೆಸೆಯುವ ಹಬ್ಬ ಇದಾಗಿದ್ದು, ಇಲ್ಲಿನ ಅಂಗಡಿಗಳಲ್ಲಿ ವಿವಿಧ ನಮೂನೆಯ ರಕ್ಷೆಗಳು ಜನರನ್ನು ಆಕರ್ಷಿಸುತ್ತಿದೆ.
ಗೋಕರ್ಣ: ರಕ್ಷಾ ಬಂಧನ ಹಬ್ಬ ಹತ್ತಿರವಾಗುತ್ತಿದ್ದಂತೆ ಮಾರುಕಟ್ಟೆಗೆ ಬಗೆ ಬಗೆಯ ರಕ್ಷೆ (ರಾಖಿ)ಗಳು ಮಾರಾಟಕ್ಕೆ ಬಂದಿದೆ.
ಸೋದರತೆ ಸಂಬಂಧಗಳನ್ನು ಬೆಸೆಯುವ ಹಬ್ಬ ಇದಾಗಿದ್ದು, ಇಲ್ಲಿನ ಅಂಗಡಿಗಳಲ್ಲಿ ವಿವಿಧ ನಮೂನೆಯ ರಕ್ಷೆಗಳು ಜನರನ್ನು ಆಕರ್ಷಿಸುತ್ತಿದೆ. ಈಗಾಗಲೇ ಜನರು ಅಂಗಡಿಗಳಲ್ಲಿ ತಮಗೆ ಇಷ್ಟವಾದ ರಾಖಿ ಖರೀದಿಗೆ ಆಗಮಿಸುತ್ತಿದ್ದಾರೆ.ಈ ಬಾರಿ ಒಂದು ರಕ್ಷೆಗೆ ₹5ರಿಂದ ₹150ರ ವರೆಗೆ ದರ ನಿಗದಿಯಾಗಿದೆ. ಪತ್ವಾ ರಾಖಿ, ಮೋತಿ ರಾಖಿ, ಮಕ್ಕಳ ಸಣ್ಣ ರಾಖಿ ಸೇರಿದಂತೆ ಹಲವು ಹೆಸರುಗಳನ್ನು ಹೊಂದಿದೆ.
ಈ ಬಗ್ಗೆ ಸ್ಥಳೀಯರ ವ್ಯಾಪಾರಿ ವಿನೋದ ಭೋಮಕರ ಪ್ರತಿಕ್ರಿಯಿಸಿ, ವರ್ಷದಿಂದ ವರ್ಷಕ್ಕೆ ರಾಖಿ ವ್ಯಾಪಾರ ಕಡಿಮೆಯಾಗುತ್ತಿದೆ. ಈ ಮೊದಲು ಮಕ್ಕಳಲ್ಲಿದ್ದ ಖರೀದಿ ಉತ್ಸಾಹ ಈಗ ಕಾಣುತ್ತಿಲ್ಲ. ಇನ್ನೂ ಹಬ್ಬಕ್ಕೆ ಒಂದು ದಿನವಿದ್ದು ತಕ್ಕಮಟ್ಟಿನ ವ್ಯಾಪಾರದ ನಿರೀಕ್ಷೆಯಲ್ಲಿದ್ದೇವೆ ಎಂದಿದ್ದಾರೆ.ಈ ಹಿಂದೆ ದೂರದ ಊರಿನಲ್ಲಿ ವಾಸಿಸುವ ಸಹೋದರಿಯರು ಅಂಚೆ ಮೂಲಕ ತಮ್ಮ ಸಹೋದರರಿಗೆ ರಾಖಿ ಕಳುಹಿಸುತ್ತಿದ್ದರು. ಆದರೆ ಪ್ರಸ್ತುತ ಈ ಪರಿಪಾಠ ಕಡಿಮೆಯಾಗಿದೆ. ವರ್ಷಕ್ಕೊಮ್ಮೆ ನಡೆಯುವ ಈ ಹಬ್ಬ ವ್ಯಾಪಾರಸ್ಥರಿಗೂ ನಿರೀಕ್ಷಿತ ವಹಿವಾಟು ಇಲ್ಲದೆ ನಿರಾಸೆ ತಂದಿದೆ.