ದಿಗಂಬರೇಶ್ವರ ಮಠದ ಜಾತ್ರಾ ಮಹೋತ್ಸವ

| Published : May 13 2024, 01:03 AM IST

ಸಾರಾಂಶ

ಬಾಗಲಕೋಟೆ ನಗರದ ನವನಗರ ರಸ್ತೆಯಲ್ಲಿರುವ ಶ್ರೀದಿಗಂಬರೇಶ್ವರ ಮಠದ ಮಹಾರಥೋತ್ಸವ ಭಾನುವಾರ ಸಂಜೆ ಅದ್ಧೂರಿಯಾಗಿ ಜರುಗಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ ನಗರದ ನವನಗರ ರಸ್ತೆಯಲ್ಲಿರುವ ಶ್ರೀದಿಗಂಬರೇಶ್ವರ ಮಠದ ಮಹಾರಥೋತ್ಸವ ಭಾನುವಾರ ಸಂಜೆ ಅದ್ಧೂರಿಯಾಗಿ ಜರುಗಿತು.

ಶ್ರೀ ಮಠದ ಮುಂಭಾಗವಿರುವ ಕೆಂಪು ರಸ್ತೆಯಲ್ಲಿ ರಥೋತ್ಸವ ಜರುಗಿತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಪುನಿತರಾದರು. ಸಂಜೆ 5 ಗಂಟೆ ವೇಳೆಗೆ ಶ್ರೀದಿಗಂಬರೇಶ್ವರ, ಶ್ರೀಮಾತಾ ಕಪ್ಪರ ಪಡಿಯಮ್ಮನವರ ಉತ್ಸವ ಮೂರ್ತಿಗಳಿಗೆ, ತೇರಿನ ಕಳಸಕ್ಕೆ ಪೂಜೆ ಸಲ್ಲಿಸಿ, ತೇರಿನ ಕಳಸದ ಪ್ರತಿಷ್ಠಾಪನೆಯೊಂದಿಗೆ 9ನೇ ವರ್ಷದ ಮಹಾರಥೋತ್ಸವ ಜರುಗಿತು.

ಶ್ರೀ ಬಸವರಾಜಪ್ಪನವರ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೀಳಗಿ ತಾಲೂಕು ಗಿರಿಸಾಗರದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ನಾಗರಾಳದ ಶ್ರೀಶೇಷಪ್ಪಯ್ಯ ಸ್ವಾಮೀಜಿ, ಬಾದಾಮಿ ತಾಲೂಕು ಹಲಕುರ್ಕಿಯ ಶ್ರೀಷಡಕ್ಷರಿ ಸ್ವಾಮೀಜಿ, ಬೀಳಗಿ ತಾಲೂಕು ಸುನಗದ ಶ್ರೀಹನಮಂತಮಹಾರಾಜರು, ಮುಧೋಳ ತಾಲೂಕು ಯಡಹಳ್ಳಿ-ಇಂಗಳಗಿಯ ಶ್ರೀಗುರು ಅಡವಿ ಸಿದ್ದೇಶ್ವರ ಸ್ವಾಮೀಜಿ ಸೇರಿದಂತೆ ಗಣ್ಯರು ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಶ್ರೀಬಸಪ್ಪಜ್ಜನವರ ಕುರಿತಾದ ಗ್ರಂಥ ಲೋಕಾರ್ಪಣೆಗೊಳಿಸಲಾಯಿತು.