ಗಣ್ಯರಿಂದ ಶಾಸಕ ಪುಟ್ಟರಂಗಶೆಟ್ಟಿ ಪುತ್ರ ಚಾಮರಾಜು ಅಂತಿಮ ದರ್ಶನ

| Published : May 14 2025, 12:11 AM IST

ಗಣ್ಯರಿಂದ ಶಾಸಕ ಪುಟ್ಟರಂಗಶೆಟ್ಟಿ ಪುತ್ರ ಚಾಮರಾಜು ಅಂತಿಮ ದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ಯಳಂದೂರು ತಾಲೂಕಿನ ಉಪ್ಪಿನಮೋಳೆಯಲ್ಲಿ ಶಾಸಕ ಪುಟ್ಟರಂಗಶೆಟ್ಟಿ ಪುತ್ರ ಚಾಮರಾಜ್‌ ಅಂತಿಮ ದರ್ಶನವನ್ನು ಸಮಾಜಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಪಡೆದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಎಂಎಸ್‌ಐಎಲ್ ಅಧ್ಯಕ್ಷ, ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಹಿರಿಯ ಪುತ್ರ ಪಿ.ಚಾಮರಾಜು ಅವರ ಅಂತ್ಯಕ್ರಿಯೆ ಸ್ವಗ್ರಾಮವಾದ ಯಳಂದೂರು ತಾಲೂಕಿನ ಉಪ್ಪಿನಮೋಳೆಯಲ್ಲಿ ಮಂಗಳವಾರ ನೆರವೇರಿತು.ಅನಾರೋಗ್ಯದಿಂದ ಬಳಲುತ್ತಿದ್ದ ಮೃತರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ನಿಧನರಾಗಿದ್ದರು. ಮೃತರ ಸ್ವಗ್ರಾಮವಾದ ಉಪ್ಪಿನಮೋಳೆಯ ಪುಟ್ಟರಂಗಶೆಟ್ಟಿ ಮನೆ ಹಿಂಭಾಗದ ತೋಟದಲ್ಲೇ ಚಾಮರಾಜು ಅಂತ್ಯಕ್ರಿಯೆ ಜರುಗಿತು. ಅಂತ್ಯಕ್ರಿಯೆಯಲ್ಲಿ ಅಪಾರ ಜನಸ್ತೋಮ ನೆರೆದಿತ್ತು.

ಅಂತಿಮ ದರ್ಶನ:

ಹೊಸದುರ್ಗ ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಹಾಗೂ ಕ್ರಿಶ್ಚಿಯನ್ ಧರ್ಮಗುರು, ಮುಸ್ಲಿಂ ಧರ್ಮದ ಗುರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ, ಸಂಸದ ಸುನೀಲ್‌ ಬೋಸ್, ಶಾಸಕರಾದ ಯತೀಂದ್ರ ಸಿದ್ದರಾಮಯ್ಯ, ಎ.ಆರ್.ಕೃಷ್ಣಮೂರ್ತಿ, ಗಣೇಶ್‌ ಪ್ರಸಾದ್, ಎಂ.ಆರ್.ಮಂಜುನಾಥ್, ಡಾ.ತಿಮ್ಮಯ್ಯ, ದರ್ಶನ್ ಧ್ರುವನಾರಾಯಣ್, ಅನಿಲ್ ಚಿಕ್ಕಮಾಧು, ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಕಾಡಾಧ್ಯಕ್ಷ ಪಿ.ಮರಿಸ್ವಾಮಿ, ಮಾಜಿ ಸಚಿವರಾ ಎಚ್.ಡಿ.ಕೋಟೆ ಎಂ.ಶಿವಣ್ಣ, ಎನ್.ಮಹೇಶ್, ಮಾಜಿ ಶಾಸಕರಾದ ಜಿ.ಎನ್.ನಂಜುಂಡಸ್ವಾಮಿ, ಎಸ್.ಬಾಲರಾಜ್, ಸಿ.ಎನ್.ನಿರಂಜನ್‌ಕುಮಾರ್, ಆರ್.ನರೇಂದ್ರ, ಜಿಪಂ ಮಾಜಿ ಅಧ್ಯಕ್ಷ ರಾದ ಎಂ.ರಾಮಚಂದ್ರ, ಶೈಲಜಾಮಲ್ಲೇಶ್, ಮುಖಂಡರಾದ ಕೆಲ್ಲಂಬಳ್ಳಿ ಸೋಮನಾಯಕ, ವೆಂಕಟರಮಣಸ್ವಾಮಿ (ಪಾಪು), ಮಂಗಲ ಶಿವಕುಮಾರ್, ಬೂದಿತಿಟ್ಟು ಲಿಂಗರಾಜು, ಮಾಂಬಳ್ಳಿ ನಂಜುಂಡಸ್ವಾಮಿ, ರವಿಗೌಡ, ಜಿಲ್ಲಾ ಉಪ್ಪಾರ ಯುವಕರ ಸಂಘದ ಜಿಲ್ಲಾಧ್ಯಕ್ಷ ಎಂ ಜಯಕುಮಾರ್ ಉಪಾಧ್ಯಕ್ಷ ಬಿ. ಸ್ವಾಮಿ, ಪ್ರಧಾನ ಕಾರ್ಯದರ್ಶಿ ಸಿ ಎಸ್ ನಾಗರಾಜ್, ಶಿವಕುಮಾರ್, ಮಹದೇವಸ್ವಾಮಿ, ಅಂಕಪ್ಪ, ಫೈನಾಪಲ್ ಮಂಜು ಸೇರಿದಂತೆ ಪಕ್ಷಾತೀತವಾಗಿ ಎಲ್ಲ ಪಕ್ಷದ ಪ್ರಮುಖರು ಅಂತಿಮ ದರ್ಶನ ಪಡೆದರು.

ಚಾಮರಾಜ್ ನಿಧನಕ್ಕೆ ಈಶ್ವರ್‌ ಖಂಡ್ರೆ ಸಂತಾಪ:

ಚಾಮರಾಜನಗರ: ಇಲ್ಲಿನ ಕಾಂಗ್ರೆಸ್ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರ ಪುತ್ರ ಪಿ.ಚಾಮರಾಜ್ (೪೨) ನಿಧನಕ್ಕೆ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸಂತಾಪ ಸೂಚಿಸಿದ್ದಾರೆ. ಸಹೃದಯಿ ಪುಟ್ಟರಂಗಶೆಟ್ಟಿ ಅವರ ಹಿರಿಯ ಮಗ ಚಾಮರಾಜ್ ನಿಧನದ ಸುದ್ದಿ ತಿಳಿದು ತೀವ್ರ ದುಃಖವಾಯಿತು. ಪುತ್ರ ಶೋಕವನ್ನು ತಾಳಿಕೊಳ್ಳುವ ಶಕ್ತಿಯನ್ನು ಭಗವಂತ ಪುಟ್ಟರಂಗಶೆಟ್ಟಿ ಅವರಿಗೆ ಕರುಣಿಸಲಿ. ಮೃತ ಚಾಮರಾಜ್ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಅವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.