ಸಾರಾಂಶ
ಎರಡು ವರ್ಷಗಳ ಹಿಂದೆ ಮೊಬೈಲ್ ಫೋನ್ ಮೂಲಕ ಪರಿಚಯವಾದ ದೀಕ್ಷಿತಾ ಅವರನ್ನು ಪ್ರೀತಿಸಿ, ಕಳೆದ ಜ.27 ರಂದು ಪರಸ್ಪರ ಒಪ್ಪಿ ದೇವಸ್ಥಾನದಲ್ಲಿ ಮದುವೆಯಾಗಿದ್ದರು
ಕನ್ನಡಪ್ರಭ ವಾರ್ತೆ ಮೈಸೂರು
ಹುಣಸೂರು ತಾಲೂಕು ಶ್ರವಣಹಳ್ಳಿ ನಿವಾಸಿ ಎಸ್.ಪಿ. ಅರುಣ್ ಕುಮಾರ್ ಎಂಬವರ ಪತ್ನಿ ದೀಕ್ಷಿತಾ(19) ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನಾಪತ್ತೆಯಾಗಿದ್ದಾರೆ.ಎರಡು ವರ್ಷಗಳ ಹಿಂದೆ ಮೊಬೈಲ್ ಫೋನ್ ಮೂಲಕ ಪರಿಚಯವಾದ ದೀಕ್ಷಿತಾ ಅವರನ್ನು ಪ್ರೀತಿಸಿ, ಕಳೆದ ಜ.27 ರಂದು ಪರಸ್ಪರ ಒಪ್ಪಿ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಈ ನಡುವೆ ಹಳ್ಳಿ ಜೀವನ ಕಷ್ಟ, ಸಿಟಿ ಹೋಗಿ ಜೀವನ ಮಾಡೋಣ ಎಂದು ಜಗಳ ಮಾಡುತ್ತಿದ್ದರು. ಹೀಗಿರುವಾಗ ಫೆ.14 ರಂದು ಚಾಮುಂಡಿಬೆಟ್ಟಕ್ಕೆ ಇಬ್ಬರು ಹೋಗಿದ್ದಾಗ ಪತ್ನಿ ದೀಕ್ಷಿತಾ ಕಾಣೆಯಾಗಿರುವುದಾಗಿ ಅರುಣ್ ಕುಮಾರ್ ದೂರು ನೀಡಿದ್ದಾರೆ.ಚಹರೆ- ಎಣ್ಣೆಗೆಂಪು ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು, ಎಡಗೈಯಲ್ಲಿ ಎಲೆ ಚಿತ್ರ, ಪೂ ಎಂಬ ಟ್ಯಾಟೂ ಗುರುತಿದೆ. ಕನ್ನಡ ಮಾತನಾಡುತ್ತಾರೆ. ಕಾಣೆಯಾದ ದಿನ ನೀಲಿ ಕಲರ್ ಟಾಪ್, ಕಪ್ಪು ಬಣ್ಣದ ಲೆಗ್ಗಿನ್ಸ್ ಧರಿಸಿದ್ದರು. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2418319 ಸಂಪರ್ಕಿಸಲು ಕೆ.ಆರ್. ಠಾಣೆಯ ಪೊಲೀಸರು ಕೋರಿದ್ದಾರೆ.