ದಿಂಡಿ ಸೋಹಳಾ ಸಪ್ತಾಹ ಸಂಪನ್ನ

| Published : Mar 30 2024, 12:46 AM IST

ಸಾರಾಂಶ

ಪಾಲಬಾವಿ ತಾಲೂಕಿನ ಕಪ್ಪಲಗುದ್ದಿ ಗ್ರಾಮದಲ್ಲಿ ಹರಿಭಕ್ತ ಸಂಪ್ರದಾಯ ಮಂಡಳಿಯವರ ನೇತೃತ್ವದಲ್ಲಿ ಸಂತ ಶಿರೋಮಣಿ ಶ್ರೀ ತುಕಾರಾಮ ಮಹಾರಾಜರ ಹರಿಭಕ್ತ ಸಪ್ತಾಹ ಮೂರು ಮೂರು ದಿನಗಳ ವರೆಗೆ ಸಂಭ್ರಮದಿಂದ ಜರುಗಿತು.

ಕನ್ನಡಪ್ರಭ ವಾರ್ತೆ ಪಾಲಬಾವಿ

ತಾಲೂಕಿನ ಕಪ್ಪಲಗುದ್ದಿ ಗ್ರಾಮದಲ್ಲಿ ಹರಿಭಕ್ತ ಸಂಪ್ರದಾಯ ಮಂಡಳಿಯವರ ನೇತೃತ್ವದಲ್ಲಿ ಸಂತ ಶಿರೋಮಣಿ ಶ್ರೀ ತುಕಾರಾಮ ಮಹಾರಾಜರ ಹರಿಭಕ್ತ ಸಪ್ತಾಹ ಮೂರು ಮೂರು ದಿನಗಳ ವರೆಗೆ ಸಂಭ್ರಮದಿಂದ ಜರುಗಿತು.

ಗುರುವಾರ ಸಂಜೆ 7ಗಂಟೆಗೆ ವೀಣಾ ಪೂಜೆಯೊಂದಿಗೆ ಸತ್ಸಂಗ ಕಾರ್ಯಕ್ರಮ ಆರಂಭಗೊಂಡಿತು. ರಾತ್ರಿ ಹರಿಭಕ್ತ ಸಂಪ್ರದಾಯದ ಪದ್ಧತಿಯಂತೆ ಕೀರ್ತನೆ, ಭಜನೆ, ಜಾಗರಣೆ ಪಾಂಡುರಂಗನ ನಾಮಸ್ಮರಣೆ ಜರುಗಿದವು. ಸಂಜೆ ಕೀರ್ತನೆ, ಭಜನೆ ಅಭಂಗ ಪಠಣ, ಸತ್ಸಂಗ, ಜಾಗರಣೆ ಜರುಗಿದವು. ಶುಕ್ರವಾರ ಮುಂಜಾನೆ 6ಕ್ಕೆ ನಾಲ್ಕು ದೇವರ ದೇವಸ್ಥಾನದಲ್ಲಿಯ ಶ್ರೀ ಬರಮಲಿಂಗೇಶ್ವರ, ಶ್ರೀ ಹನುಮಾನ ದೇವರ, ಶ್ರೀ ಮಲ್ಲಿಕಾರ್ಜುನ ದೇವರ, ಶ್ರೀ ಪಾಂಡುರಂಗ ವಿಠ್ಠಲ ದೇವರ ಹೀಗೆ ನಾಲ್ಕು ದೇವರುಗಳ ಕರ್ತೃ ಗದ್ದುಗೆಗೆ ಅಭಿಷೇಕ, ವಸ್ತ್ರಧಾರಣೆ, ಫಲಪುಷ್ಪ, ನೈವೇದ್ಯ ಸಮರ್ಪಣೆ ಜರುಗಿದವು. ಬೆಳಗ್ಗೆ 11ಗಂಟೆಗೆ ದಿಂಡಿ ಸೋಹಾಳಾ ಸತ್ಸಂಗ ಕಾರ್ಯಕ್ರಮದಲ್ಲಿ ಶರಣ, ಸಂತ ಮಹಾಂತರು ಪಾಲ್ಗೊಂಡು ಪ್ರವಚನ ಕಾರ್ಯಕ್ರಮ ನಡೆಸಿಕೊಟ್ಟರು. ಮುಂಜಾನೆ 9ಕ್ಕೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಾಂಡುರಂಗ ವಿಠಲನ ಭಕ್ತ ಸಂತಶ್ರೇಷ್ಠ ತುಕಾರಾಮ ಮಹಾರಾಜರ ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮುಂಜಾನೆ 12ಕ್ಕೆ ಪುಷ್ಪವೃಷ್ಠಿಯೊಂದಿಗೆ ಕಾರ್ಯಕ್ರಮ ಮಂಗಳವಾಯಿತು.