ಸಾರಾಂಶ
ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿನಾವು ನೀಡುವ ರಕ್ತದಿಂದ ಒಂದು ಜೀವ ಉಳಿಯುತ್ತೆ ಅನ್ನುವುದಾದರೆ ಅದಕ್ಕಿಂತ ಮಹತ್ಕಾರ್ಯ ಇನ್ನೊಂದಿಲ್ಲ ಅದರಲ್ಲೂ ಇಂದಿನ ಯವಸಮೂಹ ರಕ್ತದಾನದಂತಹ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆಂದು ಮಲ್ಲಿಗೆ ಎಜುಕೇಶನ್ ಸೊಸೈಟಿಯ ನಿರ್ದೇಶಕ ಡಾ.ಶಿವಕುಮಾರಸ್ವಾಮಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ದಾಸರಹಳ್ಳಿ ಕ್ಷೇತ್ರದ ಚಿಕ್ಕಬಾಣವಾರ ಸಮೀಪದ ಮಲ್ಲಿಗೆ ಕಾಲೇಜ್ ಆಫ್ ಫಾರ್ಮಸಿ ಹಾಗೂ ನರ್ಸಿಂಗ್ ಕಾಲೇಜಿನಲ್ಲಿ ಮಲ್ಲಿಗೆ ಎಜುಕೇಷನ್ ಪೌಂಡೇಷನ್ ಬೆಂಗಳೂರು, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ವತಿಯಿಂದ ಅಯೋಜಿಸಲಾಗಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ಅಪಘಾತ, ಶಸ್ತ್ರಚಿಕಿತ್ಸೆ, ಡೆಂಘೀ, ಹೆರಿಗೆ ಇನ್ನಿತರೆ ಅನೇಕ ತುರ್ತು ಸಂದರ್ಭಗಳಲ್ಲಿ ರಕ್ತದ ಅಲಭ್ಯತೆಯಿಂದಲೇ ಸಾಕಷ್ಟು ಮಂದಿ ಮೃತ ಪಡುತ್ತಾರೆ. ರಕ್ತದಾನದಿಂದ ಸಮಾಜದ ಸ್ವಾಸ್ಥ್ಯ ಕಾಪಾಡಬಹುದಲ್ಲದೆ ವೈಯಕ್ತಿಕವಾಗಿ ನಮ್ಮ ಆರೋಗ್ಯದ ವಿಷಯದಲ್ಲಿ ಲಾಭವಿದೆ ಹಾಗಾಗಿ ರಕ್ತದಾನ ಮಾಡಲು ಅರ್ಹರಿರುವವರು ನಿಯಮಿತವಾಗಿ ರಕ್ತದಾನ ಮಾಡಿ ಜೀವ ಉಳಿಸಿಬಹುದು ಎಂದರು. ಮಲ್ಲಿಗೆ ಎಜುಕೇಶನ್ ಪೌಂಡೇಷನ್ ಟ್ರಸ್ಟಿ ಕಲಾ ಶ್ರೀರಾಮ್ ಮಾತನಾಡಿ,ರಕ್ತದಾನ ಮಾಡುವುದರಿಂದ ನಮಗೇನು ತೊಂದರೆಯಾಗುವುದಿಲ್ಲ ಅರೋಗ್ಯವಂತ ವ್ಯಕ್ತಿ ಎಷ್ಟು ಸಲ ಬೇಕಾದರೂ ರಕ್ತದಾನ ಮಾಡಬಹುದು.ಇಂತಹ ಶಿಬಿರಗಳಲ್ಲಿ ಪಾಲ್ಗೊಂಡು ರಕ್ತ ನೀಡಿದರೆ ಅದು ಮುಂದೊಂದು ದಿನ ಒಬ್ಬರ ಜೀವ ಉಳಿಸಲು ಸಹಾಯವಾಗುತ್ತದೆ ಹಾಗಾಗಿ ಸಾಮಾಜಿಕ ಜವಾಬ್ದಾರಿ ಎಲ್ಲರಿಗೂ ಇರಬೇಕು ಎಂದರು. ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಮಲ್ಲಿಗೆ ಎಜುಕೇಶನ್ ಫೌಂಡೇಷನ್ ಟ್ರಸ್ಟಿ ಕಲಾ ಶ್ರೀರಾಮ್, ಗೌರ್ನರ್ ಕೌನ್ಸಿಲಿಂಗ್ ಸದಸ್ಯ ಸ್ವಾತಿ ಶ್ರೀರಾಮ್, ಮಲ್ಲಿಗೆ ಎಜುಕೇಶನ್ ಸೊಸೈಟಿಯ ನಿರ್ದೇಶಕ ಡಾ.ಶಿವಕುಮಾರಸ್ವಾಮಿ ಪ್ರಾಂಶುಪಾಲರಾದ ಡಾ.ರಾಜೇಶ್ವರಿ, ಉಪ ಪ್ರಾಂಶುಪಾಲ ಡಾ.ಎಸ್.ವಿ. ರಾಜೇಂದ್ರ ಎನ್‌ಎಸ್‌ಎಸ್ ಅಧಿಕಾರಿಗಳಾದ ನವೀನ್ ಕುಮಾರ್, ಸಲೇಟ್ ಕುರಿಯನ್, ಕೋಅರ್ಡಿನೇಟರ್ ಸಜನ್ ಸುಬ್ರಮಣಿ ,ರೆಡ್ ಕ್ರಾಸ್ ಸಂಸ್ಥೆಯವರು ಉಪಾನ್ಯಾಸಕರು, ವಿಧ್ಯಾರ್ಥಿಗಳು ಭಾಗವಹಿಸಿದ್ದರು.