ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ
ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆ ಹಿಂದೆ ಬೀಳದೆ ಶಾಲೆಯಲ್ಲಿ ಕಲಿತ ಶಿಸ್ತು ಮತ್ತು ಸಂಸ್ಕಾರವನ್ನು ಜೀವನ ಪೂರ್ತಿ ಅಳವಡಿಸಿಕೊಳ್ಳಬೇಕು ಎಂದು ದೀಪ್ತಿ ಆಡಳಿತ ಮಂಡಳಿ ಅಧ್ಯಕ್ಷ ಫಾ. ಟಿನೋ ಥೋಮಸ್ ಕರೆ ನೀಡಿದರು.ಬುಧವಾರ ಪಟ್ಟಣದ ಸೈಂಟ್ ಜೋಸೆಫ್ ಪಬ್ಲಿಕ್ ಶಾಲೆಯಲ್ಲಿ 10 ನೇ ತರಗತಿ ಪ್ರಥಮ ವರ್ಗದ ವಿದ್ಯಾರ್ಥಿಗಳ 2025-26 ನೇ ಶೈಕ್ಷಣಿಕ ಸಾಲಿನ ಪದವಿ ಪ್ರಧಾನ ಹಾಗೂ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಶಾಲೆಯಿಂದ 10 ನೇ ತರಗತಿ ಮುಗಿಸಿ ಹೊರ ಹೋಗುವ ಪ್ರತಿಯೊಬ್ಬ ವಿದ್ಯಾರ್ಥಿ ದೇಶದ ಉತ್ತಮ ಪ್ರಜೆಗಳಾಗಬೇಕು ಎಂದರು.
ದೀಪ್ತಿ ಆಡಳಿತ ಮಂಡಲಿ ಕಾರ್ಯ ನಿರ್ವಹಣಾಧಿಕಾರಿ ಫಾ.ಅಮಲ್ ಮಾತನಾಡಿ, ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣ ಪಡೆದು ಹೆತ್ತವರಿಗೆ, ಹುಟ್ಟೂರಿಗೆ ಕೀರ್ತಿ ತರಬೇಕು ಎಂದರು. ಸಭೆಯಲ್ಲಿ ಸೈಂಟ್ ಜೋಸೆಫ್ ಪಬ್ಲಿಕ್ ಸ್ಕೂಲಿನ ಪ್ರಾಂಶುಪಾಲ ಮೋಹನ್, ದೀಪ್ತಿ ಆಡಳಿತ ಮಂಡಳಿ ಕಾರ್ಯದರ್ಶಿ ಇ.ಸಿ.ಜೋಯಿ, ದೀಪ್ತಿ ಶಾಲಾ ಮುಖ್ಯೋಪಾ ಧ್ಯಾಯಿನಿ ಲೀಲಾವತಿ ಮಾತನಾಡಿದರು. ತರಗತಿ ಶಿಕ್ಷಕಿ ಡಿ.ಅನಿತ ತಮ್ಮ ಅನುಭವ ಹಂಚಿಕೊಂಡರು. ಕು. ಎಂ.ಬಿ.ಸ್ಟೆಪಿ ಸ್ವಾಗತಿಸಿದರು. ಎಂ.ಸಿಜು ಹಾಗೂ ಜಿ.ಎಸ್.ಸ್ವಾತಿ ಕಾರ್ಯಕ್ರಮ ನಿರೂಪಿಸಿದರು. ರೆನಿಷಾ ವಂದಿಸಿದರು.