ವಿದ್ಯಾರ್ಥಿಗಳು ಶ್ರದ್ಧೆಯಿಂದ ಕಲಿಕೆಯಲ್ಲಿ ತೊಡಗಬೇಕು. ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಶಿಕ್ಷಕರು ಮಾರ್ಗದರ್ಶನ ನೀಡಬೇಕು
ಯಲಬುರ್ಗಾ: ವಿದ್ಯಾರ್ಥಿಗಳ ಜೀವನದಲ್ಲಿ ಶಿಸ್ತು ಮತ್ತು ಸಂಯಮ ಮುಖ್ಯವಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಎಂ.ಎನ್. ಜನಾದ್ರಿ ಹೇಳಿದರು.
ಪಟ್ಟಣದ ಜನನಿ ಗ್ರುಪ್ ಆಫ್ ಇನ್ಸ್ಟಿಟ್ಯೂಟ್‌ನ ಹೇಮಾದ್ರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಜನನಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಗ್ರಾಮೀಣ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಕೊಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.
ನಿವೃತ್ತ ಮುಖ್ಯಶಿಕ್ಷಕ ಅಶೋಕ ಮಾಲಿಪಾಟೀಲ್ ಮಾತನಾಡಿ, ವಿದ್ಯಾರ್ಥಿಗಳು ಶ್ರದ್ಧೆಯಿಂದ ಕಲಿಕೆಯಲ್ಲಿ ತೊಡಗಬೇಕು. ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಶಿಕ್ಷಕರು ಮಾರ್ಗದರ್ಶನ ನೀಡಬೇಕು ಎಂದರು.ರಾಬಕೊವಿ ಹಾಲು ಒಕ್ಕೂಟದ ಮಾಜಿ ಉಪಾಧ್ಯಕ್ಷ ಶಿವಪ್ಪ ವಾದಿ ಮಾತನಾಡಿದರು. ಇನ್ಸ್ಟಿಟ್ಯೂಟ್‌ನ ಅಧ್ಯಕ್ಷ ರಂಗನಾಥ ವಲ್ಮಕೊಂಡಿ ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಸಹಕಾರಿಯಾಗುವ ಪಾಸಿಂಗ್ ಪ್ಯಾಕೇಜ್ ಪುಸ್ತಕ ವಿತರಿಸಲಾಯಿತು. ಜತೆಗೆ ನರ್ಸರಿಯಿಂದ ಒಂಬತ್ತನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಗ್ರಾಮರ್ ಪುಸ್ತಕ ವಿತರಿಸಲಾಯಿತು.ಈ ಸಂದರ್ಭ ಪ್ರಾಚಾರ್ಯ ಯಶವಂತ ಕಾಂಬಳೆಕರ್, ಪ್ರಾಣೇಶ ವಲ್ಮಕೊಂಡಿ, ಆಡಳಿತಾಧಿಕಾರಿ ಲೋಕೇಶ ಲಮಾಣಿ, ಮುಖ್ಯಶಿಕ್ಷಕ ಅಕ್ಷಯಕುಮಾರ್ ಪತ್ತಾರ, ಶಿಕ್ಷಕ ನಾಸಿರ್‌ಹುಸೇನ್ ಹವಾಲ್ದಾರ್, ಮಹಾಂತೇಶ ಮಂಗಳೂರು, ರತ್ನಾ ಡಿ.ಎಚ್.,ಗೀತಾ ಜೋಗಿ, ವಿಜಯಾ ಕುಂಬಾರ, ಅಮೃತಾ ಹೊಸಳ್ಳಿ, ಪ್ರೀತಿ ನೂಲ್ವಿ, ಹೀನಾ ಕೌಸರ, ಪದ್ಮಜಾ ದೇಸಾಯಿ, ಸಂಗೀತಾ ಹಕಾರಿ, ಆಲಿಯಾ ಮಾಲ್ದಾರ್, ಕಾವ್ಯ ಹುಲಿಹಳ್ಳಿ, ಭೂಮಿಕಾ ಪಾಟೀಲ್, ಆನಂದ ತೆರಗುಂಟಿ, ಗೀತಾ ಬಂಡಿ, ನಂದಿತಾ ಸೇರಿದಂತೆ ಮತ್ತಿತರರು ಇದ್ದರು.