ಹೆಗ್ಗಾರ ಬಳಕೂರ ತೂಗುಸೇತುವೆ ಸಂಪರ್ಕ ಕಡಿತ

| Published : May 25 2024, 12:52 AM IST

ಹೆಗ್ಗಾರ ಬಳಕೂರ ತೂಗುಸೇತುವೆ ಸಂಪರ್ಕ ಕಡಿತ
Share this Article
  • FB
  • TW
  • Linkdin
  • Email

ಸಾರಾಂಶ

ಅನಿಲಗೋಡನಿಂದ ಬಳ್ಕೂರಿಗೆ ಸಂಪರ್ಕ ಕಲ್ಪಿಸುವ ಹೆಗ್ಗಾರ ಸಮೀಪದ ತೂಗು ಸೇತುವೆಯಲ್ಲಿ ಪ್ರತಿನಿತ್ಯ ನೂರಾರು ಸಾರ್ವಜನಿಕರು ಈ ಮಾರ್ಗವಾಗಿ ಕಾಲ್ನಡಿಗೆಯಲ್ಲಿ ಸಂಚರಿಸುತ್ತಿದ್ದರು.

ಹೊನ್ನಾವರ: ತಾಲೂಕಿನ ಕೊಡಾಣಿ ಗ್ರಾಪಂ ವ್ಯಾಪ್ತಿಯ ಅನಿಲಗೋಡನಿಂದ ಹೆಗ್ಗಾರ- ಬಳ್ಕೂರು ಸಂಪರ್ಕ ಕಲ್ಪಿಸುವ ತೂಗೂ ಸೇತುವೆಯ ರೋಪ್ ತುಂಡಾಗಿ ಸೇತುವೆ ಒರೆಯಾಗಿ ಸಂಪರ್ಕ ಕಡಿತಗೊಂಡಿದ್ದು, ಘಟನೆಯಲ್ಲಿ ಅದೃಷ್ಟವಷಾತ್ ತಾಯಿ- ಮಗು ಪಾರಾಗಿದ್ದು, ಭಾರಿ ಅನಾಹುತ ತಪ್ಪಿದಂತಾಗಿದೆ.

ಅನಿಲಗೋಡನಿಂದ ಬಳ್ಕೂರಿಗೆ ಸಂಪರ್ಕ ಕಲ್ಪಿಸುವ ಹೆಗ್ಗಾರ ಸಮೀಪದ ತೂಗೂ ಸೇತುವೆಯಲ್ಲಿ ಪ್ರತಿನಿತ್ಯ ನೂರಾರು ಸಾರ್ವಜನಿಕರು ಈ ಮಾರ್ಗವಾಗಿ ಕಾಲ್ನಡಿಗೆಯಲ್ಲಿ ಸಂಚರಿಸುತ್ತಿದ್ದರು. ಶುಕ್ರವಾರ ಬೆಳಗ್ಗೆ 9 ಗಂಟೆಯ ಸುಮಾರಿಗೆ ತಾಯಿ- ಮಗು ನಡೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ ತೂಗೂ ಸೇತುವೆಯ ರೋಪ್ ಕಟ್ಟಾಗಿದೆ.

ನಿತ್ಯ ವಿದ್ಯಾರ್ಥಿಗಳು, ಸಾರ್ವಜನಿಕರು ಹೆಚ್ಚಿನ ಸಂಖೆಯಲ್ಲಿ ಹೆಗ್ಗಾರ ಮೂಲಕ ಸಂಚರಿಸುತ್ತಿದ್ದರು. ಶಾಲೆ ರಜೆ ಇರುವ ಹಿನ್ನೆಲೆಯಲ್ಲಿ ಜತೆಗೆ ಜನಸಂಚಾರ ಕಡಿಮೆ ಇದ್ದ ಕಾರಣ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ. ಈ ಸೇತುವೆ ಸಂಪರ್ಕ ಕಡಿತಗೊಂಡ ಪರಿಣಾಮ ಸಾರ್ವಜನಿಕರು ಒಂದೂರಿನಿಂದ ಮತ್ತೊಂದು ಊರಿಗೆ ಬೇರೆ ಮಾರ್ಗದಿಂದ ಸುಮಾರು 5 ಕಿಮೀ ನಡೆದು ಸಂಚರಿಸುವ ಅನಿವಾರ್ಯತೆ ಎದುರಾಗಿದೆ.ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಬಳ್ಕೂರು ಗ್ರಾಪಂ ಸದಸ್ಯ ಗಣಪತಿ ನಾಯ್ಕ ಬಿ.ಟಿ., ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಕೊಡಾಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ ತಿಮ್ಮಪ್ಪ ನಾಯ್ಕ ಅಧಿಕಾರಿಗಳ ಜತೆ ಸ್ಥಳದಲ್ಲಿ ಉಪಸ್ಥಿತರಿದ್ದು ಪರ್ಯಾಯ ವ್ಯವಸ್ಥೆಯ ಕುರಿತು ಚರ್ಚಿಸಿದರು.