ನಾಳೆಯಿಂದ ಕೊಪ್ಪಳ ಗವಿಸಿದ್ಧೇಶ್ವರ ಶ್ರೀಗಳ ಪ್ರವಚನ

| Published : Nov 21 2025, 03:00 AM IST

ಸಾರಾಂಶ

ಮಹಾಲಿಂಗಪುರ ಪಟ್ಟಣದ ಕೆಎಲ್ಇ ಕಾಲೇಜು ಎದುರಿನ ಮೈದಾನದಲ್ಲಿ ಕೊಪ್ಪಳದ ಗವಿಸಿದ್ಧೇಶ್ವರ ಶ್ರೀಗಳಿಂದ ನ.೨೨ ರಿಂದ ೩೦ರವರೆಗೆ ೯ ದಿನ ಸಂಜೆ 6ರಿಂದ 7 ಗಂಟೆಯವರೆಗೆ ಅಧ್ಯಾತ್ಮ ಪ್ರವಚನ, ಬೆಳಗ್ಗೆ 6.30ರಿಂದ 8 ಗಂಟೆಯವರೆಗೆ ಪಾದಯಾತ್ರೆ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಪಟ್ಟಣದ ಕೆಎಲ್ಇ ಕಾಲೇಜು ಎದುರಿನ ಮೈದಾನದಲ್ಲಿ ಕೊಪ್ಪಳದ ಗವಿಸಿದ್ಧೇಶ್ವರ ಶ್ರೀಗಳಿಂದ ನ.೨೨ ರಿಂದ ೩೦ರವರೆಗೆ ೯ ದಿನ ಸಂಜೆ 6ರಿಂದ 7 ಗಂಟೆಯವರೆಗೆ ಅಧ್ಯಾತ್ಮ ಪ್ರವಚನ, ಬೆಳಗ್ಗೆ 6.30ರಿಂದ 8 ಗಂಟೆಯವರೆಗೆ ಪಾದಯಾತ್ರೆ ನಡೆಯಲಿದೆ.

ಪಾದಯಾತ್ರೆಯು ನ.೨೨ರಂದು ಗುರು ಮಹಾಲಿಂಗೇಶ್ವರ ಮಠದಿಂದ ಶ್ರೀಗಳ ಪಾದಯಾತ್ರೆ ಆರಂಭವಾಗಿ ನಡುಚೌಕಿ, ಯಲ್ಲಮ್ಮನಗುಡಿ, ಕುಬಸದಗಲ್ಲಿ ನೀಲಕಂಠೇಶ್ವರ ಮಠದ ರಸ್ತೆ ನಂತರ ಬುದ್ನಿ ಪಿ.ಡಿಯ ಮಹಾಲಿಂಗೇಶ್ವರ ಗುಡಿ, ೨೩ರಂದು ಪುರಸಭೆಯಿಂದ ಚಿಮ್ಮಡಗಲ್ಲಿ, ರಾಮನಗೌಡ ಬಡಾವಣೆ, ಭೋವಿ ಓಣಿ, ಸಾಧು ಗುಡಿ, ಆಯಿಲ್ ಮಿಲ್ ಪ್ಲಾಟ್, ಪಶು ಆಸ್ಪತ್ರೆ. ೨೪ ಬಸವನಗರ ಮಹಾದ್ವಾರ, ಸಿ.ಆರ್. ಕುಳ್ಳೋಳ್ಳಿ ವೃತ್ತದಿಂದ ಎಡಕ್ಕೆ ತಿರುಗಿ ಬಂಡಿಗಣಿ ಮಠ, ಸಿ.ಕೆ.ಚಿಂಚಲಿ ಶಾಲೆ. ೨೫ರಂದು ಕಲ್ಪಡಗಲ್ಲಿ ಹನುಮಾನ ಗುಡಿ, ಪೆಂಡಾರಿಗಲ್ಲಿ, ನಡುಚೌಕಿ, ಕುದರಿ ಓಣಿ, ಕಾಗಿ ಓಣಿಯವರೆಗೆ ನಡೆಯಲಿದೆ. ಅಕ್ಕ-ಪಕ್ಕದ ಗ್ರಾಮಗಳಿಗೂ ಶ್ರೀಗಳ ಪಾದಯಾತ್ರೆ ನಡೆಯಲಿದ್ದು, ೨೬ರಂದು ಚಿಮ್ಮಡ, ೨೭ ನಾಗರಾಳ, ೨೮ ಮದಭಾಂವಿ, ೨೯ ಮಿರ್ಜಿ ಮತ್ತು ೩೦ರಂದು ರನ್ನಬೆಳಗಲಿ ಪಟ್ಟಣದಲ್ಲಿ ನಡೆಯಲಿದೆ.

ಸ್ವಚ್ಛತೆ ಮತ್ತು ಪೂರ್ವಸಿದ್ಧತೆಯ ಪರಿಶೀಲನೆ: ೯ ದಿನಗಳ ಕಾಲ ಪ್ರವಚನ ನಡೆಯಲಿರುವ ಮೈದಾನದಲ್ಲಿ ಒಂದು ವಾರದಿಂದ ಹಿಂದು ಸಂಘಟನೆ ಕಾರ್ಯಕರ್ತರು, ಎಪಿಎಂಸಿ ವಾಯು ವಿಹಾರ ಮಿತ್ರ ಮಂಡಳಿ, ಕುಬಸದ ಗಲ್ಲಿಯ ಯುವಕರು ಮತ್ತು ಸದ್ಭಕ್ತರು ಸ್ವಚ್ಛತೆಯಲ್ಲಿ ಪಾಲ್ಗೊಂಡಿದ್ದಾರೆ. ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಸ್ಥಳಾವಕಾಶವಿದೆ. ವಾಹನ ನಿಲುಗಡೆಗೆ ಅಚ್ಚುಕಟ್ಟಾದ ಸ್ಥಳಾವಕಾಶ ಕಲ್ಪಿಸಲಾಗಿದೆ. ಆಧ್ಯಾತ್ಮ ಪ್ರವಚನಕ್ಕೆ ಅಗತ್ಯಪೂರ್ವ ಸಿದ್ಧತೆಗೆ ಪಟ್ಟಣದ ಹಿರಿಯರು,ಪುರಸಭೆ,ಹೆಸ್ಕಾಂ, ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.