ಸಹಾಯಕ ಗ್ರಂಥಪಾಲಕ ಹುದ್ದೆ ಅರ್ಜಿ ಆಹ್ವಾನದಲ್ಲಿ ತಾರತಮ್ಯ

| Published : Jun 04 2024, 12:30 AM IST

ಸಾರಾಂಶ

ಸಾರ್ವಜನಿಕ ಗ್ರಂಥಾಯ ಇಲಾಖೆಯಲ್ಲಿ ಸಹಾಯಕ ಗ್ರಂಥಪಾಲಕ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್ಸಿ) ಅರ್ಜಿಗಳನ್ನು ಆಹ್ವಾನಿಸಿರುವ ಹುದ್ದೆಗಳ ಅರ್ಹತಾ ಮಾನದಂಡದಲ್ಲಿ ತಾರತಮ್ಯವಾಗಿದ್ದು, ಸೂಕ್ತ ವೈಜ್ಞಾನಿಕ ಮಾನದಂಡಗಳನ್ನು ಅನುಸರಿಸಲು ಆಗ್ರಹಿಸಿ ಕೆಪಿಎಸ್‌ಸಿ ಕಚೇರಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಎಸ್.ಸಾಹುಕಾರ ಹಾಗೂ ಸದಸ್ಯರಾದ ಬಿ.ವಿ.ಗೀತಾ ಅವರಿಗೆ ಬೆಂಗಳೂರಿನ ಎಲ್ಐಎಸ್ ಅಕಾಡೆಮಿಯ ಅಧ್ಯಕ್ಷ ಡಾ.ಪಿ.ವಿ.ಕೊಣ್ಣೂರ ಶುಕ್ರವಾರ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರುಸಾರ್ವಜನಿಕ ಗ್ರಂಥಾಯ ಇಲಾಖೆಯಲ್ಲಿ ಸಹಾಯಕ ಗ್ರಂಥಪಾಲಕ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್ಸಿ) ಅರ್ಜಿಗಳನ್ನು ಆಹ್ವಾನಿಸಿರುವ ಹುದ್ದೆಗಳ ಅರ್ಹತಾ ಮಾನದಂಡದಲ್ಲಿ ತಾರತಮ್ಯವಾಗಿದ್ದು, ಸೂಕ್ತ ವೈಜ್ಞಾನಿಕ ಮಾನದಂಡಗಳನ್ನು ಅನುಸರಿಸಲು ಆಗ್ರಹಿಸಿ ಕೆಪಿಎಸ್‌ಸಿ ಕಚೇರಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಎಸ್.ಸಾಹುಕಾರ ಹಾಗೂ ಸದಸ್ಯರಾದ ಬಿ.ವಿ.ಗೀತಾ ಅವರಿಗೆ ಬೆಂಗಳೂರಿನ ಎಲ್ಐಎಸ್ ಅಕಾಡೆಮಿಯ ಅಧ್ಯಕ್ಷ ಡಾ.ಪಿ.ವಿ.ಕೊಣ್ಣೂರ ಶುಕ್ರವಾರ ಮನವಿ ಸಲ್ಲಿಸಿದರು.ಕೆಪಿಎಸ್‌ಸಿಯ ಉದ್ಯೋಗ ಅಧಿಸೂಚನೆ ಸಂಖ್ಯೆ: PSC.77 RTB (2)/2024-25/ 454 ದಿನಾಂಕ: 28-05-2024 ರಲ್ಲಿ ಸಾರ್ವಜನಿಕ ಗ್ರಂಥಾಯ ಇಲಾಖೆಯಲ್ಲಿ ಸಹಾಯಕ ಗ್ರಂಥಪಾಲಕ ಹುದ್ದೆಗೆ ವಿದ್ಯಾರ್ಹತೆಯನ್ನು ಗ್ರಂಥಾಲಯ ವಿಜ್ಞಾನದಲ್ಲಿ ಡಿಪ್ಲೊಮಾ ಎಂದು ನಿಗದಿಪಡಿಸಿದೆ. ಈ ಡಿಪ್ಲೊಮಾ ಕೋರ್ಸ್ ಕರ್ನಾಟಕದಲ್ಲಿ ಪ್ರಸ್ತುತ 3 ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮಾತ್ರ ನಡೆಸುತ್ತಿರುವುದಲ್ಲದೇ ಕೇವಲ ಮಹಿಳೆಯರಿಗೆ ಮಾತ್ರ ಪ್ರವೇಶಾತಿಗೆ ಅವಕಾಶವಿದೆ. ಅರ್ಜಿಗೆ ಆಹ್ವಾನಿಸಿದಂತೆ ಕೇವಲ ಮಹಿಳೆಯರು ಮಾತ್ರ ಸಹಾಯಕ ಗ್ರಂಥಪಾಲಕ ಹುದ್ದೆಗಳಿಗೆ ಅರ್ಜಿ ಹಾಕಲು ಅವಕಾಶವಿದೆ. ಆದರೆ, ಭಾರತೀಯ ಸಂವಿಧಾನದ ೧೬ನೇ ವಿಧಿಯ ಧರ್ಮ, ಜನಾಂಗ, ಜಾತಿ, ಲಿಂಗ, ಕುಟುಂಬ ಮೂಲ, ಜನ್ಮ ಸ್ಥಳಗಳ ಆಧಾರದ ಮೇಲೆ ಸರ್ಕಾರಿ ಉದ್ಯೋಗದಲ್ಲಿ ತಾರತಮ್ಯ ನಿಷೇಧಿಸುತ್ತಿರುವುದರಿಂದ ಕೇವಲ ಮಹಿಳೆಯರಿಗೆ ಮಾತ್ರ ಸಹಾಯಕ ಗ್ರಂಥಪಾಲಕ ಹುದ್ದೆಗಳಿಗೆ ಅವಕಾಶವಿರುವುದರಿಂದ ಪುರುಷರು ಅವಕಾಶ ವಂಚಿತರಾಗುತ್ತಾರೆ ಎಂದು ದೂರಿದರು.ಡಿಪ್ಲೊಮಾ ಮತ್ತು ಬಿ.ಎಲ್.ಐ.ಎಸ್ಸಿ ಎರಡೂ ಕೋರ್ಸ್‌ಗಳ ಪಠ್ಯಕ್ರಮಗಳು ಬಹುತೇಕ ಒಂದೇ ಆಗಿರುತ್ತವೆ. ಭಾರತದ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದ ಬ್ಯಾಚುಲರ್ ಆಫ್ ಲೈಬ್ರರಿ ಸೈನ್ಸ್ (ಬಿ.ಎಲ್.ಐ.ಎಸ್ಸಿ) ಪದವಿಯನ್ನು ಸಹಾಯಕ ಲೈಬ್ರರಿಯನ್ ಹುದ್ದೆಗೆ ಅರ್ಹತೆಯಾಗಿದೆ. ಬ್ಯಾ ಚುಲರ್ ಆಫ್ ಲೈಬ್ರರಿ ಸೈನ್ಸ್ (ಬಿ.ಎಲ್.ಐ.ಎಸ್ಸಿ)ಗೆ ಪ್ರವೇಶ ಪಡೆಯಲು ಪದವಿ (Bachelor degree) ತೇರ್ಗಡೆ ಹೊಂದಿರಬೇಕಾಗುತ್ತದೆ. ಇದರ ಪ್ರವೇಶ ಪುರುಷ/ಮಹಿಳೆಯರಿಗೆ ಸಮಾನವಾಗಿ ಕಲ್ಪಿಸಲಾಗಿದೆ. ಆದರೆ, ಗ್ರಂಥಾಲಯ ವಿಜ್ಞಾನದಲ್ಲಿ ಡಿಪ್ಲೊಮಾ ಕೇವಲ ಮಹಿಳೆಯರಿಗೆ ಮಾತ್ರ ಸೀಮಿತವಾಗಿದೆ ಮತ್ತು ಅದರ ಪ್ರವೇಶಕ್ಕೆ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ತೇರ್ಗಡೆ ಹೊಂದಿರಬೇಕಾಗುತ್ತದೆ. ಈ ವೈಜ್ಞಾನಿಕ ಅಂಶಗಳನ್ನು ಪರಿಗಣಿಸಿ ಸಹಾಯಕ ಗ್ರಂಥಪಾಲಕ ಹುದ್ದೆಗೆ ವಿದ್ಯಾರ್ಹತೆಯನ್ನು ಡಿಪ್ಲೊಮಾ ಲೈಬ್ರರಿ ಸೈನ್ಸ್ ಹಾಗೂ ಬ್ಯಾಚುಲರ್ ಆಫ್ ಲೈಬ್ರರಿ ಸೈನ್ಸ್ ಎಂದು ಪರಿಗಣಿಸಿ ಮಹಿಳೆ ಮತ್ತು ಪುರುಷ ಅಭ್ಯರ್ಥಿಗಳಿಗೆ ಸಮಾನ ಉದ್ಯೋಗಾವಕಾಶಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.ಮನವಿಗೆ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಎಸ್.ಸಾಹುಕಾರ ಅವರು ಸಕಾರಾತ್ಮಕವಾಗಿ ಸ್ಪಂದಿಸಿ, ಸದರಿ ವಿಷಯವನ್ನು ಕರ್ನಾಟಕ ಸರ್ಕಾರದ ಡಿಪಿಎಆರ್ ಇಲಾಖೆ ಜೊತೆ ಸಮಾಲೋಚಿಸಿ ಹುದ್ದೆಗಳ ಮಾನದಂಡಗಳನ್ನು ಪರಿಗಣಿಸಲಾಗುವುದು ಎಂದು ಭರವಸೆ ನೀಡಿದರು.ಲೈಬ್ರರಿಯನ್‌ ಹುದ್ದೆಗೆ ಈ ಹಿಂದೆ ಲೈಬ್ರರಿ ಸೈನ್ಸ್ (BLISc) ಪದವಿ ನಿಗದಿಪಡಿಸಲಾಗಿತ್ತು. ಆದರೆ, ಸರ್ಕಾರದಿಂದ ಕೆಪಿಎಸ್‌ಸಿವು ಸ್ಪಷ್ಟಿಕರಣ ಪಡೆದ ನಂತರ BLISc ಮತ್ತು MLISc ವಿದ್ಯಾರ್ಹತೆಗಳನ್ನು ಸೇರಿಸಲು ಈಗಾಗಲೇ ತಿದ್ದುಪಡಿ ಮಾಡಿ ಅದನ್ನೇ ಮುಂದುವರೆಸಿದೆ. ಇದೇ ರೀತಿ ಸ್ಪಷ್ಟಿಕರಣ ಪಡೆದು ಸಹಾಯಕ ಲೈಬ್ರರಿಯನ್‌ ಹುದ್ದೆಗೆ ಡಿಪ್ಲೊಮಾ ಜತೆ BLISc ಅರ್ಹತೆಯನ್ನೂ ಸೇರಿಸಬೇಕು. ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಿರುವುದನ್ನು ಮುಂದೂಡಬೇಕು. ತಿದ್ದುಪಡೆಯಾದ ನಂತರವೇ ಮರು ಅರ್ಜಿಗೆ ಆಹ್ವಾನಿಸಬೇಕು.-ಡಾ.ಪಿ.ವಿ.ಕೊಣ್ಣೂರ ಅಧ್ಯಕ್ಷರು, ಎಲ್ಐಎಸ್ ಅಕಾಡೆಮಿ ಬೆಂಗಳೂರು.