ಕಾರ್ಯರೂಪಕ್ಕೆ ಬರದ ಚರ್ಚೆಯ ವಿಷಯಗಳು

| Published : Oct 31 2024, 12:46 AM IST

ಸಾರಾಂಶ

ಸಾಮಾನ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳು ಕಾರ್ಯರೂಪಕ್ಕೆ ಬರುತ್ತಿಲ್ಲ. ಬರೀ ಕಾಗದ ರೂಪದಲ್ಲಿ ಮಾತ್ರ ಇವೆ. ಅವು ಕಾರ್ಯ ರೂಪಕ್ಕೆ ಬಂದಿಲ್ಲ ಎಂದು ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಪಪಂ ಸದಸ್ಯರು ಧ್ವನಿ ಎತ್ತಿದರು.

ಸಾಮಾನ್ಯ ಸಭೆಯಲ್ಲಿ ಪಪಂ ಸದಸ್ಯರ ಅಸಮಾಧಾನ

ಕನ್ನಡಪ್ರಭ ವಾರ್ತೆ ಕುಕನೂರು

ಸಾಮಾನ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳು ಕಾರ್ಯರೂಪಕ್ಕೆ ಬರುತ್ತಿಲ್ಲ. ಬರೀ ಕಾಗದ ರೂಪದಲ್ಲಿ ಮಾತ್ರ ಇವೆ. ಅವು ಕಾರ್ಯ ರೂಪಕ್ಕೆ ಬಂದಿಲ್ಲ ಎಂದು ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಪಪಂ ಸದಸ್ಯರು ಧ್ವನಿ ಎತ್ತಿದರು.

ಕಳೆದ ತಿಂಗಳ ಪಪಂನ ಸಾಮಾನ್ಯ ಸಭೆಯಲ್ಲಿ ಜರುಗಿದ ಅಭಿವೃದ್ಧಿಯ ಕೆಲವು ಕಾಮಗಾರಿಗಳು, ಕೆಲಸಗಳು ಬರಿ ಚರ್ಚೆಯಾಗುತ್ತಿರುತ್ತವೆ, ಅವು ಕಾರ್ಯರೂಪಕ್ಕೆ ಬರುತ್ತಿಲ್ಲ ಏಕೆ ಎಂದು ಸದಸ್ಯರು ಪ್ರಶ್ನಿಸಿದರು. ಹಿಂದಿನ ಸಾಮಾನ್ಯ ಸಭೆಯಲ್ಲಿ ಚರ್ಚೆ ಮಾಡಿದ ಕೆಲವು ಕಾಮಗಾರಿಗಳು, ಕೆಲಸಗಳು ಹಾಗೇ ಉಳಿದಿವೆ. ಕುಡಿಯುವ ನೀರು, ರಸ್ತೆ, ಚರಂಡಿ, ಶೌಚಾಲಯಕ್ಕೆ ನೀರು ಇಲ್ಲದೆ ಇಂತಹ ಅನೇಕ ಸಮಸ್ಯೆಗಳು ಇವೆ ಎಂದರು.

ಪಪಂ ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟ ಮಾತನಾಡಿ, ಕಳೆದ ಬಾರಿ ಕೆಲವು ತಾಂತ್ರಿಕ ಸಮಸ್ಯೆಯಿಂದ ಸಭೆಯಲ್ಲಿ ಚರ್ಚೆ ಮಾಡಿದ ಕೆಲಸಗಳು ಆಗಿಲ್ಲ. ಈ ಬಾರಿ ಸದಸ್ಯರ ವಾರ್ಡಿನ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆ ಹರಿಸಲಾಗುವುದು ಎಂದು ಹೇಳಿದರು.

ಪಪಂಗೆ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ, ಹೊಸದಾಗಿ ಕೊರೆಯಿಸಿದ ಬೋರವೆಲ್‌ಗಳಿಗೆ ತ್ರಿಫೇಸ್ ವಿದ್ಯುತ್‌ಲೈನ್ ಸರಬರಾಜು ಅನುಮೋದನೆ, ಅಂಬೇಡ್ಕರ್ ಸಮುದಾಯ ಭವನಕ್ಕೆ ಕಾಂಪೌಂಡ್‌ ಕಾಮಗಾರಿಗೆ ಅನುಮೋದನೆ ಕುರಿತು, ೧೦ನೇ ವಾರ್ಡ್‌ನಲ್ಲಿರುವ ಆರ್.ಓ ಪ್ಲಾಂಟ್‌ನ್ನು ಗುದ್ನೇಪ್ಪನಮಠದ ಕಮೀಟಿವರಿಗೆ ನಿರ್ವಹಣೆ ಮಾಡಲು ಒಪ್ಪಿಸುವ ಕುರಿತು, ಬಸವೇಶ್ವರ ವಾಣಿಜ್ಯ ಮಳಿಗೆ ಮುಂದುವರೆದ ಕಾಮಗಾರಿ, ಸಿಎ ನಿವೇಶನಗಳ ಮಂಜೂರಾತಿ, ಬಸವೇಶ್ವರ ನಗರ ಮತ್ತು ಸಂಜಯನಗರ ಪಾರ್ಕ ಜಾಗೆಯನ್ನು ಅತಿಕ್ರಮಣ, ಕಾರ್ಯಾಲಯದ ಜಾಗೆ ಸ್ಥಳಾಂತರ ಕುರಿತು, ಕೊಳಚೆ ಪ್ರದೇಶವೆಂದು ಘೋಷಣೆ ಮಾಡಲು ಸಾರ್ವಜನಿಕರ ತಕರಾರು ಕುರಿತು, ಕಾರ್ಯಾಲಯದಿಂದ ಕರಗಳನ್ನು ಹೆಚ್ಚಿಸಿ ಸಂಪನ್ಮೂಲ ಅಭಿವೃದ್ಧಿಪಡಿಸುವ ಬಗ್ಗೆ, ಅಂಬೇಡ್ಕರ್ ನಗರದಿಂದ ಇಂಡಿಯನ್ ಆಯಿಲ್ ಬಂಕವರೆಗೆ ಸಿಸಿ ಕ್ಯಾಮೆರಾ ಅಳವಡಿಸುವ ಕುರಿತು, ಎಸ್ಸಿ, ಎಸ್ಟಿ ಸಮುದಾಯ ವಿದ್ಯಾರ್ಥಿಗಳಿಗೆ ವ್ಯಾಸಂಗ ಪ್ರೋತ್ಸಾಹಧನ ನೀಡುವ ಕುರಿತು, ಎಸ್ಸಿ, ಎಸ್ಟಿ ಜನರಿಗೆ ಎಸ್‌ಎಫ್‌ಸಿ ಅನುದಾನದಲ್ಲಿ ನಳ ಸಂಪರ್ಕ ಮಾಡುವ ಕುರಿತು, ೨೦೨೧-೨೨ನೇ ಸಾಲಿನ ಶೇ.೫ರಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬುದ್ಧಿಮಾಂದ್ಯ ಮತ್ತು ಬಹುವಿಧ ಮಕ್ಕಳ ಆರೈಕೆದಾರರಿಗೆ ಪೋಷಣಾ ಭತ್ಯೆ ನೀಡುವ ಕುರಿತು ಸೇರಿದಂತೆ ಇತರೆ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು.

ಪಪಂ ಅಧ್ಯಕ್ಷೆ ಲಲಿತಮ್ಮ ಯಡಿಯಾಪೂರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಪ್ರಶಾಂತ ಆರುಬೆರಳ್ಳಿನ್, ಜೆಸ್ಕಾಂ ಇಲಾಖೆಯ ಎಇಇ ನಾಗರಾಜ ಎಂ., ಸದಸ್ಯರಾದ ಸಿದ್ದು ಉಳ್ಳಾಗಡ್ಡಿ, ರಾಮಣ್ಣ ಬಂಕದಮನಿ, ಸಿರಾಜ್ ಕರಮುಡಿ, ಗಗನ್ ನೋಟಗಾರ, ಬಾಲರಾಜ ಗಾಳಿ, ಜಗನ್ನಾಥ ಭೂವಿ, ಶಿವರಾಜಗೌಡ, ಲಕ್ಷ್ಮೀ ಸಬರದ್, ಕವಿತಾ ಹೂಗಾರ, ರಾಧಾ ದೊಡ್ಡಮನಿ, ಮಲ್ಲು ಚೌಧರಿ, ನೂರುದ್ದಿನ್ ಗುಡಿಹಿಂದಲ್, ನೇತ್ರಾವತಿ ಮಾಲಗಿತ್ತಿ, ಮಂಜುನಾಥ ಕೋಳೂರು ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.