ಸಾರಾಂಶ
ಜಿಲ್ಲೆಯಲ್ಲಿ ಕಬ್ಬು ಮತ್ತು ತೆಂಗು ಆಧಾರಿತ ಕೈಗಾರಿಕೆ ಸ್ಥಾಪನೆ ಮಾಡುವ ಸಂಬಂದ ತಜ್ಞರೊಂದಿಗೆ ಸಿಎಫ್‌ಟಿಆರ್‌ಐನ ಪರಿಣಿತರ ಕರೆಯಿಸಿ ಚರ್ಚೆ ಮಾಡಲಾಗಿದೆ. ಜಿಲ್ಲೆಯ ಕೆ.ಆರ್.ಪೇಟೆ, ತೂಬಿನಕೆರೆ ಅಥವಾ ಸೋಮನಹಳ್ಳಿ ಸೇರಿದಂತೆ ಯಾವ ಭಾಗದಲ್ಲಿ ಕೈಗಾರಿಕೆ ಸ್ಥಾಪನೆಯಾಗಬೇಕು. ಯಾವ ಕೈಗಾರಿಕೆ ಅವಶ್ಯಕತೆ ಇದೆ ಎಂಬುದರ ಬಗ್ಗೆ ಸಮಗ್ರವಾಗಿ ಚರ್ಚಿಸಿದ್ದೇವೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಜಿಲ್ಲೆಯಲ್ಲಿ ನಿರುದ್ಯೋಗ ಹೋಗಲಾಡಿಸಲು ಕೃಷಿಗೆ ಸಂಬಂಧಿತ ಕೈಗಾರಿಕೆಗಳನ್ನು ಸ್ಥಾಪನೆ ಮಾಡುವ ಉದ್ದೇಶದಿಂದ ತಾಲೂಕಿನ ಹರವು ಗ್ರಾಮದ ಪ್ರಾಚೀನ ಸ್ಮಾರಕ ರಾಮದೇವರ ದೇಗುಲ ಆವರಣದ ದೇವರಕಾಡು ಮಂಥನ ವೇದಿಕೆಯಲ್ಲಿ ತಜ್ಞರೊಂದಿಗೆ ಚರ್ಚೆ ನಡೆಸಲಾಯಿತು.ಚರ್ಚೆಯಲ್ಲಿ ಜಿಲ್ಲೆಯ ಜ್ವಲಂತ ಸಮಸ್ಯೆಗಳು, ನಿರುದ್ಯೋಗ, ಕೈಗಾರಿಕಾ ಅಭಿವೃದ್ಧಿ ಕುರಿತು ಚರ್ಚೆ ವೇಳೆ ಸಾಮಾಜಿಕ ಹೋರಾಟಗಾರ ಡಾ.ಎಚ್.ಎಲ್.ರವೀಂದ್ರ ಮಾತನಾಡಿ, ಜಿಲ್ಲೆಯಲ್ಲಿ ಕಬ್ಬು ಮತ್ತು ತೆಂಗು ಆಧಾರಿತ ಕೈಗಾರಿಕೆ ಸ್ಥಾಪನೆ ಮಾಡುವ ಸಂಬಂದ ತಜ್ಞರೊಂದಿಗೆ ಸಿಎಫ್‌ಟಿಆರ್‌ಐನ ಪರಿಣಿತರ ಕರೆಯಿಸಿ ಚರ್ಚೆ ಮಾಡಲಾಗಿದೆ ಎಂದರು.
ಜಿಲ್ಲೆಯ ಕೆ.ಆರ್.ಪೇಟೆ, ತೂಬಿನಕೆರೆ ಅಥವಾ ಸೋಮನಹಳ್ಳಿ ಸೇರಿದಂತೆ ಯಾವ ಭಾಗದಲ್ಲಿ ಕೈಗಾರಿಕೆ ಸ್ಥಾಪನೆಯಾಗಬೇಕು. ಯಾವ ಕೈಗಾರಿಕೆ ಅವಶ್ಯಕತೆ ಇದೆ ಎಂಬುದರ ಬಗ್ಗೆ ಸಮಗ್ರವಾಗಿ ಚರ್ಚಿಸಿದ್ದೇವೆ. ಆ.12ರ ನಂತರ ನಮ್ಮ ಚರ್ಚೆಯ ಒಟ್ಟು ಅಂಶಗಳ ಪ್ರಾಜೆಕ್ಟ್ ತಯಾರು ಮಾಡಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಮುಂದಿಡಲಾಗುವುದು ಎಂದರು.ಕೇಂದ್ರ ಸಚಿವರು ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆ ಆಸಕ್ತಿ ವಹಿಸಿದ್ದು, ಅದಕ್ಕೆ ಪೂರಕವಾಗಿ ನಾವು ಚರ್ಚೆ ನಡೆಸಿದ್ದೇವೆ ಎಂದು ವಿವರಿಸಿದರು.
ಚರ್ಚಾಗೋಷ್ಠಿಯಲ್ಲಿ ಮೈಸೂರು ಸಿಎಫ್‌ಟಿಆರ್‌ಐನ ಅನಿಲ್ ಕುಮಾರ್, ಕಾವೇರಿ ಬಯೋ ರಿಫೈನಿರಿಸ್ ನ ಜಿ.ಎನ್.ಕುಮಾರ್, ಬ.ನಾ.ರಘು, ಪ್ರಗತಿಪರ ಚಿಂತಕರಾದ ಹರವು ದೇವೇಗೌಡ, ಕೆ.ಎಸ್.ನಾಗೇಗೌಡ, ಎನ್.ಎಸ್.ಚಂದ್ರಣ್ಣ, ಎಂ.ಬಿ.ನಾಗಣ್ಣಗೌಡ, ಹಾರೋಹಳ್ಳಿ ಧನ್ಯಕುಮಾರ್, ಬಿ.ನರೇಂದ್ರಬಾಬು, ಹರೀಶ್, ಪ್ರಭುಶಂಕರ್, ನಟರಾಜು, ಕ್ಯಾತನಹಳ್ಳಿ ಗುರುರಾಜು, ಮಂಡ್ಯ ಸೋಮು, ಪತ್ರಕರ್ತ ಎನ್.ಕೃಷ್ಣೇಗೌಡ, ಬಿ.ಕೆ.ವಿಜಯಕುಮಾರ್ ಸೇರಿದಂತೆ ಹಲವು ಪ್ರಗತಿಪರರು ಭಾಗವಹಿಸಿದ್ದರು.