ನಿತ್ಯ ಯೊಗದಿಂದ ರೋಗಮುಕ್ತ ಜೀವನ ಸಾಧ್ಯ: ದೈವಜ್ಞ

| Published : Jun 22 2024, 12:56 AM IST

ಸಾರಾಂಶ

ಪ್ರತಿಯೊಬ್ಬರು ನಿತ್ಯವೂ ಯೊಗ ಮಾಡುವುದರಿಂದ ರೋಗ ಮುಕ್ತ ಜೀವನ ಸಾಧ್ಯವಾಗುತ್ತದೆ ಎಂದು ಸಿವಿಲ್ ನ್ಯಾಯಧೀಶ ಸಂತೊಷಕುಮಾರ ದೈವಜ್ಞ ಹೇಳಿದರು.

ಕನ್ನಡಪ್ರಭ ವಾರ್ತೆ ಚಿತ್ತಾಪುರ

ಪ್ರತಿಯೊಬ್ಬರು ನಿತ್ಯವೂ ಯೊಗ ಮಾಡುವುದರಿಂದ ರೋಗ ಮುಕ್ತ ಜೀವನ ಸಾಧ್ಯವಾಗುತ್ತದೆ ಎಂದು ಸಿವಿಲ್ ನ್ಯಾಯಧೀಶ ಸಂತೊಷಕುಮಾರ ದೈವಜ್ಞ ಹೇಳಿದರು.

ಅಂತಾರಾಷ್ಟ್ರೀಯ ಯೊಗ ದಿನದ ಅಂಗವಾಗಿ ಶುಕ್ರವಾರ ತಾಲೂಕು ನ್ಯಾಯಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಪತಂಜಲಿ ಯೊಗ ಸಮಿತಿ ಇವರ ಸಂಯುಕ್ತಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.ಯೊಗಾಭ್ಯಾಸ ಪ್ರಸ್ತುತ ಒತ್ತಡದ ಜೀವನಕ್ಕೆ ಅತ್ಯಮೂಲವಾದ ಜ್ಞಾಷದಿಯಾಗಿದ್ದು ಇದರಿಂದ ದೈಹಿಕ ಮತ್ತು ಮಾನಸಿಕವಾಗಿ ಆರೊಗ್ಯವಾಗಿರಬಹುದು ಎಷ್ಟೆ ಒತ್ತಡದಲ್ಲಿದ್ದರೂ ಪ್ರತಿದಿನ ಕನಿಷ್ಟ ಒಂದು ಗಂಟೆಯಾದರೂ ಯೊಗಭ್ಯಾಸ ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಅಪರ ಜಿಲ್ಲಾ ಸರ್ಕಾರಿ ವಕೀಲರಾದ ಈಶ್ವರರಾವ ಕುಲ್ಕರ್ಣಿ, ವಕೀಲರ ಸಂಘದ ಅಧ್ಯಕ್ಷ ನಾಗರಾಜ ಕಡಬೂರ, ಸಹಾಯಕ ಸರ್ಕಾರಿ ಅಭಿಯೊಜಕರಾದ ಅಂಜನಾದೇವಿ.ಆರ್, ಶಿರಸ್ತೆದಾರರಾದ ಸುಧಾ ಪಾಟೀಲ್, ಸಾಬಯ್ಯ ಗುತ್ತೆದಾರ, ನ್ಯಾಯವಾದಿಗಳಾದ ಎಸ್.ಪಿ ಸಾತನೂರ, ಎ.ಎಂ ಅವಂಟಿ ಸ್ಭೆರಿದಂತೆ ನ್ಯಾಯವಾದಿಗಳು ಹಾಗೂ ಸಿಬ್ಬಂದಿಗಳು ಯೊಗ ದಿನದಲ್ಲಿ ಪಾಲ್ಗೊಂಡಿದ್ದರು.