ಸಾರಾಂಶ
ನಮ್ಮ ಭಾಗ್ಯ, ಮನುಷ್ಯ ಆಧ್ಯಾತ್ಮಿಕ ಚಿಂತನೆಯಿಂದ ರೋಗ ನಿವಾರಣೆ ಮಾಡಿಕೊಳ್ಳಲು ಸಾಧ್ಯ
ನರಗುಂದ: ಪ್ರತಿಯೊಬ್ಬರು ಆಧ್ಯಾತ್ಮಿಕ ಚಿಂತನೆಯಿಂದ ರೋಗಗಳನ್ನೂ ದೂರ ಮಾಡಬಹುದು ಎಂದು ಡಾ.ಎ.ಐ. ಹುಯಿಲಗೋಳ ಹೇಳಿದರು.
ಅವರು ಭಾನುವಾರ ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ವೈದ್ಯರ ದಿನಾಚರಣೆಯ ಅಂಗವಾಗಿ ದೈವಿ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿ, ವೈದ್ಯ ವೃತ್ತಿ ಪವಿತ್ರವಾದದ್ದು, ಅನೇಕರನ್ನು ರೋಗ ಮುಕ್ತಗೊಳಿಸುವ ಅವಕಾಶ ನಮಗೆ ಸಿಕ್ಕಿದೆ. ಇನ್ನು ಹೆಚ್ಚಿನ ಶಕ್ತಿ ಸಿಗಲೆಂದು ಪರಮಾತ್ಮನ ಈ ಸಂಸ್ಥೆ ನಮ್ಮನ್ನು ಆಹ್ವಾನಿಸಿದ್ದು ನಮ್ಮ ಭಾಗ್ಯ, ಮನುಷ್ಯ ಆಧ್ಯಾತ್ಮಿಕ ಚಿಂತನೆಯಿಂದ ರೋಗ ನಿವಾರಣೆ ಮಾಡಿಕೊಳ್ಳಲು ಸಾಧ್ಯ ಎಂದರು.ಡಾ.ಎಫ್.ಕೆ. ಸೌದತ್ತಿ ಮಾತನಾಡಿ, ವೈದ್ಯರಾದರು ಕೂಡ ಅನೇಕ ಸಮಸ್ಯೆ ಎದುರಿಸಬೇಕಾಗುತ್ತದೆ, ಆದರೆ ಈಶ್ವರೀಯ ವಿಶ್ವವಿದ್ಯಾಲಯ ಎದುರಿಸುವ ಶಕ್ತಿ ಕಲಿಸುತ್ತದೆ. ಹೇಗೆ ಬದುಕನ್ನು ರೂಪಿಸಿಕೊಳ್ಳಬೇಕು ಎಂಬ ಧೈರ್ಯ ಕೊಡುತ್ತದೆ ಎಂದರು.
ರಾಜಯೋಗಿನಿ ಬ್ರಹ್ಮಕುಮಾರಿ ನಿರ್ಮಲಕ್ಕನವರ ಮಾತನಾಡಿ, ಜಗತ್ತಿನಲ್ಲೇ ಅತಿ ಶ್ರೇಷ್ಠವಾದದ್ದು ವೈದ್ಯ ವೃತ್ತಿ, ಪರಮಾತ್ಮನಿಗೂ ಭವ ರೋಗ ವೈದ್ಯ ಎಂದು ಕರೆಯುತ್ತಾರೆ. ಈ ವೈದ್ಯರು ಶರೀರದ ರೋಗ ವಾಸಿ ಮಾಡಿದರೆ ಪರಮಾತ್ಮ ಭವರೋಗ ವೈದ್ಯ ಮನಸ್ಸಿನ ಕಾಯಿಲೆ ವಾಸಿ ಮಾಡುತ್ತಾನೆ.ಇಂದು ಹೆಚ್ಚಿನ ಅನಾರೋಗ್ಯಕ್ಕೆ ಕಾರಣ ಮನಸ್ಸಿನ ಬೇಡದ ವಿಚಾರಗಳು,ಚಿಂತೆ,ಅಶಾಂತಿ. ವೈದ್ಯಕೀಯ ವೃತ್ತಿ ಸೇವೆ ಎಂದು ಪರಿಗಣಿಸಿದಾಗ ಅಲ್ಲಿ ಆಶೀರ್ವಾದ ಸಿಗುತ್ತದೆ ನಮ್ಮೆಲ್ಲರ ಮಾನಸಿಕ ದೈಹಿಕ ಆರೋಗ್ಯಕ್ಕೆ ಸತ್ಯ ಪರಮಾತ್ಮನನ್ನು ಅರಿತು ಆ ಪರಮಾತ್ಮನನ್ನು ನೆನೆಯಬೇಕು ಎಂದು ತಿಳಿಸಿದರು.ಡಾ.ಸಿ.ಎಸ್. ಅಸೂಟಿ, ಡಾ. ಎಸ್.ಬಿ.ಭೂಮಣ್ಣವರ, ಡಾ.ಎಸ್ಎಫ್ ಸೌದತ್ತಿ, ಡಾ. ಪ್ರವೀಣ ಮೇಟಿ, ಡಾ. ಜೆ.ಜಿ. ಭದ್ರಗೌಡರ, ಡಾ. ಎಸ್.ಕೆ. ಪತ್ತೆಪುರ್, ಡಾ.ಸಿ. ಕೆ. ರಾಜನಗೌಡ್ರು, ಡಾ.ಎಸ್.ವಿ. ಪಾಟೀಲ್, ಡಾ.ಪತ್ತೆಪುರ, ಡಾ.ಎಸ್.ವಿ. ಪಾಟೀಲ್, ಡಾ.ಶಿವಲೀಲಾ ಪಾಟೀಲ್, ಡಾ.ಜಿ.ಎಸ್.ನುಗ್ಗಾನಟ್ಟಿ, ಡಾ.ಜಮಾದಾರ, ಡಾ. ನವೀನ್ ಶಿರಸಂಗಿ, ಡಾ.ವೀರನಗೌಡರ ವೀರನಗೌಡ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಬ್ರಹ್ಮಕುಮಾರಿ ಪ್ರಭಕ್ಕನವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.