ಸಾರಾಂಶ
ಉತ್ತರ ಪ್ರದೇಶ, ಬಿಹಾರಗಳಲ್ಲಿ ಶಾಸಕರು ಹೊಡೆದಾಡುವುದು, ಮೈಕ್ ಎಸೆಯುವುದನ್ನು ನೋಡಿದ್ದೇವು, ಆದರೆ ವಿಧಾನ ಸೌಧದಲ್ಲಿ ಶಾಸಕನನ್ನು ಯಾವುದೇ ಆದೇಶ, ಸಾಕ್ಷ್ಯಧಾರಗಳಿಲ್ಲದೆ ಬಂಧಿಸಿದ ಘಟನೆ ದೇಶದ 70 ವರ್ಷಗಳ ಸ್ವತಂತ್ರ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ರಾಜ್ಯದಲ್ಲಿ ನಡೆದಿದೆ, ಇದು ರಾಜ್ಯ ಸರ್ಕಾರದ ಬರ್ಬರ ಕೃತ್ಯವಾಗಿದೆ ಎಂದವರು ಆರೋಪಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಸಾಂವಿಧಾನಿಕ ಬಿಕ್ಕಟ್ಟು ತಲೆದೋರಿದೆ. ಆದ್ದರಿಂದ ರಾಜ್ಯಪಾಲರು ಮಧ್ಯ ಪ್ರವೇಶಿಸಿ, ರಾಜ್ಯ ಸರ್ಕಾರವನ್ನು ಬರ್ಖಾಸ್ತುಗೊಳಿಸಬೇಕು ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಆಗ್ರಹಿಸಿದ್ದಾರೆ. ಅವರು ಶುಕ್ರವಾರ, ರಾಜ್ಯ ಕಾಂಗ್ರೆಸ್ ಸರ್ಕಾರ ಬಿಜೆಪಿಯ ನಾಯಕ ಸಿ.ಟಿ.ರವಿ ಅವರನ್ನು ಬಂಧಿಸಿದ್ದನ್ನು ವಿರೋಧಿಸಿ ಜಿಲ್ಲಾ ಬಿಜೆಪಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡುತ್ತಿದ್ದರು.ಉತ್ತರ ಪ್ರದೇಶ, ಬಿಹಾರಗಳಲ್ಲಿ ಶಾಸಕರು ಹೊಡೆದಾಡುವುದು, ಮೈಕ್ ಎಸೆಯುವುದನ್ನು ನೋಡಿದ್ದೇವು, ಆದರೆ ವಿಧಾನ ಸೌಧದಲ್ಲಿ ಶಾಸಕನನ್ನು ಯಾವುದೇ ಆದೇಶ, ಸಾಕ್ಷ್ಯಧಾರಗಳಿಲ್ಲದೆ ಬಂಧಿಸಿದ ಘಟನೆ ದೇಶದ 70 ವರ್ಷಗಳ ಸ್ವತಂತ್ರ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ರಾಜ್ಯದಲ್ಲಿ ನಡೆದಿದೆ, ಇದು ರಾಜ್ಯ ಸರ್ಕಾರದ ಬರ್ಬರ ಕೃತ್ಯವಾಗಿದೆ ಎಂದವರು ಆರೋಪಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ, ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ನಾಯಕರಾದ ದಿನಕರ ಶೆಟ್ಟಿ ಹೆರ್ಗ, ಶ್ರೀಶ ನಾಯಕ್ ಪೆರ್ಣಂಕಿಲ, ಶ್ಯಾಮಲಾ ಕುಂದರ್, ಶಿಲ್ಪ ಸುವರ್ಣ, ಶ್ರೀಕಾಂತ್ ನಾಯಕ್ ಅಲೆವೂರು, ಶ್ರೀಕಾಂತ್ ಕಾಮತ್, ಶ್ರೀನಿಧಿ ಹೆಗ್ಡೆ, ಶಿವಕುಮಾರ್, ವಿಜಯಕುಮಾರ್ ಕೊಡವೂರು, ರಾಜೇಶ್ ಕಾವೇರಿ, ಪ್ರಭಾಕರ ಪೂಜಾರಿ, ಪೃಥ್ವಿರಾಜ್ ಶೆಟ್ಟಿ, ಉಮೇಶ್ ನಾಯ್ಕ್, ಕಿರಣ್‌ಕುಮಾರ್ ಬೈಲೂರು ಮುಂತಾದವರಿದ್ದರು.