ಕಾನೂನು ಬಾಹಿರ ಜಮೀನು ಮಂಜೂರಾತಿ ವಜಾಗೊಳಿಸಿ

| Published : Feb 06 2025, 12:16 AM IST

ಕಾನೂನು ಬಾಹಿರ ಜಮೀನು ಮಂಜೂರಾತಿ ವಜಾಗೊಳಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾನೂನು ಬಾಹಿರವಾಗಿ ನಡೆದಿರುವ ಜಮೀನು ಮಂಜೂರಾತಿ ವಜಾ ಮಾಡಿ, ಪಾಲನಜೋಗಹಳ್ಳಿ, ತಮ್ಮಶೆಟ್ಟಿಹಳ್ಳಿ, ರೋಜಿಪುರ ಮತ್ತು ಬಾಶೆಟ್ಟಿಹಳ್ಳಿ ಕೆರೆ ಒತ್ತುವರಿ ತೆರವು ಹಾಗೂ ಮದ್ಯ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿ ಪ್ರಬುದ್ಧ ಕರ್ನಾಟಕ ಭೀಮಸೇನೆ ಕಾರ್ಯಕರ್ತರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ, ದೊಡ್ಡಬಳ್ಳಾಪುರ

ಕಾನೂನು ಬಾಹಿರವಾಗಿ ನಡೆದಿರುವ ಜಮೀನು ಮಂಜೂರಾತಿ ವಜಾ ಮಾಡಿ, ಪಾಲನಜೋಗಹಳ್ಳಿ, ತಮ್ಮಶೆಟ್ಟಿಹಳ್ಳಿ, ರೋಜಿಪುರ ಮತ್ತು ಬಾಶೆಟ್ಟಿಹಳ್ಳಿ ಕೆರೆ ಒತ್ತುವರಿ ತೆರವು ಹಾಗೂ ಮದ್ಯ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿ ಪ್ರಬುದ್ಧ ಕರ್ನಾಟಕ ಭೀಮಸೇನೆ ಕಾರ್ಯಕರ್ತರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಅರೇಹಳ್ಳಿ ಗುಡ್ಡದಹಳ್ಳಿಯ ನಗರದ ಅಂಚಿನ ಸರ್ವೇ ನಂಬರ್‌ಗಳಲ್ಲೇ ಆರು ಎಕರೆ ಜಮೀನನ್ನು ಕಾನೂನು ಬಾಹಿರವಾಗಿ ಮಂಜೂರು ಮಾಡಲಾಗಿದೆ. ಇಡೀ ಮಂಜೂರಾತಿ ಪ್ರಕ್ರಿಯೆ ಅಕ್ರಮ ಎಂದು ದೂರಿದ ಪ್ರತಿಭಟನನಿರತರು, ಮಂಜೂರಾತಿ ವಜಾಕ್ಕೆ ಆಗ್ರಹಿಸಿದರು.

ಸಂಘಟನೆ ಅಧ್ಯಕ್ಷ ಯು.ಮುನಿರಾಜು ಮಾತನಾಡಿ, ಪಾಲನಜೋಗಹಳ್ಳಿ ಕೆರೆ ಅಂಗಳ ಒತ್ತುವರಿ ಮಾಡಿಕೊಂಡ ಖಾಸಗಿ ಬಡಾವಣೆ ಸಂಪರ್ಕ ರಸ್ತೆ ನಿರ್ಮಾಣ ಮಾಡಲಾಗಿದೆ. ಬಫರ್‌ಜೋನ್‌ನಲ್ಲೂ ನಿವೇಶನ ನಿರ್ಮಿಸಿ ಅಕ್ರಮವಾಗಿ ಖಾತೆ ಮಾಡಿಕೊಡಲಾಗಿದೆ ಎಂದು ಆರೋಪಿಸಿದರು.

ತಮ್ಮಶೆಟ್ಟಿಹಳ್ಳಿ, ರೋಜಿಪುರ ಮತ್ತು ಬಾಶೆಟ್ಟಿಹಳ್ಳಿ ಕೆರೆ ಒತ್ತುವರಿ ಆಗಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ದಾಖಲೆ ಪರಿಶೀಲನೆ ಮಾಡಿ ಕೆರೆಯ ಗಡಿ ಗುರುತಿಸಿ ಒತ್ತುವರಿ ತೆರವು ಮಾಡಬೇಕು. ಅರೇಹಳ್ಳಿ ಗುಡ್ಡದಹಳ್ಳಿ ಗ್ರಾಮದ ಸಮೀಪ ಸರ್ಕಾರಿ ಜಮೀನಿನಲ್ಲಿ ಬಡವರು ಗುಡಿಸಲು ಹಾಕಿಕೊಂಡು 30 ವರ್ಷಗಳಿಂದಲೂ ವಾಸ ಮಾಡುತ್ತಿದ್ದಾರೆ. ಆದರೆ ಇವರಿಗೆ ಹಕ್ಕುಪತ್ರಗಳನ್ನು ನೀಡಬೇಕು ಎಂದು ಆಗ್ರಹಿಸಿದರು.

ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟದ ಭರಾಟೆ ಮಿತಿಮೀರಿದೆ. ಇದರಿಂದ ಗ್ರಾಮಗಳಲ್ಲಿ ಮಹಿಳೆಯರು, ಯುವಕರು ಮದ್ಯ ವ್ಯವಸನಕ್ಕೆ ತುತ್ತಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.

ತಹಸೀಲ್ದಾರ್ ವಿಭಾ ವಿದ್ಯಾ ರಾಥೋಡ್, ಅಬಕಾರಿ ಇನ್‌ಸ್ಪೆಕ್ಟರ್ ರಾಘವೇಂದ್ರ ಪತ್ರಿಭಟನಕಾರರಿಂದ ಮನವಿ ಸ್ವೀಕರಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ವಕೀಲ ಪುಟ್ಟೇಗೌಡ, ಪ್ರಬುದ್ಧ ಕರ್ನಾಟಕ ಭೀಮಸೇನೆ ಗೌರವ ಅಧ್ಯಕ್ಷ ವಿ.ನಾಗರಾಜು, ಜಿಲ್ಲಾ ಅಧ್ಯಕ್ಷ ಎ.ಮಂಜುನಾಥ್, ಕಾರ್ಯದರ್ಶಿ ಮುನಿ-ರಾಜು,ಉಪಾಧ್ಯಕ್ಷ ವೈ.ಸಿ.ನಾಗರಾಜು, ರಾಜ್ಯ ಸಂಘಟನ ಕಾರ್ಯದರ್ಶಿ ಅಪ್ಪಯ್ಯಣ್ಣ, ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾ‌ರ್, ಸಂಚಾಲಕ ರವಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟರಮಣಪ್ಪ, ತಾಲೂಕು ಉಪಾಧ್ಯಕ್ಷ ರಾಮಕೃಷ್ಣ, ಹೋಬಳಿ ಅಧ್ಯಕ್ಷ ನರಸಿಂಹಮೂರ್ತಿ, ರಾಜ್ಯ ಕಾರ್ಯದರ್ಶಿ ಮುನಿರಾಜು ಇದ್ದರು.