ಸಾರಾಂಶ
ತಾಲೂಕಿನ ಮಾದನ ಹಿಪ್ಪರಗಾ ಪೊಲೀಸ್ ಠಾಣೆ ವ್ಯಾಪ್ತಿಯ ಹಿರೋಳಿಯ ಗ್ರಾಮದಲ್ಲಿನ ಸರ್ಕಾರಿ ಸ್ಮಶಾನ ಭೂಮಿಯಲ್ಲಿ ಶನಿವಾರ ಮೃತ ಮಹಿಳೆಯೊಬ್ಬರ ಅಂತ್ಯಕ್ರಿಯೆಗೆ ಅಡ್ಡಿಯಾದ ಹಿನ್ನೆಲೆ ಗ್ರಾಮಸ್ಥರು ತಮ್ಮ ಗ್ರಾಮದ ಗೇಟ್‍ಮುಂಭಾಗದಿಂದ ಹಾದು ಹೋಗಿರುವ ವಾಗ್ದರಿ, ರಿಬ್ಬನಪಲ್ಲಿಯ ರಾಜ್ಯ ಹೆದ್ದಾರಿಯ ಮೇಲೆ 2 ಗಂಟೆಗಳ ಕಾಲ ಶವಿಟ್ಟು ಪ್ರತಿಭಟನೆ ಕೈಗೊಂಡ ಘಟನೆ ನಡೆದಿದೆ.
ವಾಗ್ದರಿ, ರಿಬ್ಬನಪಲ್ಲಿಯ ರಾಜ್ಯ ಹೆದ್ದಾರಿಯಲ್ಲಿ ಶವವಿಟ್ಟು ಗ್ರಾಮಸ್ಥರ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಆಳಂದ ತಾಲೂಕಿನ ಮಾದನ ಹಿಪ್ಪರಗಾ ಪೊಲೀಸ್ ಠಾಣೆ ವ್ಯಾಪ್ತಿಯ ಹಿರೋಳಿಯ ಗ್ರಾಮದಲ್ಲಿನ ಸರ್ಕಾರಿ ಸ್ಮಶಾನ ಭೂಮಿಯಲ್ಲಿ ಶನಿವಾರ ಮೃತ ಮಹಿಳೆಯೊಬ್ಬರ ಅಂತ್ಯಕ್ರಿಯೆಗೆ ಅಡ್ಡಿಯಾದ ಹಿನ್ನೆಲೆ ಗ್ರಾಮಸ್ಥರು ತಮ್ಮ ಗ್ರಾಮದ ಗೇಟ್‍ಮುಂಭಾಗದಿಂದ ಹಾದು ಹೋಗಿರುವ ವಾಗ್ದರಿ, ರಿಬ್ಬನಪಲ್ಲಿಯ ರಾಜ್ಯ ಹೆದ್ದಾರಿಯ ಮೇಲೆ 2 ಗಂಟೆಗಳ ಕಾಲ ಶವಿಟ್ಟು ಪ್ರತಿಭಟನೆ ಕೈಗೊಂಡ ಘಟನೆ ನಡೆದಿದೆ.ಈ ಹೆದ್ದಾರಿ ತಡೆಯಿಂದಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ಸಂಚರಿಸುವ ಸಾರಿಗೆ ಸಂಸ್ಥೆಯ ಬಸ್ ಹಾಗೂ ಖಾಸಗಿ ಸಾವಿರಾರು ವಾಹನಗಳು ಸೇರಿ ಪ್ರಯಾಣಿಕರು ಪರದಾಡಿದರು. ಗ್ರಾಮದ ಬಸಮ್ಮ ಕಲಶೆಟ್ಟಿ ಎಂಬುವ ಬಡ ಮಹಿಳೆ ಮೃತಹಿನ್ನೆಲೆಯಲ್ಲಿ ಶವ ಸಂಸ್ಕಾರಕ್ಕೆ ಮುಂದಾಗಿದ್ದ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿ ಶವದೊಂದಿಗೆ ಹೆದ್ದಾರಿಯ ಮೇಲೆ ಆಕ್ರೋಶ ಹೊರಹಾಕಿದ್ದರು.ಸರ್ಕಾರದಿಂದ ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನ ಭೂಮಿ ಇದೆ. ಇಲ್ಲಿ ಶವ ಸಂಸ್ಕಾರಕ್ಕೆ ದಲಿತ ಸಮುದಾಯದ ಕೆಲವು ಯುವಕರು ಮಾತ್ರ ಅಡ್ಡಿಪಡಿಸಿದ್ದಾರೆ ಎಂದು ಹೆದ್ದಾರಿಯ ಮೇಲೆ ಎರಡು ಗಂಟೆಗಳಕಾಲ ಶವದೊಂದಿಗೆ ಪ್ರತಿಭಟನೆ ನಡೆಸಿದರು. ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳ ಬಂದು ಸಮಜಾಯಿಸಿ ನೀಡಿದರೂ ಸಹ ಯುವಕರು ಒಪ್ಪದ ಹಿನ್ನೆಲೆಯಲ್ಲಿ ಪ್ರತಿಭಟನೆ ಮುಂದುವರೆಸಲಾಗಿತ್ತು.
ಬಳಿಕ ತಹಸೀಲ್ದಾರ್ ಅಣ್ಣಾರಾವ್ ಪಾಟೀಲ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಇನ್ನೂ ಮುಂದೆ ಈ ರೀತಿ ತಡೆಯಾಗದಂತೆ ನೋಡಿಕೊಳ್ಳಲಾಗುವುದು. ಶವ ಸಂಸ್ಕಾರ ಕೈಗೊಳ್ಳಿ ಎಂದು ಭರವಸೆ ನೀಡಿದ ಮೇಲೆ ಪ್ರತಿಭಟನೆ ಕೈಬಿಟ್ಟು ಗ್ರಾಮಸ್ಥರು ಶವ ಸಂಸ್ಕಾರ ನಡೆಸಿದರು. ಸರ್ಕಾರವೇ ಹಿಂದೆ ನೀಡಿದ ಜಾಗದಲ್ಲಿ ಅಂತ್ಯಸಂಸ್ಕಾರ ಮಾಡಿದಂತೆ ಈಗಲೂ ನಾವು ಮಾಡುತ್ತಿದ್ದೇವೆ. ಪ್ರತಿಬಾರಿ ಗ್ರಾಮದಲ್ಲಿ ಮೃತಪಟ್ಟವರಿಗೆ ಶವ ಸಂಸ್ಕಾರ ಮಾಡುವಾಗ ಸ್ಥಳದಲ್ಲಿ ಅಡ್ಡಿಯಾಗುತ್ತಿದೆ. ಹೀಗೆ ಮುಂದುವರೆದರೆ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮಸ್ಥರು ತಹಸೀಲ್ದಾರರಿಗೆ ಎಚ್ಚರಿಸಿದರು.ಸ್ಮಶಾನ ಭೂಮಿ ಸರ್ಕಾರಿಯಾಗಿದ್ದು, ಇಲ್ಲಿ ತಡೆಮಾಡಲು ಯಾರಿಗೂ ಅವಕಾಶವಿಲ್ಲ. ಯಾರೇ ಮೃತಪಟ್ಟರೂ ಅಂತ್ಯಕ್ರಿಯೆ ಕೈಗೊಳ್ಳಿ. ಸ್ಮಶಾನ ಭೂಮಿಗೆ ನೀಡಿದ ಜಾಗದ ಬಳಿ ದೇಗುಲವಿದೆ. ಇಲ್ಲಿ ಶವ ಸಂಸ್ಕಾರ ಮಾಡಕೂಡದು.0 ಮತ್ತೊಂದು ಕಡೆ ಮಾಡಬೇಕು ಎಂದು ದಲಿತ ಯುವಕರ ವಾದವಾಗಿದೆ.
ಹಿರೋಳಿ ಗ್ರಾಮದಲ್ಲಿ ಎರಡು ಕಡೆ ಸರ್ಕಾರಿ ಸ್ಮಶಾನಭೂಮಿ ಇದೆ. ದಲಿತ ಯುವಕರು ದೇಗುಲವಿದೆ, ಇಲ್ಲಿ ಅಂತ್ಯಕ್ರಿಯೆ ಬೇಡ ಎಂದು ಅಡ್ಡಿಪಡಿಸಿದ್ದರು. ಮತ್ತೊಂದು ಯುವಕರ ಕಡೆ ಅವರು ಹೇಳುವ ಜಾಗದಲ್ಲಿ ಶಾಲೆಯಿದೆ. ಹೀಗಾಗಿ ನಾವು ಹಿಂದಿನಂತೆ ಅಲ್ಲಿಯೇ ಮಾಡುತ್ತೇವೆ ಎಂದು ಗ್ರಾಮದವರ ವಾದವಾಗಿದೆ. ಈ ಕುರಿತು ಎರಡು ಸಮುದಾಯಗಳನ್ನು ಸಭೆ ಕರೆದು ವಿವಾದ ಬಗೆ ಹರಿಸಲಾಗುವುದು ಎಂದು ತಹಸೀಲ್ದಾರ್ ಅಣ್ಣಾರಾವ್ ಪಾಟೀಲ ತಿಳಿಸಿದ್ದಾರೆ.