ಸಾರಾಂಶ
ಕುಮಟಾ: ಇಲ್ಲಿನ ತಾಲೂಕು ಆಡಳಿತ ಸೌಧದಲ್ಲಿ ಸರ್ಕಾರಿ ಸಿಬ್ಬಂದಿ ಮೇಲೆ ಅವಾಚ್ಯವಾಗಿ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ವ್ಯಕ್ತಿ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಇಲ್ಲಿನ ಸರ್ಕಾರಿ ನೌಕರರ ಹಾಗೂ ಕಂದಾಯ ನೌಕರರ ಸಂಘದಿಂದ ಉಪವಿಭಾಗಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಲಾಗಿದೆ.ತಾಲೂಕು ಆಡಳಿತ ಸೌಧದ ಆರ್‌ಆರ್‌ಟಿ ವಿಭಾಗದಲ್ಲಿ ಪ್ರಥಮದರ್ಜೆ ಸಹಾಯಕಿಯಾಗಿ ಕೆಲಸ ಮಾಡುತ್ತಿರುವ ಮಧುರಾ ಎಂ. ನಾಯ್ಕ ಅವರಿಗೆ ಮಾಹಿತಿ ಹಕ್ಕಿನಡಿ ಕೇಳಿದ ವಿಷಯಕ್ಕೆ ಸಂಬಂಧಿಸಿ ವಿನಾಕಾರಣವಾಗಿ ಕಾರವಾರದ ನಂದನಗದ್ದಾದ ವಕೀಲ ಗಿರೀಶ ಕೃಷ್ಣ ನಾಯ್ಕ ಎಂಬವರು ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ. ಸ್ಥಳದಲ್ಲಿದ್ದ ಸಾರ್ವಜನಿಕರು ಅವರ ವರ್ತನೆಗೆ ಆಕ್ಷೇಪಿಸಿದಾಗ ಅವರೊಂದಿಗೂ ಅನುಚಿತವಾಗಿ ವರ್ತಿಸಿದ್ದಾರೆ. ಜವಾಬ್ದಾರಿಯುತ ವಕೀಲರಾಗಿ ತಮ್ಮ ಘನತೆಗೆ ತಕ್ಕಂತೆ ವರ್ತಿಸದೇ ಮಹಿಳಾ ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಬಹಿರಂಗವಾಗಿ ತೇಜೋವಧೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು ಅಕ್ಷಮ್ಯ. ಆದ್ದರಿಂದ ವಕೀಲ ಗಿರೀಶ ಕೃಷ್ಣ ನಾಯ್ಕ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಉಪವಿಭಾಗಾಧಿಕಾರಿ ಕಚೇರಿಯ ತಹಸೀಲ್ದಾರ್ ಅಶೋಕ ಭಟ್ ಮನವಿ ಸ್ವೀಕರಿಸಿದರು. ಕಂದಾಯ ನೌಕರರ ಸಂಘದ ಅಧ್ಯಕ್ಷ ಟಿ.ಎಸ್. ಗಾಣಿಗೇರ್, ಪ್ರಧಾನ ಕಾರ್ಯದರ್ಶಿ ವಿನೋದ ರಾವ್ ಜಿ.ಪಿ., ಗ್ರಾಮ ಆಡಳಿತಾಧಿಕಾರಿ ಸಂಘದ ಅಧ್ಯಕ್ಷ ಚಂದ್ರಶೇಖರ ನಾಯ್ಕ, ಶಿರಸ್ತೇದಾರ ಪಿ.ಎ. ಪೂಜಾರ್, ಉಪತಹಸೀಲ್ದಾರ್ ಗೀತಾ ಎಂ. ನಾಯ್ಕ, ಶಿರಸ್ತೇದಾರ ವಸಂತ ಸಾವಂತ ಹಾಗೂ ಇತರ ಪದಾಧಿಕಾರಿಗಳು, ಸದಸ್ಯರು, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ವಿನಾಯಕ ಎಸ್. ಭಂಡಾರಿ, ಕಾರ್ಯದರ್ಶಿ ಉಮೇಶ ನಾಯ್ಕ, ಗೌರವಾಧ್ಯಕ್ಷ ಆನಂದು ನಾಯ್ಕ, ಪದಾಧಿಕಾರಿಗಳಾದ ನಾಗರಾಜ ನಾಯ್ಕ, ಅನುರಾಧ ಭಟ್, ಗಣೇಶ ನಾಯ್ಕ, ಶ್ರೀಧರ ಮಡಿವಾಳ, ಲಕ್ಷ್ಮಣ ಪಾವಸ್ಕರ್, ಉಪಾಧ್ಯಕ್ಷ ಬೀರದಾಸ ಗುನಗಾ ಇತರರು ಇದ್ದರು.
ನಾಳೆ ಜಾನುವಾರು ಪ್ರದರ್ಶನ, ಚಿಕಿತ್ಸಾ ಶಿಬಿರಯಲ್ಲಾಪುರ: ಜಿಲ್ಲಾ ಪಂಚಾಯಿತಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಗ್ರಾಪಂ ಕಿರವತ್ತಿ ಇವರ ಆಶ್ರಯದಲ್ಲಿ ಕಿರವತ್ತಿಯ ಖರೇವಾಡಾದಲ್ಲಿ ಜ. ೨೯ರಂದು ಬೆಳಗ್ಗೆ ೧೦.೩೦ಕ್ಕೆ ಜಾನುವಾರು ಪ್ರದರ್ಶನ ಮತ್ತು ಜಾನುವಾರು ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ.ಕಾರ್ಯುಕ್ರಮವನ್ನು ಶಾಸಕ ಶಿವರಾಮ ಹೆಬ್ಬಾರ ಉದ್ಘಾಟಿಸುವರು. ಕಿರವತ್ತಿ ಗ್ರಾಪಂ ಅಧ್ಯಕ್ಷೆ ಸಂಗೀತಾ ಕೊಕ್ರೆ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಗ್ರಾಪಂ ಉಪಾಧ್ಯಕ್ಷೆ ಹನುಮವ್ವ ಭಜಂತ್ರಿ, ಸದಸ್ಯರಾದ ಜಾನು ಪಾಂಡ್ರಾಮೀಸೆ, ಜಗ್ಗು ತುಂಬೆ, ಸುನೀಲ ಕಾಂಬ್ಳೆ, ತಾ.ಉ.ಸ. ಸಂಘದ ಅಧ್ಯಕ್ಷೆ ಸಗ್ಗಿಬಾಯಿ ಕೊಕ್ರೆ, ಸಾಮಾಜಿಕ ಕಾರ್ಯಕರ್ತ ವಿಜಯ ಮಿರಾಶಿ, ತಾಪಂ ಆಡಳಿತಾಧಿಕಾರಿ ನಟರಾಜ ಟಿ.ಎಚ್., ಪಶುಪಾಲನಾ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಡಾ. ಕೆ.ಎಂ. ಮೋಹನಕುಮಾರ, ಪಾಲಿ ಕ್ಲಿನಿಕ್‌ನ ತಾಲೂಕು ಉಪನಿರ್ದೇಶಕ ಡಾ. ಉಮೇಶ ಕೊಂಡಿ ಹಾಗೂ ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜೇಶ ಧನವಾಡಕರ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.