ಕಾರವಾರದಲ್ಲಿ ರಸ್ತೆ ಮೇಲೆ ಚಿಪ್ಸ್ ಎಸೆದು ವಿಕೃತಿ

| Published : Nov 06 2024, 11:48 PM IST

ಕಾರವಾರದಲ್ಲಿ ರಸ್ತೆ ಮೇಲೆ ಚಿಪ್ಸ್ ಎಸೆದು ವಿಕೃತಿ
Share this Article
  • FB
  • TW
  • Linkdin
  • Email

ಸಾರಾಂಶ

ಉದ್ದೇಶಪೂರ್ವಕವಾಗಿಯೇ ರಸ್ತೆಯ ಮೇಲೆ ಚಿಪ್ಸ್ ಬಿಸಾಡಿದಂತಿದೆ. ನಗರದ ಒಳರಸ್ತೆಗಳಲ್ಲಿ ಜನರ ಓಡಾಟ ಕಡಿಮೆ ಇರುವ ಪ್ರದೇಶದಲ್ಲಿ ಮದ್ಯದ ಬಾಟಲಿ, ಕುರುಕಲು ತಿಂಡಿಗಳ ಕವರ್ ಹೀಗೆ ವಿವಿಧ ಘನ ತ್ಯಾಜ್ಯವನ್ನು ಬಿಸಾಡಲಾಗುತ್ತಿದೆ.

ಕಾರವಾರ: ನಗರದ ಸೋನಾರವಾಡ, ಕಳಸವಾಡ, ಹಬ್ಬುವಾಡದಲ್ಲಿ ಹಾಳಾದ ಚಿಪ್ಸ್‌ಗಳನ್ನು ಎಸೆಯಲಾಗಿದ್ದು, ಜಾನುವಾರುಗಳು ಅದನ್ನು ತಿನ್ನುತ್ತಿವೆ.ಬೃಹತ್ ಪ್ರಮಾಣದಲ್ಲಿ ಹಾಳಾದ ಚಿಪ್ಸ್‌ಗಳನ್ನು ರಸ್ತೆಯ ಪಕ್ಕದಲ್ಲೇ ಎಸೆಯಲಾಗಿದ್ದು, ಬೀಡಾಡಿ ಜಾನುವಾರುಗಳು ಅದನ್ನು ತಿನ್ನುತ್ತಿವೆ. ಹೆಚ್ಚಿನ ಪ್ರಮಾಣದಲ್ಲಿ ಅದನ್ನೇ ತಿಂದರೆ ಜಾನುವಾರುಗಳಿಗೆ ಅನಾರೋಗ್ಯ ಉಂಟಾಗುವ ಸಾಧ್ಯತೆಯೂ ಇದೆ. ರಸ್ತೆಯ ತುಂಬೆಲ್ಲ ಚೆಲ್ಲಿಕೊಂಡಿದ್ದು, ಗ್ರಾಹಕರು ಖರೀಸಿಕೊಂಡು ಹೋಗುವಾಗ ಆಕಸ್ಮಿಕವಾಗಿ ಬಿದ್ದಂತೆ ಕಾಣುತ್ತಿಲ್ಲ. ಉದ್ದೇಶಪೂರ್ವಕವಾಗಿಯೇ ರಸ್ತೆಯ ಮೇಲೆ ಬಿಸಾಡಿದಂತಿದೆ. ನಗರದ ಒಳರಸ್ತೆಗಳಲ್ಲಿ ಜನರ ಓಡಾಟ ಕಡಿಮೆ ಇರುವ ಪ್ರದೇಶದಲ್ಲಿ ಮದ್ಯದ ಬಾಟಲಿ, ಕುರುಕಲು ತಿಂಡಿಗಳ ಕವರ್ ಹೀಗೆ ವಿವಿಧ ಘನ ತ್ಯಾಜ್ಯವನ್ನು ಬಿಸಾಡಲಾಗುತ್ತಿದೆ. ನಗರಸಭೆಯ ಕಸದ ವಾಹನ ಮೂಲಕ ಪ್ರತಿನಿತ್ಯ ಮನೆಗಳಲ್ಲಿನ, ಹೋಟೆಲ್, ಅಂಗಡಿ ಮುಂಗಟ್ಟುಗಳಲ್ಲಿನ ಘನತ್ಯಾಜ್ಯವನ್ನು ಸಂಗ್ರಹಿಸಲಾಗುತ್ತಿದ್ದು, ಕಸದ ವಾಹನಕ್ಕೆ ನೀಡುವ ಬದಲು ಪ್ರಾಣಿಗಳಿಗೆ ಅಪಾಯಕಾರಿಯಾಗುವಂತೆ ಮತ್ತು ನಗರದ ಅಂದಗೆಡಿಸಿ ಅಸಹ್ಯ ಹುಟ್ಟುವಂತೆ ರಸ್ತೆಯ ಪಕ್ಕದಲ್ಲೇ ತ್ಯಾಜ್ಯ ಬಿಸಾಡಿದವರ ವಿರುದ್ಧ ನಗರಸಭೆ ಕ್ರಮವಹಿಸಬೇಕಿದೆ. ಜೇನು ಕಚ್ಚಿ ಅಸ್ವಸ್ಥಗೊಂಡಿದ್ದ ಮಹಿಳೆ ಸಾವು

ಭಟ್ಕಳ: ತಾಲೂಕಿನ ಜಾಲಿಕೋಡಿಯಲ್ಲಿ ಜೇನುನೋಣ ದಾಳಿಗೆ ತುತ್ತಾಗಿ ತೀವ್ರ ಅಸ್ವಸ್ಥಗೊಂಡಿದ್ದ ಮಹಿಳೆಯೋರ್ವಳು ಬುಧವಾರ ಮೃತಪಟ್ಟಿದ್ದಾರೆ.ಮೃತ ಮಹಿಳೆಯನ್ನು ಜಾಲಿಕೋಡಿಯ ನಿವಾಸಿ ಮಾಸ್ತಮ್ಮ ಮಂಜಪ್ಪ ನಾಯ್ಕ (70) ಎಂದು ಗುರುತಿಸಲಾಗಿದೆ. ಮಂಗಳವಾರ ಜಾಲಿಕೋಡಿಯಲ್ಲಿ ಒಂದೇ ಕುಟುಂಬದ ಮೂವರ ಮೇಲೆ ಜೇನುನೋಣ ದಾಳಿ ಮಾಡಿ ಎಲ್ಲರೂ ತೀವ್ರ ಅಸ್ವಸ್ಥಗೊಂಡಿದ್ದರು. ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ರಾತ್ರಿಯ ತನಕ ಚಿಕಿತ್ಸೆಗೆ ಸ್ಪಂದಿಸುತ್ತಿದ್ದ ಮಹಿಳೆ ಮಾಸ್ತಮ್ಮ ಅವರು ಬುಧವಾರ ಬೆಳಗ್ಗೆ ಕೋಮಾ ಸ್ಥಿತಿಗೆ ತಲುಪಿದರು. ನಗರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.