ಹುತ್ತಕ್ಕೆ ಹಾಳು ಎರೆಯದೇ ಮಕ್ಕಳಿಗೆ ಹಂಚಿ

| Published : Aug 05 2024, 12:41 AM IST

ಸಾರಾಂಶ

ನಾಗರ ಪಂಚಮಿಯಂದು ಹುತ್ತಕ್ಕೆ ಹಾಗೂ ನಾಗನ ಪ್ರತಿಮೆಗಳಿಗೆ ಹಾಲು ಎರೆಯುವುದನ್ನು ಬಿಟ್ಟು, ಬಡವರಿಗೆ ಹಾಗೂ ನಿರ್ಗತಿಕರಿಗೆ ಹಾಲು ವಿತರಿಸುವ ಮೂಲಕ ಮಾನವ ಬಂಧುತ್ವ ವೇದಿಕೆಯಿಂದ ಬಸವ ಪಂಚಮಿ ಆಚರಿಸಲಾಗುತ್ತಿದೆ ಎಂದು ವೇದಿಕೆಯ ರಾಜ್ಯ ಸಂಚಾಲಕ ಪ್ರೊ. ಎ.ಬಿ.ರಾಮಚಂದ್ರಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ನಾಗರ ಪಂಚಮಿಯಂದು ಹುತ್ತಕ್ಕೆ ಹಾಗೂ ನಾಗನ ಪ್ರತಿಮೆಗಳಿಗೆ ಹಾಲು ಎರೆಯುವುದನ್ನು ಬಿಟ್ಟು, ಬಡವರಿಗೆ ಹಾಗೂ ನಿರ್ಗತಿಕರಿಗೆ ಹಾಲು ವಿತರಿಸುವ ಮೂಲಕ ಮಾನವ ಬಂಧುತ್ವ ವೇದಿಕೆಯಿಂದ ಬಸವ ಪಂಚಮಿ ಆಚರಿಸಲಾಗುತ್ತಿದೆ ಎಂದು ವೇದಿಕೆಯ ರಾಜ್ಯ ಸಂಚಾಲಕ ಪ್ರೊ. ಎ.ಬಿ.ರಾಮಚಂದ್ರಪ್ಪ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗರಹಾವು ಹಾಲು ಕುಡಿಯುವುದಿಲ್ಲ. ಕಾರಣ, ಹಾಲನ್ನು ಮಕ್ಕಳಿಗೆ ಹಂಚುವ ಕೆಲಸಕ್ಕೆ ಎಲ್ಲರೂ ಕೈ ಜೋಡಿಸಿ ಎಂದು ಕರೆ ನೀಡಿದರು.

ರಾಜ್ಯದಲ್ಲಿ ಪ್ರತಿವರ್ಷ 40 ಸಾವಿರಕ್ಕಿಂತ ಹೆಚ್ಚಿನ ಮಕ್ಕಳು ಅಪೌಷ್ಠಿಕತೆಯಿಂದ ಮರಣ ಹೊಂದುತ್ತಿದ್ದಾರೆ. ಜತೆಗೆ ಲಕ್ಷಾಂತರ ಮಕ್ಕಳು ಅಪೌಷ್ಠಿಕತೆಯಿಂದ ಬೇರೆ ಬೇರೆ ರೋಗಗಳಿಂದ ಬಳಲುತ್ತಿದ್ದಾರೆ. ಅದಕ್ಕಾಗಿ ನಾಗರ ಪಂಚಮಿ ಹಬ್ಬದ ನಿಮಿತ್ತ ಲಕ್ಷಾಂತರ ಲೀಟರ್ ಹಾಲನ್ನು ಪೋಲು ಮಾಡದೇ ಬಡ ಮಕ್ಕಳಿಗೆ, ರೋಗಿಗಳಿಗೆ ನೀಡುವ ಮೂಲಕ ಪೌಷ್ಠಿಕ ಆಹಾರ ಪೋಲಾಗುವುದನ್ನು ತಪ್ಪಿಸಬೇಕಿದೆ. ಆಹಾರದ ನಷ್ಟ ದೇಶದ ನಷ್ಟ ಎಂದು ಮನವರಿಕೆ ಮಾಡಿಕೊಳ್ಳಬೇಕಾಗಿದೆ. ಅದಕ್ಕಾಗಿ ಜಿಲ್ಲೆಯ ಜನರು ನಾಗರ ಪಂಚಮಿಯ ಬದಲಾಗಿ ಬಸವ ಪಂಚಮಿಯನ್ನು ಆಚರಿಸಿ ಎಂದು ವಿನಂತಿಸಿಕೊಂಡರು.

ವೇದಿಕೆ ಮುಖಂಡರಾದ ಭರಮಣ್ಣ ತೋಳಿ, ಶ್ರೀಶೈಲ ಅಂಟಿನ, ಮಂಜುಳಾ ಭೂಸಾರೆ, ಡಾ. ಎಸ್.ಎಚ್.ತಳ್ಳನ್ನವರ, ರಮೇಶ ಬದ್ನೂರು ಹಾಗೂ ಚಂದ್ರಶೇಖರ ರಾಠೋಡ ಸೇರಿದಂತೆ ಇತರರಿದ್ದರು.