ಸಮಪರ್ಕ ಬೀಜ, ಗೊಬ್ಬರ ವಿತರಿಸಿ

| Published : Jun 20 2024, 01:06 AM IST

ಸಾರಾಂಶ

ನಾಗಠಾಣ ರೈತ ಸಂಪರ್ಕ ಕೇಂದ್ರಕ್ಕೆ ವಿಜಯಪುರ ತಹಸೀಲ್ದಾರ್ ಕವಿತಾ ಭೇಟಿ ನೀಡಿ ರೈತರಿಗೆ ವಿತರಣೆ ಆಗುತ್ತಿರುವ ಬಿತ್ತನೆ ಬೀಜದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಕನ್ನಡಪ್ರಭ ವಾರ್ತೆ ವಿಜಯಪುರ

ನಾಗಠಾಣ ರೈತ ಸಂಪರ್ಕ ಕೇಂದ್ರಕ್ಕೆ ವಿಜಯಪುರ ತಹಸೀಲ್ದಾರ್ ಕವಿತಾ ಭೇಟಿ ನೀಡಿ ರೈತರಿಗೆ ವಿತರಣೆ ಆಗುತ್ತಿರುವ ಬಿತ್ತನೆ ಬೀಜದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ರೈತರಿಗೆ ಬಿತ್ತನೆ ಬೀಜ ವಿತರಣೆ ವೇಳೆ ವಿಳಂಬ ಆಗುತ್ತಿದ್ದು, ರೈತರು ರೈತ ಸಂಪರ್ಕ ಕೇಂದ್ರ ಮುಂದೆ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿಯಿದೆ. ಕೆಲವೆಡೆ ನೂಕುನುಗ್ಗಲು ಆಗುತ್ತಿದೆ. ಈ ಹಿನ್ನೆಲೆಯಲ್ಲಿ ತಹಸೀಲ್ದಾರ್ ಕವಿತಾ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಸಮರ್ಪಕವಾಗಿ ರೈತರಿಗೆ ಬಿತ್ತನೆ ಬೀಜ ಗೊಬ್ಬರ ವಿತರಿಸುವಂತೆ ಕೃಷಿ ಅಧಿಕಾರಿಗಳಿಗೆ ತಾಕೀತು ಮಾಡಿದರು. ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ಬಳಿಕ ನಾಗಠಾಣ ಗ್ರಾಮದಲ್ಲಿ ಇಂದಿರಾಗಾಂಧಿ ವಸತಿ ಶಾಲೆಗೆ ತೆರಳುವ ರಸ್ತೆ ತಕರಾರು ಹಿನ್ನೆಲೆಯಲ್ಲಿ ಸ್ದಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತದ್ದರು.