ಸಾರಾಂಶ
ಆಯುಷ್ಮಾನ್ ಭವ ಆರೋಗ್ಯ ಯೋಜನೆಯಡಿ ಎಲ್ಲರಿಗೂ ಕಾರ್ಡ್‌ಗಳನ್ನು ವಿತರಣೆ ಮಾಡಲಾಗುವುದಲ್ಲದೆ ಅಸಾಂಕ್ರಮಿಕ ರೋಗಗಳ ಪತ್ತೆ ಮತ್ತು ತಪಾಸಣೆ ಕಾರ್ಯವನ್ನು ತಜ್ಞ ವೈದ್ಯರುಗಳಿಂದ ನಡೆಸಲಾಗುವುದು ಎಂದು ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಜಿ.ಆರ್. ತಿಮ್ಮೇಗೌಡ ಹೇಳಿದರು
ಆರೋಗ್ಯ ಮೇಳದಲ್ಲಿ ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ
ಕನ್ನಡಪ್ರಭ ವಾರ್ತೆ ಸಿರಿಗೆರೆಆಯುಷ್ಮಾನ್ ಭವ ಆರೋಗ್ಯ ಯೋಜನೆಯಡಿ ಎಲ್ಲರಿಗೂ ಕಾರ್ಡ್‌ಗಳನ್ನು ವಿತರಣೆ ಮಾಡಲಾಗುವುದಲ್ಲದೆ ಅಸಾಂಕ್ರಮಿಕ ರೋಗಗಳ ಪತ್ತೆ ಮತ್ತು ತಪಾಸಣೆ ಕಾರ್ಯವನ್ನು ತಜ್ಞ ವೈದ್ಯರುಗಳಿಂದ ನಡೆಸಲಾಗುವುದು ಎಂದು ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಜಿ.ಆರ್. ತಿಮ್ಮೇಗೌಡ ಹೇಳಿದರು.ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯುಷ್ಮಾನ್ ಭವ ಕಾರ್ಯಕ್ರಮದಡಿ ಏರ್ಪಡಿಸಿದ್ದ ತಜ್ಞ ವೈದ್ಯರಿಂದ ಆರೋಗ್ಯ ಮೇಳ, ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೀಟ ಜನ ರೋಗ, ಕುಷ್ಠರೋಗ ಹಾಗೂ ಇತರೆ ಸಾಂಕ್ರಾಮಿಕ ರೋಗಗಳ ತಪಾಸಣಾ ಶಿಬಿರ, ತಾಯಿ ಮತ್ತು ಮಕ್ಕಳ ಆರೋಗ್ಯ ಹಾಗೂ ಪೌಷ್ಠಿಕ ಆರೋಗ್ಯ ಶಿಬಿರ, ಅನಿಮೀಯಾ ಮತ್ತು ಕಣ್ಣಿನ ತಪಾಸಣೆ ಮತ್ತು ಚಿಕಿತ್ಸೆಯನ್ನು ಎಲ್ಲಾ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಜ್ಞ ವೈದ್ಯರಿಂದ ನೀಡಲಾಗುವುದು. ವಿಶೇಷ ತಜ್ಞರಿಂದ ವೈದ್ಯಕೀಯ ಸೇವೆ ಸದುಪಯೋಗ ಪಡಿಸಿಕೊಳ್ಳಲು ಸೂಚಿಸಿದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್ಎಸ್ ಮಂಜುನಾಥ್ ಮಾತನಾಡಿ, ಜಿಲ್ಲೆಯಲ್ಲಿ ಆಯುಷ್ಮಾನ್ ಭವ ಯೋಜನೆಯಡಿ ಪ್ರತಿ ಮಂಗಳವಾರ 11 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 5 ತಾಲೂಕು ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರನ್ನು ನಿಯೋಜಿಸಿ ಆರೋಗ್ಯ ಮೇಳ ಕೈಗೊಂಡು ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಗುತ್ತಿದೆ. ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮತ್ತು ಆರೋಗ್ಯ ಕ್ಷೇಮ ಉಪ ಕೇಂದ್ರಗಳಲ್ಲಿ ಸಾಂಕ್ರಾಮಿಕವಲ್ಲದ ರೋಗಗಳಾದ ಮಧುಮೇಹ, ರಕ್ತದ ಒತ್ತಡ, ಕ್ಯಾನ್ಸರ್, ಹೃದಯ ರೋಗ ಇತರೆ ರೋಗಗಳ ತಪಾಸಣೆ ನಡೆಸಲಾಗುತ್ತದೆ. ಉಚಿತ ಚಿಕಿತ್ಸೆ ಮತ್ತು ನಿರ್ದೇಶನ ಮಾಡಲಾಗುತ್ತಿದೆ ಎಂದರು.ಸಕ್ರಿಯೆ ಕ್ಷಯ ರೋಗಪತ್ತೆ, ಕುಷ್ಟರೋಗ ತಪಾಸಣೆ, ಯೋಗ ಶಿಕ್ಷಣ, ಕುಟುಂಬ ಕಲ್ಯಾಣ ಯೋಜನೆ ಅನುಷ್ಠಾನ ಆಯುಷ್ಮಾನ್ ಭವ ಯೋಜನೆಯಲ್ಲಿ ದೊರೆಯುವ ಸೇವೆಗಳಾಗಿವೆ. ಗರ್ಭಿಣಿ ತಪಾಸಣೆ, ಬಾಣಂತಿ ಆರೈಕೆ, ಮಕ್ಕಳಿಗೆ ಲಸಿಕೆ, ಆರೋಗ್ಯ ಇಲಾಖೆ ಇತರೆ ಎಲ್ಲಾ ಕಾರ್ಯಕ್ರಮಗಳನ್ನು ಆರೋಗ್ಯ ತಪಾಸಣೆಯೊಂದಿಗೆ ಪರಿಚಯಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಹೆರಿಗೆ ಮತ್ತು ಸ್ತ್ರೀರೋಗ ತಜ್ಞ ಡಾ.ಬಿ.ಶ್ರೀಜಾ, ದಂತ ವೈದ್ಯ ಡಾ.ಕೆ.ಬಿಂದು, ಫಾರ್ಮಸಿ ಅಧಿಕಾರಿ ಮೋಹನ್, ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಶುಶ್ರೂಷಕ ಕ್ಲಾರ, ನೇತ್ರಾಧಿಕಾರಿ ಬರ್ಕತ್ ಅಲಿ, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಪ್ರಯೋಗಶಾಲಾ ತಂತ್ರಜ್ಞರು ಉಪಸ್ಥಿತರಿದ್ದರು.