ಸಾರಾಂಶ
ಕನ್ನಡಪ್ರಭವಾರ್ತೆ ಚಳ್ಳಕೆರೆ
ಶಿಕ್ಷಕರ ದಿನಾಚರಣೆ ಅಂಗವಾಗಿ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಜಿಲ್ಲಾ ಅನುದಾನಿತ ಶಾಲಾ ಶಿಕ್ಷಕರ ಸಂಘ, ಶಿಕ್ಷಕರ ಸ್ನೇಹಬಳಗ ಸಹಯೋಗದಲ್ಲಿ ಬ್ರೆಡ್, ಹಣ್ಣು, ಹಾಲನ್ನು ವಿತರಣೆ ಮಾಡಲಾಯಿತು.ತಾಲೂಕು ಪಂಚಾಯಿಯಿತಿ ಆಡಳಿತಾಧಿಕಾರಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸುತ್ತಾರೆಂಬುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಸರ್ವಪಲ್ಲಿ ರಾಧಕೃಷ್ಣನ್‌ರವರ ಜನ್ಮದಿನದ ಅಂಗವಾಗಿ ಶಿಕ್ಷಕರು ಆಸ್ಪತ್ರೆಯ ರೋಗಿಗಳಿಗೆ ಹಣ್ಣು, ಬ್ರೆಡ್, ಹಾಲು ವಿತರಿಸಿದ್ದಾರೆ. ಶಿಕ್ಷಕರ ಸಂಘ ಸಮಾಜಮುಖಿ ಚಟುವಟಿಕೆಗಳಿಗೆ ಇನ್ನೂ ಹೆಚ್ಚು ಉತ್ತೇಜನ ನೀಡಬೇಕೆಂದು ಮನವಿ ಮಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ಸುರೇಶ್ ಮಾತನಾಡಿ, ಪ್ರತಿ ವರ್ಷವೂ ಶಿಕ್ಷಕರ ಎಲ್ಲಾ ಸಂಘಟನೆಗಳು ಕೇವಲ ಶಿಕ್ಷಕರ ದಿನಾಚರಣೆಯಲ್ಲದೇ, ಬಡ ರೋಗಿಗಳ ಯೋಗ ಕ್ಷೇಮದ ಬಗ್ಗೆಯೂ ಗಮನಹರಿಸುತ್ತಾರೆ. ಶಿಕ್ಷಕರ ದಿನಾಚರಣೆ ಸಂಭ್ರಮವನ್ನು ರೋಗಿಗಳೊಂದಿಗೆ ಹಂಚಿಕೊಳ್ಳುವ ಕಾರ್ಯ ಹೆಚ್ಚು ತೃಪ್ತಿ ತಂದಿದೆ ಎಂದರು.ಇದೇ ಸಂದರ್ಭದಲ್ಲಿ ನಗರದ ಬೆಂಗಳೂರು ರಸ್ತೆಯ ಬನಶ್ರೀ ವೃದ್ದಾಶ್ರಮದ ವೃದ್ದರಿಗೆ ಪ್ರತಿನಿತ್ಯ ಅವಶ್ಯಕವಾಗಿ ಬೇಕಾದ ಸೊಳ್ಳೆಪರದೆ, ಬೆಡ್ ಶೀಟ್‌ಗಳನ್ನು ವಿತರಿಸಲಾಯಿತು.
ಸರ್ಕಾರಿ ನೌಕರರ ಸಂಘದ ಜಂಟಿ ಕಾರ್ಯದರ್ಶಿ ಸಿ.ಟಿ. ವೀರೇಶ್ ಮಾತನಾಡಿ, ಇಳಿವಯಸ್ಸಿನಲ್ಲಿ ವೃದ್ದರು ಅನಾಥಾಶ್ರಮದಲ್ಲಿ ಆಶ್ರಯ ಪಡೆದಿದ್ದಾರೆ. ಅವರಿಗೆ ಅವಶ್ಯಕವಿರುವ ಸೌಲಭ್ಯ ನೀಡಲು ಸಂಘ ಸಂಸ್ಥೆಗಳು ಮುಂದೆ ಬರಬೇಕು. ಶಿಕ್ಷಕರ ಸ್ನೇಹಬಳಗದ ವತಿಯಿಂದ ಸೊಳ್ಳೆಪರದೆ, ಬೆಡ್‌ಶೀಟ್ ನೀಡಲಾಗಿದೆ ಎಂದರು.ಸ್ನೇಹಬಳಗದ ಅಧ್ಯಕ್ಷ ಜಿ.ಟಿ. ಆನಂದ, ಚಂದ್ರಣ್ಣ, ಉಪಾಧ್ಯಕ್ಷೆ ಜಯಮ್ಮ, ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಎಚ್.ಒ. ರಾಜಣ್ಣ, ಜಿಲ್ಲಾ ಅನುದಾನಿತ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಿ. ಸುರೇಶ್, ಅಕ್ಷರ ದಾಸೋಹ ಅಧಿಕಾರಿ ಜಿ.ಟಿ. ಮಂಜುನಾಥ, ಚಾರುಮತಿ, ಮೈಲನಹಳ್ಳಿ ಮಂಜುನಾಥ, ಕೆ.ಎಸ್.ಶ್ರೀಕಾಂತ್, ರಾಜು, ರೆಹಮತ್‌ವುಲ್ಲಾ, ಮಂಜುಳಾ, ರಾಘವೇಂದ್ರ, ದೇವೇಂದ್ರಪ್ಪ ಮುಂತಾದವರು ಉಪಸ್ಥಿತರಿದ್ದರು.