ಚಿಕ್ಕಬೆಟ್ಟಗೇರಿ ಗ್ರಾಮದ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಉಚಿತವಾಗಿ ಚಾಪೆಗಳು, ದಿಂಬುಗಳು, ಹೊದಿಕೆಗಳು, ಆಟದ ಸಾಮಾನುಗಳನ್ನು ನೀಡಲಾಯಿತು.

ಕನ್ನಡಪ್ರಭ ವಾರ್ತೆ ಗುಡ್ಡೆಹೊಸೂರು

ಇಲ್ಲಿಗೆ ಸಮೀಪದ ಚಿಕ್ಕಬೆಟ್ಟಗೇರಿ ಗ್ರಾಮದ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಉಚಿತವಾಗಿ ಚಾಪೆಗಳು, ದಿಂಬುಗಳು, ಹೊದಿಕೆಗಳು, ಆಟದ ಸಾಮಾನುಗಳನ್ನು ನೀಡಲಾಯಿತು.

ಇದನ್ನು ದೊಡ್ಡಬೆಟ್ಟಗೇರಿ ಗ್ರಾಮದ ಮಾಜಿ ಸೈನಿಕರು ಮತ್ತು ರೂಫ್‌, ಟಾಫ್‌ ಹೋಂ ಸ್ಟೇ ಯ ಮಾಲೀಕರಾದ ಕಟ್ರತನ ಮಧ್ವರಾಜ್‌ ಪ್ರೇಮ ದಂಪತಿ ಉಚಿತವಾಗಿ ನೀಡಿದರು. ಈ ಕಾರ್ಯಕ್ರಮವನ್ನು ಗ್ರಾ.ಪಂ ವ್ತಾಪ್ತಿಯ ಯೂತ್‌ ಸಂಘಟನೆಯ ವತಿಯಿಂದ ಏರ್ಪಡಿಸಲಾಗಿತ್ತು. ಇದೇ ಸಂದರ್ಭ ಅಂಗನವಾಡಿ

ಶಿಕ್ಷಕಿ ಸೌಮ್ಯ, ಸಹಾಯಕಿ ಭಾರತಿ ಮತ್ತು ಸಂಘಟನೆಯ ಪದಾಧಿಕಾರಿಗಳಾದ ಎಂ.ಆರ್.ರಂಜಿತ್‌, ರವಿಕುಮಾರ್‌ ಬಿ.ಎನ್‌, ನವೀನ್‌ ಚಿನ್ನಪ್ಪ ಮುಂತಾದವರು ಹಾಜರಿದ್ದರು.