ಹೊಸಕೋಟೆ: ಬೆಂಗಳೂರು ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ಹಾಲಿನ ಇಳುವರಿ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಡೇರಿ ಸದಸ್ಯರಿಗೆ ಉಚಿತವಾಗಿ ಜೋಳ ವಿತರಿಸಲಾಗುತ್ತಿದೆ ಎಂದು ಬಮೂಲ್ ನಿರ್ದೇಶಕ ಬಿ.ವಿ.ಸತೀಶ್‌ಗೌಡ ತಿಳಿಸಿದರು.

ತಾಲೂಕಿನ ಚಿಕ್ಕಹುಲ್ಲೂರು ಬಳಿಯ ಬಮೂಲ್ ಶಿಬಿರ ಕಚೇರಿಯಲ್ಲಿ ಡೇರಿ ಸದಸ್ಯರಿಗೆ ಜೋಳ ವಿತರಿಸಿ ಮಾತನಾಡಿದ ಅವರು, ಡಿ.ಕೆ.ಸುರೇಶ್ ಬಮುಲ್ ಅಧ್ಯಕ್ಷರಾದ ಬಳಿಕ ಬಮೂಲ್‌ನಲ್ಲಿ ಅಮೂಲಾಗ್ರ ಬದಲಾವಣೆ ಮಾಡಿದ್ದಾರೆ. ಮಾರುಕಟ್ಟೆ ವ್ಯವಸ್ಥೆಗೆ ಮತ್ತಷ್ಟು ವೇಗ ಕೊಟ್ಟಿದ್ದು ನಂದಿನಿ ಉತ್ಪನ್ನ ಮನೆಮನೆಯಲ್ಲಿ ಬಳಸುವ ಮೂಲಕ ವ್ಯಾಪಾರ ವಹಿವಾಟು ಹೆಚ್ಚಿಸುವುದರಿಂದ ಉತ್ಪಾದಕರಿಗೆ ವರದಾನವಾಗಬೇಕು ಎನ್ನುವುದು ಅವರ ಗುರಿ. ಬಮೂಲ್ ವತಿಯಿಂದ ಪ್ರತಿ ಹಾಲು ಉತ್ಪಾದಕ ಸದಸ್ಯನಿಗೆ 5 ಕೆಜಿ ಜೋಳ ವಿತರಿಸುತ್ತಿದೆ ಎಂದರು.

ಹೊಸಕೋಟೆ ಶಿಬಿರ ಉಪವ್ಯವಸ್ಥಾಪಕ ಡಾ.ಸಂತೋಷ್ ಕುಮಾರ್ ಮಾತನಾಡಿ, ಪ್ರತಿ ಹಾಲು ಉತ್ಪಾದಕರಿಗೆ 5 ಕೆಜಿ ಆಪ್ರಿಕನ್ ಟಾಲ್ ಮೇಜ್‌ ತಳಿಯ ಜೋಳ ನೀಡುತ್ತಿದ್ದು, ಈ ಜೋಳವನ್ನು ಬಿತ್ತನೆ ಮಾಡಿ 2 ತಿಂಗಳಿನಲ್ಲಿ ಬೆಳೆ ಪಡೆಯಬಹುದು. ೫ ಕೆಜಿ ಜೋಳವನ್ನು ಅರ್ಧ ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಬಹುದು ಎಂದರು.

ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಸಂಘದ ಅಧ್ಯಕ್ಷ ವಿಜಯ್‌ಕುಮಾರ್, ಶಿಬಿರ ಉಪವ್ಯವಸ್ಥಾಪಕ ಡಾ.ಸಂತೋಷ್ ಕುಮಾರ್, ಕೃಷಿ ಅಧಿಕಾರಿ ಸೌಮ್ಯ ಸಿಎನ್, ವಿಸ್ತರಣಾಧಿಕಾರಿ ರಮೇಶ್, ವಿನಯ್, ರಘುನಾಥ್, ಪವಿತ್ರ, ಆನಂದ್, ವಿದ್ಯಾಶ್ರೀ ಹಾಜರಿದ್ದರು.

ಫೋಟೋ: 5 ಹೆಚ್‌ಎಸ್‌ಕೆ 3


ಹೊಸಕೋಟೆ ತಾಲೂಕು ಚಿಕ್ಕಹುಲ್ಲೂರು ಬಳಿ ಇರುವ ಬಮೂಲ್ ಶಿಬಿರ ಕಚೇರಿಯಲ್ಲಿ ಹಾಲು ಉತ್ಪಾದಕ ಸಹಕಾರ ಸಂಘದ ಸದಸ್ಯರಿಗೆ ಬಮೂಲ್ ನಿರ್ದೆಶಕ ಬಿ.ವಿ.ಸತೀಶ್‌ಗೌಡ ಉಚಿತ ಜೋಳ ವಿತರಿಸಿದರು.