ಇಂದು ವಿಶೇಷಚೇತನರಿಗೆ ಸಾಧನ ಸಲಕರಣೆಗಳ ವಿತರಣೆ: ಸುಜಾತ ಎಸ್‌.

| Published : Jul 13 2024, 01:30 AM IST

ಇಂದು ವಿಶೇಷಚೇತನರಿಗೆ ಸಾಧನ ಸಲಕರಣೆಗಳ ವಿತರಣೆ: ಸುಜಾತ ಎಸ್‌.
Share this Article
  • FB
  • TW
  • Linkdin
  • Email

ಸಾರಾಂಶ

ಜಗಳೂರು ತಾಲೂಕು ನಮ್ಮ ಕರ್ನಾಟಕ ಸೇನೆ ಘಟಕ ವತಿಯಿಂದ ಪದಗ್ರಹಣ ಮತ್ತು ವಿಶೇಷಚೇತನರಿಗೆ ಸಾಧನ ಸಲಕರಣೆಗಳ ವಿತರಣೆ ಹಾಗೂ “ವಿಕಲಚೇತನರ ಹಕ್ಕುಗಳು ಮತ್ತು ಸರ್ಕಾರಿ ಸೌಲಭ್ಯಗಳು " ಕೃತಿ ಮರುಲೋಕಾರ್ಪಣೆ ಕಾರ್ಯಕ್ರಮ ಪಟ್ಟಣದ ವಾಲ್ಮೀಕಿ ಸಮುದಾಯ ಭವನದಲ್ಲಿ ಜು.13ರಂದು ನಡೆಯಲಿದೆ ಎಂದು ಸಂಘಟನೆಯ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಸುಜಾತ ಎಸ್. ಹೇಳಿದ್ದಾರೆ.

- ನಮ್ಮ ಕರ್ನಾಟಕ ಸೇನೆಯಿಂದ ಪದಗ್ರಹಣ ಕಾರ್ಯಕ್ರಮ

- - - ಜಗಳೂರು: ಜಗಳೂರು ತಾಲೂಕು ನಮ್ಮ ಕರ್ನಾಟಕ ಸೇನೆ ಘಟಕ ವತಿಯಿಂದ ಪದಗ್ರಹಣ ಮತ್ತು ವಿಶೇಷಚೇತನರಿಗೆ ಸಾಧನ ಸಲಕರಣೆಗಳ ವಿತರಣೆ ಹಾಗೂ “ವಿಕಲಚೇತನರ ಹಕ್ಕುಗಳು ಮತ್ತು ಸರ್ಕಾರಿ ಸೌಲಭ್ಯಗಳು " ಕೃತಿ ಮರುಲೋಕಾರ್ಪಣೆ ಕಾರ್ಯಕ್ರಮ ಪಟ್ಟಣದ ವಾಲ್ಮೀಕಿ ಸಮುದಾಯ ಭವನದಲ್ಲಿ ಜು.13ರಂದು ನಡೆಯಲಿದೆ ಎಂದು ಸಂಘಟನೆಯ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಸುಜಾತ ಎಸ್. ಹೇಳಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮ ಉದ್ಘಾನೆಯನ್ನು ಸೇನೆ ರಾಜ್ಯಾಧ್ಯಕ್ಷ ಎಂ.ಬಸವರಾಜ್ ಪಡುಕೋಣೆ ನೆರವೇರಿಸಲಿದ್ದಾರೆ. ಶಾಸಕ ಬಿ.ದೇವೇಂದ್ರ ಸಭೆ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರಪ್ಪ, ಎಚ್.ಪಿ. ರಾಜೇಶ್, ಕೆಪಿಸಿಸಿ ಎಸ್‌ಟಿ ಘಟಕದ ಅಧ್ಯಕ್ಷ ಕೆ.ಪಿ.ಪಾಲಯ್ಯ, ಎಂ.ಡಿ. ಕೀರ್ತಿಕುಮಾರ್, ಕೆ.ಪಿ.ಸಿ.ಸಿ. ಸದಸ್ಯರಾದ ಕಲ್ಲೇಶ್ ರಾಜ್ ಪಟೇಲ್, ಮಾಜಿ ಜಿ.ಪಂ. ಸದಸ್ಯೆ ಸವಿತ ಕಲ್ಲೇಶಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಂಶೀರ್ ಅಹಮ್ಮದ್, ಬಸವಾಪುರ ರವಿಚಂದ್ರ, ಪಲ್ಲಾಗಟ್ಟೆ ಶೇಖರಪ್ಪ, ಹಿರಿಯ ಸಾಹಿತಿ ಎನ್.ಟಿ. ಎರ್ರಿಸ್ವಾಮಿ ಸೇರಿದಂತೆ ವಿವಿಧ ಗಣ್ಯರು, ತಾಲೂಕುಮಟ್ಟದ ಅಧಿಕಾರಿಗಳು, ಸೇನೆ ರಾಜ್ಯ ಪದಾಧಿಕಾರಿಗಳು ಆಗಮಿಸಲಿದ್ದಾರೆ ಎಂದರು.

ನಮ್ಮ ಕರ್ನಾಟಕ ಸೇನೆಯ ಪದವೀಧರ ಘಟಕದ ಮಹಿಳಾ ರಾಜ್ಯ ಉಪಾಧ್ಯಕ್ಷೆ ಜಯಲಕ್ಷ್ಮೀ ಎಂ. ಮಾತನಾಡಿ, ಸೇನೆ ಕನ್ನಡದ ಪರವಾಗಿ ನೊಂದವರ ಧ್ವನಿಯಾಗಿ ಹೋರಾಟದ ಮೂಲಕ ನ್ಯಾಯಪರ ಉದ್ದೇಶದಿಂದ ಈ ಸಂಘಟನೆ ಲೋಕಾರ್ಪಣೆಗೊಳ್ಳಲಿದೆ. ಅಂಗವಿಕಲರ ಹಕ್ಕುಗಳ ಅಧಿನಿಯಮ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಬೆಂಗಳೂರಿನ ಮಾಜಿ ಆಯುಕ್ತ ಡಾ. ಜೆ.ಎಸ್. ರಾಜಣ್ಣ, ವಿಕಲಚೇತನರ ಅಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ, ಪತ್ರಕರ್ತ ಮಹಾಂತೇಶ್ ಬ್ರಹ್ಮ ಅವರನ್ನುವಿಶೇಷವಾಗಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಸೇನೆಯ ಪದವೀಧರ ಘಟಕದ ಮಹಿಳಾ ರಾಜ್ಯ ಉಪಾಧ್ಯಕ್ಷೆ ಜಯಲಕ್ಷ್ಮೀ ಎಂ., ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಸುಜಾತ ಎಸ್., ಜಿಲ್ಲಾಧ್ಯಕ್ಷೆ ಮಂಜುಳಾ ಅವರ ಪದಗ್ರಹಣ ನಡೆಯಲಿದೆ ಎಂದರು.

ಈ ಸಂದರ್ಭ ಸೇನೆಯ ಜಿಲ್ಲಾಧ್ಯಕ್ಷೆ ಮಂಜುಳಾ, ಅಬ್ದುಲ್ ಷಾ ಖಾದ್ರ ಇತರರು ಇದ್ದರು. - - - -12 ಜೆ.ಜಿ.ಎಲ್.1:

ಜಗಳೂರು ಪಟ್ಟಣದಲ್ಲಿ ನಮ್ಮ ಕರ್ನಾಟಕ ಸೇನೆ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಸುಜಾತ ಎಸ್. , ಜಯಲಕ್ಷ್ಮೀ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.