ಈದ್‌ ಮಿಲಾದ್‌-ಆಸ್ಪತ್ರೆಗಳಲ್ಲಿ ಹಣ್ಣು, ಬ್ರೆಡ್‌ ವಿತರಣೆ

| Published : Sep 17 2024, 12:53 AM IST

ಈದ್‌ ಮಿಲಾದ್‌-ಆಸ್ಪತ್ರೆಗಳಲ್ಲಿ ಹಣ್ಣು, ಬ್ರೆಡ್‌ ವಿತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಹರಪನಹಳ್ಳಿ ತಾಲೂಕಿನಾದ್ಯಂತಹ ಶಾಂತಿ ಹಾಗೂ ಸೌಹಾರ್ದತೆ ಸಾರುವ ಈದ್‌ ಮಿಲಾದ್‌ ಹಬ್ಬವನ್ನು ಮುಸ್ಲಿಮರು ಸೋಮವಾರ ಸಡಗರ, ಸಂಭ್ರಮದಿಂದ ಆಚರಿಸಿದರು. ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಸ್ಪತ್ರೆಗಳಿಗೆ ತೆರಳಿ ಹಣ್ಣು, ಬ್ರೆಡ್‌ ವಿತರಿಸಲಾಯಿತು.

ಹರಪನಹಳ್ಳಿ: ತಾಲೂಕಿನಾದ್ಯಂತಹ ಶಾಂತಿ ಹಾಗೂ ಸೌಹಾರ್ದತೆ ಸಾರುವ ಈದ್‌ ಮಿಲಾದ್‌ ಹಬ್ಬವನ್ನು ಮುಸ್ಲಿಮರು ಸೋಮವಾರ ಸಡಗರ, ಸಂಭ್ರಮದಿಂದ ಆಚರಿಸಿದರು.

ಅಂಜುಮನ್‌ ಮಸೀದಿಯಿಂದ ಹೊರಟ ಈದ್‌ ಮೆರವಣಿಗೆ ತಾಯಮ್ಮನ ಹುಣಸೇಮರ, ಟಾಕೀಸ್‌ ರಸ್ತೆ, ತೆಗ್ಗಿನಮಠ, ಬಂಗ್ಲೇರ ಓಣಿ, ಕೊಟ್ಟೂರು ವೃತ್ತ, ಬಾಣಗೇರಿ, ಶಂಕರಮಠ, ಶಿಲಾರಗೇರಿ, ಹೊಸಪೇಟೆ ರಸ್ತೆ, ಹಡಗಲಿ ರಸ್ತೆ ಮೂಲಕ ಚಮನ್ ಶಾಲಿ ದರ್ಗಾ ಬಳಿ ಕೊನೆಗೊಂಡಿತ್ತು.

ಹಣ್ಣು ಬ್ರೆಡ್‌ ವಿತರಣೆ: ಈದ್‌ ಮಿಲಾದ್‌ ಹಬ್ಬದ ಪ್ರಯುಕ್ತ ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆ, ಸನ್‌ ರೈಸ್‌ ಆಸ್ಪತ್ರೆ, ಮಹೇಶ ನರ್ಸಿಂಗ್‌ ಹೋಮ್, ಅಧಿಕಾರ ಕ್ಲಿನಿಕ್‌, ಶಿವಕೃಪಾ ಆಸ್ಪತ್ರೆ, ತೆರಳಿ ಹಣ್ಣು, ಬ್ರೆಡ್‌ ವಿತರಿಸಲಾಯಿತು.

ಮುಸ್ಲಿಂ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾದ್ಯಕ್ಷ ಅಧ್ಯಕ್ಷ ಶರೀಫ್ ಮಕರಬ್ಬಿ, ತಾಲೂಕು ಅಧ್ಯಕ್ಷ ಎಸ್. ಉಸ್ಮಾನ್, ಕಾರ್ಯದರ್ಶಿ ಎಚ್‌. ಸಲೀಂ, ಮನ್ಸೂರು ಅಹಮದ್, ಯಾಹ್ಯಾ, ಜಮಾಲ್‌ ಸಾಹೇಬ್, ಜಿಲ್ಲಾ ಪದಾಧಿಕಾರಿಗಳಾದ ರಿಜ್ವಾನ್ ಸಾಹೇಬ್ ಹಾಗೂ ಸಮಿಉಲ್ಲಾ, ರಿಯಾಜ್, ಇಸ್ಮಾಯಿಲ್‌ ಸಾಹೇಬ್, ಮೆಹಬೂಬ್‌ ಬಡಗಿ, ಪಿರಾ ಸಾಹೇಬ್, ಎಸ್‌. ನಜೀರ, ಅಸ್ಲಾಂ ಬಾಷಾ, ಅಮಾನುಲ್ಲಾ, ಮುಸ್ತಕಲಿ, ಸೋಗಿ ಅತಾವುಲ್ಲಾ, ಮಕರಬ್ಬಿ ದಾದಾಪೀರ, ಶಬ್ಬೀರ, ಹುಸೇನ್ ಪೀರ, ಅಬ್ದುಲ್‌ ಸಲಾಂ, ಸಿಆರ್‌ಪಿ ಅಲ್ಲಾಬಕ್ಷ, ಎಸ್‌. ಮುಸ್ತಫಾ, ಅಂಜುಮನ್‌ ಅಧ್ಯಕ್ಷ ಮುಜವರ್‌ ರಹಿಮಾನ್, ಪುರಸಭಾ ಸದಸ್ಯ ಜಾಕೀರ ಇತರರು ಮೆರವಣಿಗೆಯಲ್ಲಿ ಹಾಗೂ ಹಣ್ಣು ಬ್ರೆಡ್‌ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಹೂವಿನಹಡಗಲಿಯಲ್ಲಿ ಈದ್‌ ಮಿಲಾದ್‌ ಆಚರಣೆ:

ಹೂವಿನಹಡಗಲಿ ತಾಲೂಕಿನ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ, ಮುಸ್ಲಿಂ ಸಮುದಾಯದವರು ಮಹಮದ್‌ ಪೈಗಂಬರ್‌ ಜನ್ಮ ದಿನಾಚರಣೆ ಅಂಗವಾಗಿ ಈದ್‌ ಮಿಲಾದ್‌ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.ಪಟ್ಟಣದ ಮಸೀದಿಯಿಂದ ಮುಖ್ಯ ರಸ್ತೆಯಲ್ಲಿ ಧ್ವನಿವರ್ಧಕದಲ್ಲಿ ಮಹಮದ್‌ ಪೈಗಂಬರ್‌ ಕುರಿತಾಗಿರುವ ಚಿಂತನೆ ಹಾಗೂ ಆದರ್ಶಗಳನ್ನು ಬಿತ್ತರಿಸಲಾಯಿತು. ಯುವಕರು, ಬಾಲಕರು ಧ್ವಜಗಳನ್ನು ಹಿಡಿದುಕೊಂಡು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.ಪಟ್ಟಣದ ಆರು ಮಸೀದಿಗಳ ಮೌಲಿಗಳು, ಈದ್‌ ಮಿಲಾದ್ ಕಮಿಟಿ ಅಧ್ಯಕ್ಷ ಬಾವಿಹಳ್ಳಿ ಸದ್ದಾಮ್ ಹುಸೇನ್, ಉಪಾಧ್ಯಕ್ಷ ಘಂಟಿ ಮುಬೀಸ್, ಕಾರ್ಯದರ್ಶಿ ದೊಡ್ಡನಿ ಜಾವೀದ್, ಅಜರುದ್ದೀನ್, ಖಜಾಂಚಿ ಜೆ. ಮಹಮ್ಮದ್‌ ರಫಿ, ಅಂಜುಮನ್ ಸದಸ್ಯರಾದ ಕೆ. ಗೌಸ್‌ ಮೊಹಿದ್ದೀನ್, ಎಚ್. ಶೇಖ್‌ ಮಹಮ್ಮದ್, ಬಡೇಸಾಬ್, ಇರ್ಫಾನ್, ಪುರಸಭೆ ಸದಸ್ಯ ಶಫಿ, ಮಹಮದ್‌ ರಫಿ ಹಾಗೂ ಇತರರಿದ್ದರು.