ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಬಿಜಿಎಸ್ ಸಹಕಾರ ಸಂಘದ ವತಿಯಿಂದ ಹಣ್ಣು ವಿತರಣೆ

| Published : Jan 19 2024, 01:48 AM IST

ಸಾರಾಂಶ

ಪರಮ ಪೂಜ್ಯ ಲಿಂಗೈಕ್ಯ ಬಾಲಗಂಗಾಧರನಾಥ ಸ್ವಾಮೀಜಿಗಳ ೭೯ನೇ ಜನ್ಮದಿನದ ಅಂಗವಾಗಿ ಚನ್ನರಾಯಪಟ್ಟಣದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಬಿಜಿಎಸ್ ಸಹಕಾರ ಸಂಘದ ವತಿಯಿಂದ ಗುರುವಾರ ಹಣ್ಣು ಮತ್ತು ಹಂಪಲಗಳನ್ನು ವಿತರಿಸಲಾಯಿತು.

ಬಾಲಗಂಗಾಧರನಾಥ ಸ್ವಾಮೀಜಿ ೭೯ನೇ ಜನ್ಮದಿನ ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಪರಮ ಪೂಜ್ಯ ಲಿಂಗೈಕ್ಯ ಬಾಲಗಂಗಾಧರನಾಥ ಸ್ವಾಮೀಜಿಗಳ ೭೯ನೇ ಜನ್ಮದಿನದ ಅಂಗವಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಬಿಜಿಎಸ್ ಸಹಕಾರ ಸಂಘದ ವತಿಯಿಂದ ಗುರುವಾರ ಹಣ್ಣು ಮತ್ತು ಹಂಪಲಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಬಿಜಿಎಸ್ ಸೌರ್ಹಾದ ಸಹಕಾರ ಸಂಘದ ಸಂಸ್ಥಾಪಕ ನಿರ್ದೇಶಕ ದಾಸರಹಳ್ಳಿ ರಂಗೇಗೌಡ ಮಾತನಾಡಿ, ‘ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಶಂಭುನಾಥ ಸ್ವಾಮೀಜಿ ಮಾರ್ಗದರ್ಶನದಲ್ಲಿ ಈ ದಿನ ನಾವು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಸುಮಾರು ೧೦೦ ಜನ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಣೆ ಮಾಡಿದ್ದೇವೆ, ಪರಮಪೂಜ್ಯರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡು ಈ ಸಮಾಜದಲ್ಲಿ ಸಹೋದರತೆಯಿಂದ ಬಾಳಬೇಕಾಗಿದೆ. ಜಾತಿ ಜಾತಿಗಳ ನಡುವೆ ಕಂದಕ ಸೃಷ್ಟಿ ಮಾಡುವರ ಸಹವಾಸ ಮಾಡದೆ ದೇಶ ಕಟ್ಟುವ ಜನರ ಜೊತೆಗೂಡಿ ಕೆಲಸ ಮಾಡೋಣ’ ಎಂದು ಹೇಳಿದರು.

ತಾಲೂಕು ಬಿಜಿಎಸ್ ಸಹಕಾರ ಸಂಘದ ಅಧ್ಯಕ್ಷ ಮಧುಸೂಧನ್, ಉಪಾಧ್ಯಕ್ಷರಾದ ಸುರೇಶ್, ಕೆ. ಜೆ. ಸುರೇಶ್, ಮಂಜೇಗೌಡ, ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ. ವಿ.ಮಹೇಶ್, ಬಿಜಿಎಸ್ ಶಿಕ್ಷಣ ಸಮೂಹಗಳ ಸಂಸ್ಥೆಗಳ ಮುಖ್ಯಸ್ಥ ಎಂ. ಕೆ. ಮಂಜುನಾಥ್, ಕುಮಾರ್, ಬಿಜಿಎಸ್ ಸಹಕಾರ ಸಂಘದ ನಿರ್ದೇಶಕರಾದ ಮಂಜೇಗೌಡ, ನಂಜೇಗೌಡ, ವಸಂತ , ಪ್ರಕಾಶ್, ಬೋರೇಗೌಡ, ಮೋಹನ್ ಕುಮಾರ್, ಸಿಇಓ ಲತಾಮಣಿ ಇದ್ದರು.

ಬಾಲಗಂಗಾಧರನಾಥ ಸ್ವಾಮೀಜಿಗಳ ೭೯ನೇ ಜನ್ಮದಿನದ ಅಂಗವಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಬಿಜಿಎಸ್ ಸಹಕಾರ ಸಂಘದ ವತಿಯಿಂದ ಗುರುವಾರ ಹಣ್ಣು ಮತ್ತು ಹಂಪಲಗಳನ್ನು ವಿತರಣೆ ಮಾಡಲಾಯಿತು.