ಸಾರಾಂಶ
ಸಮಾಜ ಕಲ್ಯಾಣ ಇಲಾಖೆ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪರವರ ಹುಟ್ಟುಹಬ್ಬದ ಅಂಗವಾಗಿ ಕಾಂಗ್ರೆಸ್ ಮುಖಂಡರು ಭಾನುವಾರ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣುಹಂಪಲು ವಿತರಣೆ ಮಾಡಿದರು.
ಕೊಳ್ಳೇಗಾಲ: ಸಮಾಜ ಕಲ್ಯಾಣ ಇಲಾಖೆ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪರವರ ಹುಟ್ಟುಹಬ್ಬದ ಅಂಗವಾಗಿ ಕಾಂಗ್ರೆಸ್ ಮುಖಂಡರು ಭಾನುವಾರ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣುಹಂಪಲು ವಿತರಣೆ ಮಾಡಿದರು.
ನಂತರ ಮಾತನಾಡಿದ ಕಾಂಗ್ರೆಸ್ ಮುಖಂಡ ಕಿನಕಹಳ್ಳಿ ರಾಚಯ್ಯ, ನಮ್ಮ ನೆಚ್ಚಿನ ನಾಯಕ, ಸಚಿವ ಎಚ್.ಸಿ. ಮಹದೇವಪ್ಪರವರ ಹುಟ್ಟುಹಬ್ಬವನ್ನು ಜಿಲ್ಲೆಯಲ್ಲಿ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದೆ. ಅದೇ ರೀತಿ ಕೊಳ್ಳೇಗಾಲದ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ವಿತರಣೆ ಮಾಡಲಾಗಿದೆ ಎಂದರು. ಮುಂದಿನ ದಿನಗಳಲ್ಲಿ ಸಚಿವ ಎಚ್.ಸಿ ಮಹದೇವಪ್ಪ ರವರಿಗೆ ಇನ್ನೂ ಹೆಚ್ಚಿನ ಅಧಿಕಾರ ಸಿಗುವ ಮೂಲಕ ಮತ್ತಷ್ಟು ಜನಸೇವೆ ಮಾಡಲಿ ಎಂದು ಶುಭ ಹಾರೈಸಿದರು. ನಗರಸಭೆ ಸದಸ್ಯರಾದ ಮಂಜುನಾಥ್, ನಾಗರಾಜು, ಯಜಮಾನರು ಮಹದೇವ ಸ್ವಾಮಿ, ಹೊನ್ನೂರು ರಾಜು, ಮಾಂಬಳ್ಳಿ ಮೋಹನ್, ಮಹದೇವಪ್ಪ, ಹಾಪ್ ಕಾಮ್ಸ್ ಜಿಲ್ಲಾ ನಿರ್ದೇಶಕರು ಜಿಲ್ಲಾ ಪುಟ್ಟಮಾದಯ್ಯ, ಕುಂತೂರು ಮೂರ್ತಿ, ಪುಟ್ಟಸುಬ್ಬಪ್ಪ, ಮಾಜಿ ಅಧ್ಯಕ್ಷ ನಿರಂಜನ್, ಮುಳ್ಳುರು ರಾಚೇಗೌಡ, ಮದ್ದೂರು ಶಿವಮಲ್ಲು, ಚಿಕ್ಕಣ್ಣ, ಶಿವಕುಮಾರ್, ತೇರಂಬಳ್ಳಿ ಮರಿಸ್ವಾಮಿ, ಮಹದೇವಸ್ವಾಮಿ, ಇರಸವಾಡಿ ಸೋಮಣ್ಣ, ಮಲ್ಲಹಳ್ಳಿ ಮಾಳ ರವಿ , ಮಹೇಶ್ ಕೆಸ್ತೂರು, ಸಿದ್ದರಾಜು ಸಿಲ್ಕಲ್ ಪುರ, ಮಾದೇಶ್ ಮುಳ್ಳೂರು ಹಾಗೂ ಇತರರು ಇದ್ದರು.