ಸಾರಾಂಶ
ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ 82ನೇ ವರ್ಧಂತ್ಯೋತ್ಸವದ ಅಂಗವಾಗಿ ನಗರದ ದತ್ತಸೇನೆ ಮತ್ತು ವಿಪ್ರ ವಕೀಲರ ಪರಿಷತ್ ಯಿಂದ ಚಾಮುಂಡಿಪುರಂ ವೃತ್ತದಿಂದ ಆಶ್ರಮದವರೆಗೆ ಶೋಭಾಯಾತ್ರೆ ಆಯೋಜಿಸಿತ್ತು.
ಕನ್ನಡಪ್ರಭ ವಾರ್ತೆ ಮೈಸೂರು
ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ 82ನೇ ವರ್ಧಂತ್ಯೋತ್ಸವದ ಅಂಗವಾಗಿ ನಗರದ ದತ್ತಸೇನೆ ಮತ್ತು ವಿಪ್ರ ವಕೀಲರ ಪರಿಷತ್ ಯಿಂದ ಚಾಮುಂಡಿಪುರಂ ವೃತ್ತದಿಂದ ಆಶ್ರಮದವರೆಗೆ ಶೋಭಾಯಾತ್ರೆ ಆಯೋಜಿಸಿತ್ತು.ಮೆರವಣಿಗೆಯಲ್ಲಿ ಮೇಲುಕೋಟೆ ವೆಂಗಿಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ, ಕಾಂಗ್ರೆಸ್ ಮುಖಂಡ ಎಂ.ಎನ್.ನವೀನ್‌ಕುಮಾರ್, ಹಿರಿಯ ಸಮಾಜ ಸೇವಕ ರಘುರಾಂ ವಾಜಪೇಯಿ, ಎಚ್.ವಿ. ಭಾಸ್ಕರ್, ಸಹಕಾರಿ ಧುರೀಣ ಎಚ್.ವಿ. ರಾಜೀವ್, ದತ್ತಸೇನೆ ಅಧ್ಯಕ್ಷ ಆರ್.ಎಸ್. ಸತ್ಯನಾರಾಯಣ, ಎಂ.ಡಿ. ಪಾರ್ಥಸಾರತಿ, ವಿನಯ್ ಕುಮಾರ್ ಹಾಗೂ ಭಾಗವಹಿಸಿದ್ದರು.
ವಕೀಲರಿಗೆ ಲಾಡು ವಿತರಣೆಮೈಸೂರು ನ್ಯಾಯಾಲಯದಲ್ಲಿ ವಕೀಲರು, ನೋಟರಿ ಹಾಗೂ ನ್ಯಾಯಾಧೀಶರಿಗೆ ಲಾಡುವನ್ನು ಉಚಿತವಾಗಿ ಪ್ರಸಾದದ ರೂಪದಲ್ಲಿ ವಿತರಿಸಲಾಯಿತು.
ದತ್ತಸೇನೆ ಅಧ್ಯಕ್ಷ ಆರ್.ಎಸ್. ಸತ್ಯನಾರಾಯಣ, ವಿಪ್ರ ವಕೀಲ ಪರಿಷತ್ ಅಧ್ಯಕ್ಷ ರವೀಂದ್ರ, ಜಯನಗರ ಶ್ರೀರಾಮ ಮಂದಿರದ ಸಮಿತಿ ಸದಸ್ಯ ಮುರುಳಿ, ವಕೀಲ ಬಾಲು, ಹೊಯ್ಸಳ ಸಂಘದ ಸುಂದರಮೂರ್ತಿ, ಗಣಪತಿ ಆಶ್ರಮದ ಟಿ. ರಮೇಶ್, ವಿನಯ್ ಬಾಬು ಇದ್ದರು.