ರಾಜ್ಯದಲ್ಲಿ ಯಾವುದೇ ಸಂದರ್ಭದಲ್ಲಿ ಗ್ರಾಪಂ, ನಗರಸಭೆ, ಜಿಪಂ ಹಾಗೂ ತಾಪಂ ಚುನಾವಣೆ ಬರುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಹೇಳಿದರು.

ರಾಣಿಬೆನ್ನೂರು: ರಾಜ್ಯದಲ್ಲಿ ಯಾವುದೇ ಸಂದರ್ಭದಲ್ಲಿ ಗ್ರಾಪಂ, ನಗರಸಭೆ, ಜಿಪಂ ಹಾಗೂ ತಾಪಂ ಚುನಾವಣೆ ಬರುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಹೇಳಿದರು.

ನಗರದ ಜೆಡಿಎಸ್ ಪಕ್ಷದ ಕಾರ್ಯಾಲಯದಲ್ಲಿ ಶುಕ್ರವಾರ ತಾಲೂಕು ಘಟಕದ ವಿವಿಧ ಸಮಿತಿಗಳಿಗೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಆದೇಶ ಪತ್ರ ವಿತರಿಸಿ ಮಾತನಾಡಿದರು. ರಾಜ್ಯದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ಮೈತ್ರಿ ಇದೆ. ಈಗಾಗಲೇ ಎಚ್.ಡಿ. ದೇವೇಗೌಡರು ಸ್ಥಳೀಯ ಚುನಾವಣೆ ಸಂಸ್ಥೆಗಳಲ್ಲಿ ಮೈತ್ರಿ ಇರುವುದಿಲ್ಲ ಎಂದು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಸಂಘಟಿತರಾಗಿ ಪಕ್ಷ ಕಟ್ಟುವ ಕೆಲಸ ಮಾಡಬೇಕಿದೆ. ಮುಂಬರುವ ಜಿಪಂ, ತಾಪಂ, ಗ್ರಾಪಂ, ನಗರಸಭೆ ಚುನಾವಣೆಗಳಿಗೆ ಇಂದಿನಿಂದಲೇ ಕಾರ್ಯಕರ್ತರು ಸನ್ನದ್ಧರಾಗಬೇಕಾಗಿದೆ. ಅದಕ್ಕಾಗಿ ತಳಮಟ್ಟದಿಂದ ಪಕ್ಷವನ್ನು ಬಲವರ್ಧನೆಗೊಳಿಸಲು ಸರ್ವರೂ ಕ್ರಿಯಾಶೀಲರಾಗಿ ಸಂಘಟನೆಗೆ ಮುಂದಾಗ ಬೇಕಾಗಿರುವುದು ಅನಿವಾರ್ಯವಾಗಿದೆ ಎಂದರು.

ತಾಲೂಕು ಯುವ ಮೋರ್ಚಾ ಅಧ್ಯಕ್ಷರಾಗಿ ಸಿದ್ದು ಪಟ್ಟಣಶೆಟ್ಟಿ ಹಾಗೂ ತಾಲೂಕು ರೈತ ಮೋರ್ಚಾ ಅಧ್ಯಕ್ಷರಾಗಿ ಶಿವಪುತ್ರಪ್ಪ ನಡುವಿನಮನಿ ಅವರಿಗೆ ಆದೇಶ ಪತ್ರ ನೀಡಲಾಯಿತು. ಇದೇ ಸಂದರ್ಭದಲ್ಲಿ ವಿವಿಧ ಪಕ್ಷಗಳ ತಾಲೂಕಿನ ಕಾರ್ಯಕರ್ತರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಮಹಿಳಾ ರಾಜ್ಯ ಘಟಕದ ಸದಸ್ಯೆ ಲಕ್ಷ್ಮೀ ಕದರಮಂಡಲಗಿ, ತಾಲೂಕು ಘಟಕ ಅಧ್ಯಕ್ಷ ನಿಂಗಪ್ಪ ಸತ್ಯಪ್ಪನವರ, ನಗರ ಘಟಕದ ಅಧ್ಯಕ್ಷ ನಿಂಗರಾಜ ಹೊನ್ನಾಳಿ, ಮಹಿಳಾ ನಗರ ಘಟಕದ ಅಧ್ಯಕ್ಷೆ ಉಷಾ ಜಾಡಮಲಿ, ಸಿದ್ದಪ್ಪ ಗುಡಿಮುದಲರ, ಆಶಾ ಎಸ್.ಎಸ್., ದೀಪಾ ದಳವಾಯಿ, ಪಾರ್ವತೆಮ್ಮ, ರೇಖಾ, ಕಸ್ತೂರಿ, ಪೂಜಾ, ಗಂಗು ಇಚ್ಚಂಗಿ, ಪೂಜಾ ಹಂಸಭಾವಿ, ಮೃತ್ಯುಂಜಯ ಎಂ.ಸಿ., ವಿ.ಎನ್. ಅಣೂರು, ವಿಠ್ಠಲ ಸುಣಗಾರ, ಮಾಲತೇಶ ಬಡಿಗೇರ, ಮಂಜು ಲಿಂಗದಹಳ್ಳಿ, ವಿಶ್ವನಾಥ ಸಣ್ಣಗೌಡ್ರ, ಹನುಮಂತಪ್ಪ ಮೂಲಿಮನಿ ಮತ್ತಿತರರಿದ್ದರು.