ಸಾರಾಂಶ
ತಾಲೂಕಿನ ಚಂದಕವಾಡಿ ಗ್ರಾಮದಲ್ಲಿ ನಡೆದ ಲಕ್ಷ್ಮಿದೇವಿ ಅಮ್ಮನವರ ಹಬ್ಬದ ಅಂಗವಾಗಿ ಜಾನುವಾರುಗಳ ಜಾತ್ರೆ ನಡೆಯಿತು. ಜಾತ್ರೆಯಲ್ಲಿ ಭಾಗವಹಿಸಿದ್ದ ಜಾನುವಾರುಗಳಲ್ಲಿ ಉತ್ತಮ ಎನಿಸಿಕೊಂಡ ರಾಸುಗಳಿಗೆ ಬಹುಮಾನ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ತಾಲೂಕಿನ ಚಂದಕವಾಡಿ ಗ್ರಾಮದಲ್ಲಿ ನಡೆದ ಲಕ್ಷ್ಮಿದೇವಿ ಅಮ್ಮನವರ ಹಬ್ಬದ ಅಂಗವಾಗಿ ಜಾನುವಾರುಗಳ ಜಾತ್ರೆ ನಡೆಯಿತು. ಜಾತ್ರೆಯಲ್ಲಿ ಭಾಗವಹಿಸಿದ್ದ ಜಾನುವಾರುಗಳಲ್ಲಿ ಉತ್ತಮ ಎನಿಸಿಕೊಂಡ ರಾಸುಗಳಿಗೆ ಬಹುಮಾನ ನೀಡಲಾಯಿತು. ಗ್ರಾಪಂ ವತಿಯಿಂದ ೧೫ ಮತ್ತು ಎಪಿಎಂಸಿಯಿಂದ ಮೂರು ಚಾಂಪಿಯನ್ ಬಹುಮಾನಗಳನ್ನು ಉತ್ತಮ ಜಾನುವಾರುಗಳಿಗೆ ನೀಡಲಾಯಿತು. ಜಾತ್ರೆಯಲ್ಲಿ ಚಾಂಪಿಯನ್ ಎನಿಸಿದ ಗಂಗವಾಡಿ ಗ್ರಾಮದ ರೈತ ಅರಕೇಶ್, ಎಂಬುವರಿಗೆ ಸೇರಿದ ಬೆಳ್ಳಿ ಲಕ್ಷ್ಮೀದೇವಿ ಅಮ್ಮನವರ ವಿಗ್ರಹವನ್ನು ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ನೀಡಿದರು. ಬಹುಮಾನ ವಿತರಿಸಿ ಮಾತನಾಡಿದ ಶಾಸಕ ಸಿ.ಪುಟ್ಟರಂಗಶೆಟ್ಟಿ, ಗ್ರಾಮೀಣ ಭಾಗದಲ್ಲಿ ಸುಗ್ಗಿಯ ನಂತರ ನಡೆಯುವ ಹಬ್ಬಗಳು, ಜನರನ್ನು ಧಾರ್ಮಿಕ ಮತ್ತು ಭಾವನಾತ್ಮಕವಾಗಿ ಒಗ್ಗೂಡಿಸುತ್ತಿದೆ. ಈ ಪರಂಪರೆ ಮುಂದುವರಿಯಬೇಕು. ತಮ್ಮ ಜಾನುವಾರುಗಳನ್ನು ಉತ್ತಮವಾಗಿ ಪೋಷಣೆ ಮಾಡಿರುವ ರೈತರಿಗೆ ಬಹುಮಾನವನ್ನು ನೀಡಲಾಗಿದೆ ಎಂದರು . ಲಕ್ಷಿದೇವಿ ಅಮ್ಮನವರ ದೇವಸ್ಥಾನಕ್ಕೆ ತೆರಳಿ, ಶಾಸಕ ಸಿ.ಪುಟ್ಟರಂಗಶೆಟ್ಟಿ ವಿಶೇಷ ಪೂಜೆ ಸಲ್ಲಿಸಿ, ಇನ್ನೂ ಹೆಚ್ಚಿನ ಮಳೆ, ಬೆಳೆಗಾಗಿ ಪ್ರಾರ್ಥನೆ ಸಲ್ಲಿಸಿದರು. ನಂತರ ರಥೋತ್ಸವಕ್ಕೆ ಶಾಸಕ ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು. ವಿಜೃಂಭಣೆಯಿಂದ ನಡೆದ ರಥೋತ್ಸ ವದಲ್ಲಿ ಚಂದಕವಾಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.ಎಪಿಎಂಸಿ ಅಧ್ಯಕ್ಷ ಸೋಮೇಶ್, ಸದಸ್ಯ ಆಲೂರು ಪ್ರದೀಪ್, ಗ್ರಾಮಪಂ ಅಧ್ಯಕ್ಷ ನಟರಾಜು, ಉಪಾದ್ಯಕ್ಷೆ ರಾಜೇಶ್ವರಿ, ಸದಸ್ಯರಾದ ಪುಟ್ಟಸ್ವಾಮಿ, ಚಿಕ್ಕ ಮಹದೇವಪ್ಪ, ಮಹೇಶ್,ಚಿನ್ನಸ್ವಾಮಿ, ಸುಮಿತ್ರ, ಬೇಬಿಜಾನ್, ಗಾಂಗಮ್ಮ, ಗ್ರಾ,ಪಂ. ಅಭಿವೃದ್ದಿ ಅಧಿಕಾರಿ ಸಿದ್ದರಾಜು, ಕಾರ್ಯದರ್ಶಿ ಮಾದಪ್ಪ, ಶೇಷಣ್ಣ, ಸೇರಿದಂತೆ ಗ್ರಾಪಂ ಸದಸ್ಯರು ಜನಪ್ರತಿನಿಧಿಗಳು ಮುಖಂಡರು ಗ್ರಾಮಸ್ಥರು ಭಾಗವಹಿಸಿದ್ದರು.