ಈ ಶಾಲೆಯಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಾಗರ್ ತುರುವೇಕೆರೆ ವಿದ್ಯಾಭ್ಯಾಸ ಮಾಡುತ್ತಿದ್ದರು ಎಂಬುದು ವಿಶೇಷವಾಗಿದೆ. ಪ್ರತಿಭೆ ಕೇವಲ ನಗರ ಪ್ರದೇಶಗಳಲ್ಲಿ ಮಾತ್ರ ಇರುತ್ತದೆ ಎಂಬುದು ಸುಳ್ಳು. ಗ್ರಾಮಾಂತರ ಪ್ರದೇಶದಲ್ಲಿ ಲಕ್ಷಾಂತರ ಪ್ರತಿಭೆಗಳು ಇವೆ. ಅವುಗಳನ್ನು ಹೆಕ್ಕಿ ತೆಗೆಯಬೇಕಷ್ಟೆ. ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಶಿಕ್ಷಕರು ಮತ್ತು ಪೋಷಕರು ಓರೆ ಹಚ್ಚಬೇಕು.
ಕನ್ನಡಪ್ರಭ ವಾರ್ತೆ ತುರುವೇಕೆರೆ
ಬೆಂಗಳೂರಿನ ರವಿ ಸಂತು ಬಳಗದ ವತಿಯಿಂದ ತಾಲೂಕಿನ ಹುಲ್ಲೇಕೆರೆಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಅಗತ್ಯವಿದ್ದ ವಿವಿಧ ಪರಿಕರಗಳನ್ನು ವಿತರಣೆ ಮಾಡಲಾಯಿತು.ರವಿ ಸಂತು ಬಳಗದ ಮುಖ್ಯಸ್ಥ ರವಿ ಸಂತು ಮಾತನಾಡಿ, ತಮ್ಮ ಸಂಸ್ಥೆಯು ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗಾಗಿ ವಿವಿಧ ಸೇವಾ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ. ಇದು ತಮ್ಮ ಸಂಸ್ಥೆಯ 68ನೇ ಕಾರ್ಯಕ್ರಮವಾಗಿದೆ ಎಂದರು.
ಈ ಶಾಲೆಯಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಾಗರ್ ತುರುವೇಕೆರೆ ವಿದ್ಯಾಭ್ಯಾಸ ಮಾಡುತ್ತಿದ್ದರು ಎಂಬುದು ವಿಶೇಷವಾಗಿದೆ. ಪ್ರತಿಭೆ ಕೇವಲ ನಗರ ಪ್ರದೇಶಗಳಲ್ಲಿ ಮಾತ್ರ ಇರುತ್ತದೆ ಎಂಬುದು ಸುಳ್ಳು. ಗ್ರಾಮಾಂತರ ಪ್ರದೇಶದಲ್ಲಿ ಲಕ್ಷಾಂತರ ಪ್ರತಿಭೆಗಳು ಇವೆ. ಅವುಗಳನ್ನು ಹೆಕ್ಕಿ ತೆಗೆಯಬೇಕಷ್ಟೆ. ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಶಿಕ್ಷಕರು ಮತ್ತು ಪೋಷಕರು ಓರೆ ಹಚ್ಚಬೇಕು. ಮಕ್ಕಳು ಯಾವ ಕ್ಷೇತ್ರದಲ್ಲಿ ಆಸಕ್ತಿಯುತರಾಗಿದ್ದಾರೆಂಬುದನ್ನು ಅರಿತು ಅವರ ಪ್ರತಿಭೆಗೆ ನೀರೆರೆದರೆ ಅವರು ದೊಡ್ಡ ಹೆಮ್ಮರವಾಗಿ ಬೆಳೆಯುತ್ತಾರೆ ಎಂಬುದಕ್ಕೆ ಈ ಶಾಲೆಯಲ್ಲೇ ಓದಿದ ಸಾಗರ್ ತುರುವೇಕೆರೆ ರವರೇ ಸಾಕ್ಷಿ ಎಂದು ಹೇಳಿದರು.ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಾಗರ್ ತುರುವೇಕೆರೆ ಮಾತನಾಡಿ, ತಮ್ಮ ಈ ಶಾಲೆಯಲ್ಲಿ ಕಳೆದ ದಿನಗಳನ್ನು ಮೆಲುಕು ಹಾಕಿದರು. ನಮ್ಮಲ್ಲಿರುವ ಪ್ರತಿಭೆಯನ್ನು ಅರಿತು ಮೊದಲು ನಾವೇ ಅಂತರ್ಗತರಾಗಬೇಕು. ಅದು ಯಾವುದೇ ಕಲೆಯಾಗಿರಲಿ ಅದನ್ನೇ ಮುಂದುವರೆಸಿಕೊಂಡು ಹೋಗಬೇಕು. ಕಲೆ ಸಿದ್ಧಿಸುವ ತನಕ ಬಿಡದೇ ಅಭ್ಯಸಿಸಬೇಕೆಂದು ಹೇಳಿದರು.
ಈ ವೇಳೆ ಶಾಲೆಗೆ ಸುಮಾರು ₹1 ಲಕ್ಷ ವೆಚ್ಚದಲ್ಲಿ ಜೆರಾಕ್ಸ್ ಮಷಿನ್, ಕ್ರೀಡಾ ಸಾಮಗ್ರಿಗಳು, ಪುಸ್ತಕ, ಪೆನ್ನು, ಬ್ಯಾಗ್, ಡ್ರಮ್ ಸೆಟ್ ಸೇರಿದಂತೆ ವಿವಿಧ ವಸ್ತುಗಳನ್ನು ವಿತರಣೆ ಮಾಡಲಾಯಿತು.ಸರ್ಕಾರಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನೂ ಸಹ ರವಿಸಂತು ಬಳಗದಿಂದ ಗೌರವಿಸಲಾಯಿತು.
ಈ ವೇಳೆ ರವಿ ಸಂತು ಬಳಗದ ಅನುಭವ್ಯ, ಶ್ರೀನಿವಾಸ್ ಹುಣಸೂರು, ರವಿ ಹಂಸಲೇಖ, ಲೋಕೇಶ್ ಪಿರಿಯಾಪಟ್ಟಣ, ಶ್ರೀಕಂಠ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.-----