ಸಾರಾಂಶ
ನಗರದ ಜಿಲ್ಲಾಡಳಿತ ಭವನದ ಮುಂಭಾಗ ಮೈಸೂರಿನ ರೋಟರಿ ಪಂಚಶೀಲ, ಸಾಯಿ ಫೌಂಡೇಶನ್ ವತಿಯಿಂದ ವಿಶೇಷಚೇತನರಿಗೆ ತ್ರಿಚಕ್ರ ವಾಹನವನ್ನು ಜಿಲ್ಲಾಧಿಕಾರಿ ಶಿಲ್ಪಾನಾಗ್ ವಿತರಿಸಿದರು.
ಚಾಮರಾಜನಗರ: ನಗರದ ಜಿಲ್ಲಾಡಳಿತ ಭವನದ ಮುಂಭಾಗ ಮೈಸೂರಿನ ರೋಟರಿ ಪಂಚಶೀಲ, ಸಾಯಿ ಫೌಂಡೇಶನ್ ವತಿಯಿಂದ ವಿಶೇಷಚೇತನರಿಗೆ ತ್ರಿಚಕ್ರ ವಾಹನವನ್ನು ಜಿಲ್ಲಾಧಿಕಾರಿ ಶಿಲ್ಪಾನಾಗ್ ವಿತರಿಸಿದರು.
ರೋಟರಿ ಪಂಚಶೀಲ ಸಾಯಿ ಫೌಂಡೇಶನ್ ಸದಸ್ಯರಾದ ಡಾ. ಎಂ. ಅನಿಲ್ ಕುಮಾರ್ ತಮ್ಮ ಸ್ವಂತ ₹೭೭ ಸಾವಿರ ಹಣದಿಂದ ಖರೀದಿಸಿರುವ ತ್ರಿಚಕ್ರ ವಾಹನವನ್ನು ವಿಶೇಷಚೇತನ ಯಳಂದೂರು ತಾಲೂಕಿನ ಮೆಲ್ಲಹಳ್ಳಿಯ ಎಂ. ವಜ್ರಮಣಿಗೆ ಭಾನುವಾರ ಹಸ್ತಾಂತರಿಸಿದರು. ವಿಶೇಷಚೇತನರ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ವಜ್ರಮಣಿ ತಮಗೆ ತ್ರಿಚಕ್ರ ವಾಹನ ನೀಡಬೇಕೆಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರು. ಜಿಲ್ಲಾಧಿಕಾರಿ ಶಿಲ್ಪಾನಾಗ್ ಪಂಚಶೀಲ ಮತ್ತು ಸಾಯಿ ಫೌಂಡೇಶನ್‌ಗೆ ವಿಶೇಷಚೇತನರಿಗೆ ನೆರವಾಗಲು ಪ್ರಸ್ತಾಪಿಸಿದ್ದರು.ಪಂಚಶೀಲ ಸಾಯಿ ಫೌಂಡೇಶನ್ ಸದಸ್ಯ ಡಾ. ಅನಿಲ್ ಕುಮಾರ್ ಸ್ಪಂದಿಸಿ ತ್ರಿಚಕ್ರ ವಾಹನ ನೀಡಲು ಮುಂದೆ ಬಂದರು. ಜಿಪಂ ಸಿಇಒ ಮೋನಾ ರೋತ್, ಉಪ ಕಾರ್ಯದರ್ಶಿ ಪಿ. ಲಕ್ಷ್ಮೀ, ಮೈಸೂರಿನ ರೋಟರಿ ಜೋನಲ್ ಲೆಫ್ಟಿನೆಂಟ್ ಕಿರಣ್ ರಾಬರ್ಟ್, ಅಶ್ವಿನ್ ಪಾಳೆಗಾರ್, ಮಹೇಶ್, ಡಾ. ಪಂಕಜ, ಶೀತಲ್ ಕೊಟ್ಟಾಯನ್, ಮೀನಾಕ್ಷಿ, ಇದ್ದರು.