Headmaster Dattatreya Kulkarni stated that "Kannada Prabha Yuva Spoorthi, " a publication brought out by the "Kannada Prabha " daily for students, serves as a handbook for enhancing knowledge.

ಪತ್ರಿಕೆ ಜ್ಞಾನದ ಭಂಡಾರ: ಮುಖ್ಯಶಿಕ್ಷಕ ದತ್ತಾತ್ರೇಯ ಕುಲಕರ್ಣಿ ಶ್ಲಾಘನೆ

-----

ಕನ್ನಡಪ್ರಭ ವಾರ್ತೆ ಕೆಂಭಾವಿ

ವಿದ್ಯಾರ್ಥಿಗಳಿಗಾಗಿ "ಕನ್ನಡಪ್ರಭ " ದಿನಪತ್ರಿಕೆ ಹೊರತಂದಿರುವ "ಕನ್ನಡಪ್ರಭ ಯುವ ಸ್ಫೂರ್ತಿ " ಪತ್ರಿಕೆ ಜ್ಞಾನ ಬೆಳೆಸುವ ಒಂದು ಕೈಪಿಡಿಯಾಗಿದೆ ಎಂದು ಮುಖ್ಯಗುರು ದತ್ತಾತ್ರೇಯ ಕುಲಕರ್ಣಿ ಹೇಳಿದರು.

ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆ ಮತ್ತು ಬಾಲಕರ ಸರ್ಕಾರಿ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸೋಮವಾರ ಯುವ ಸ್ಫೂರ್ತಿ ಪತ್ರಿಕೆ ವಿತರಿಸಿ ಮಾತನಾಡಿದ ಅವರು, ಶಿಕ್ಷಣ, ಉದ್ಯೋಗ, ಕೌಶಲ್ಯ ಅಭಿವೃದ್ಧಿ ಜತೆಗೆ ಆಧುನಿಕ ತಂತ್ರಜ್ಞಾನದ ಬೆಳವಣಿಗೆಯ ಜ್ಞಾನ ಪಡೆಯಲು ಈ ಪತ್ರಿಕೆ ಅತ್ಯಂತ ಸಹಕಾರಿ. ಶಾಲೆಯಿಂದ ಪ್ರತಿ ತಿಂಗಳು ಈ ಪತ್ರಿಕೆ ತರಿಸುತ್ತಿದ್ದು, ವಿದ್ಯಾರ್ಥಿಗಳು ಇದರ ಲಾಭ ಪಡೆಯಬೇಕು ಎಂದು ಹೇಳಿದರು.

ಬಾಲಕರ ಸರ್ಕಾರಿ ಪ್ರೌಢ ಶಾಲೆ ಮುಖ್ಯಶಿಕ್ಷಕ ವಿಶ್ವನಾಥ ಹರಸೂರ ಮಾತನಾಡಿ, ಈ ಪತ್ರಿಕೆಯಲ್ಲಿ ಪ್ರಕಟವಾಗುವ ಪ್ರತಿಯೊಂದು ವಿಷಯ ಜ್ಞಾನದ ಭಂಡಾರವಾಗಿದೆ. ಗಣಿತ, ಸಾಮಾಜ ವಿಜ್ಞಾನದ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆಗಳು ವಿದ್ಯಾರ್ಥಿಗಳ ಬೆಳವಣಿಗೆಗೆ ಅತ್ಯಂತ ಸಹಕಾರಿ. ನಮ್ಮ ಶಾಲೆಯಿಂದ ಪ್ರತಿ ತಿಂಗಳು ಈ ಯುವ ಸ್ಪೂರ್ತಿ ಪತ್ರಿಕೆ ತರಿಸುತ್ತಿದ್ದು, ವಿದ್ಯಾರ್ಥಿಗಳು ಇದರ ಲಾಭ ಪಡೆದು ಓದಿನ ಕಡೆ ಹೆಚ್ಚು ಗಮನ ನೀಡಬೇಕು ಎಂದು ಸಲಹೆ ನೀಡಿದರು.

ಶಿಕ್ಷಕರಾದ ಯಮುನೇಶ ಯಾಳಗಿ, ನಾಗರತ್ನಾ ಕುಲಕರ್ಣಿ, ಕೆ. ಆರ್. ಪಾಟೀಲ, ಶ್ರೀಕಾಂತ, ರೇಣುಕಾ, ಸಲೀಮಾ ಬೇಗಂ, ಮಹಾಲಕ್ಷ್ಮೀ, ಸರಸ್ವತಿ, ಮೀನಾಕ್ಷಿ, ರವಿಚಂದ್ರ ಇದ್ದರು.

---ಫೋಟೊ-----

11ವೈಡಿಆರ್‌8

ಕೆಂಭಾವಿ ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕನ್ನಡಪ್ರಭ ದಿನಪತ್ರಿಕೆ ಹೊರತಂದಿರುವ ಕನ್ನಡಪ್ರಭ ಯುವ ಸ್ಫೂರ್ತಿ ಪತ್ರಿಕೆಗಳನ್ನು ವಿದ್ಯಾರ್ಥಿನಿಯರಿಗೆ ವಿತರಿಸಲಾಯಿತು. ದತ್ತಾತ್ರೇಯ ಕುಲಕರ್ಣಿ, ಯಮುನೇಶ ಯಾಳಗಿ, ನಾಗರತ್ನಾ ಕುಲಕರ್ಣಿ ಇದ್ದರು.

--ಫೋಟೊ-----

11ವೈಡಿಆರ್9

ಕೆಂಭಾವಿ ಪಟ್ಟಣದ ಬಾಲಕಯರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕನ್ನಡಪ್ರಭ ದಿನಪತ್ರಿಕೆ ಹೊರತಂದಿರುವ ಕನ್ನಡಪ್ರಭ ಯುವ ಸ್ಫೂರ್ತಿ ಪತ್ರಿಕೆಗಳನ್ನು ವಿದ್ಯಾರ್ಥಿನಿಯರಿಗೆ ವಿತರಿಸಲಾಯಿತು. ವಿಶ್ವನಾಥ ಹರಸೂರ, ಶ್ರೀಕಾಂತ, ಕೆ.ಆರ್.ಪಾಟೀಲ ಇದ್ದರು.