ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ

| Published : Jun 27 2024, 01:03 AM IST

ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಸೇವಾಭಾರತಿ ಟ್ರಸ್ಟ್ ಹಾಗೂ ಹಿಂದೂ ಸುರಕ್ಷಾ ನಿಧಿಯ ವತಿಯಿಂದ ಕೃಷ್ಣಮೂರ್ತಿಪುರಂನ ವನಿತಾ ಸದನದ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಬುಧವಾರ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಮೈಸೂರು

ಸೇವಾಭಾರತಿ ಟ್ರಸ್ಟ್ ಹಾಗೂ ಹಿಂದೂ ಸುರಕ್ಷಾ ನಿಧಿಯ ವತಿಯಿಂದ ಕೃಷ್ಣಮೂರ್ತಿಪುರಂನ ವನಿತಾ ಸದನದ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಬುಧವಾರ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.

ಹಿರಿಯ ವಕೀಲರು ಹಾಗೂ ಹಿಂದೂ ಸುರಕ್ಷಾ ನಿಧಿಯ ಸಿ.ವಿ. ಕೇಶವಮೂರ್ತಿ, ವನಿತಾ ಸದನದ ಆಡಳಿತಾಧಿಕಾರಿ ಶ್ರೀಕಾಂತ್, ಮುಖ್ಯೋಪಾದ್ಯಾಯಿನಿ ಸೌಭಾಗ್ಯ, ಶಾರದಾ ನೆಲೆಯ ವ್ಯವಸ್ಥಾಪಕಿ ಎಂ. ರೇವತಿ, ವಕೀಲ ಪಿ.ಜೆ. ರಾಘವೇಂದ್ರ ಹಾಗೂ ಶಾಲಾ ಶಿಕ್ಷಕ ವೃಂದ ಭಾಗವಹಿಸಿದ್ದರು.

ಶಿಕ್ಷಕಿ ಸವಿತಾ ನಿರೂಪಿಸಿದರು. ದೀಪಾ ಪ್ರಾರ್ಥಿಸಿದರು.