ನಮ್ಮ ಬಣಜಿಗ ಸಮುದಾಯದವರು ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಅತಿ ಹಿಂದುಳಿದರವರಾಗಿರುವುದರಿಂದ ಸರ್ಕಾರಿ ನೇಮಕಾತಿಗಳಿಂದ ಅವಕಾಶ ವಂಚಿತ
ಕೊಪ್ಪಳ:ನಗರದ ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ಗುರುವಾರ ಜಿಲ್ಲಾ ಬಣಜಿಗ ಸಮಾಜ ಘಟಕದಿಂದ ಬಣಜಿಗ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಜಿಲ್ಲಾಧಿಕಾರಿ ಸುರೇಶ್ ಬಿ. ಇಟ್ನಾಳ್ ಗೆ ಮನವಿ ಸಲ್ಲಿಸಿದರು.
ಬಣಜಿಗ ಸಮಾಜ ಘಟಕದ ಜಿಲ್ಲಾಧ್ಯಕ್ಷ ವೀರೇಶ್ ಬಂಗಾರಶೆಟ್ರು ಮಾತನಾಡಿ, ಬಣಜಿಗ ಸಮಾಜದ ಶಿಕ್ಷಕಿ ಸುಮಿತ್ರ ಕರ್ನಾಟಕ ರಾಜ್ಯ ಕೇಸ್ ನಲ್ಲಿ ಉಚ್ಚ ನ್ಯಾಯಾಲಯದ ಏಕ ಸದಸ್ಯಪೀಠ ಹಾಗೂ ಇನ್ನೊಬ್ಬರು ನಮ್ಮ ಸಮಾಜದವರಾದ ನಾಗರಾಜ್ ಶಿವಬಸಪ್ಪ ಅವರ ಕೇಸ್ ನಲ್ಲಿ ಉಚ್ಚ ನ್ಯಾಯಾಲಯದಲ್ಲಿ ಏಕ ಸದಸ್ಯಪೀಠ ಬಣಜಿಗ ಸಮುದಾಯ ಉದ್ಯೋಗ ಉದ್ದೇಶಕ್ಕಾಗಿ ಪ್ರವರ್ಗ ಡಿ ಹಾಗೂ ಶಿಕ್ಷಣದ ಉದ್ದೇಶಕ್ಕಾಗಿ ಪ್ರವರ್ಗ ಬಿ ಅಡಿಯಲ್ಲಿ ವರ್ಗೀಕರಿಸುವುದು ಪರಿಚ್ಛೇದ ಉಲ್ಲಂಘನೆಯಾಗಿರುತ್ತದೆ. ಹಾಗಾಗಿ ಬಣಜಿಗ ಸಮುದಾಯವನ್ನು ಪರಿಚ್ಛೇದ 16(4) ರ ಅಡಿಯಲ್ಲಿ ಗ್ರುಪ್ ಡಿ ಬದಲಿಗೆ ಗ್ರುಪ್ ಬಿ ಅಡಿಯಲ್ಲಿ ಮರುವರ್ಗೀಕರಿಸಬೇಕೆಂದು ಉಚ್ಚ ನ್ಯಾಯಾಲಯ ಪೀಠವು ಆದೇಶ ನೀಡಿದೆ ಎಂದರು.ನಮ್ಮ ಬಣಜಿಗ ಸಮುದಾಯದವರು ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಅತಿ ಹಿಂದುಳಿದರವರಾಗಿರುವುದರಿಂದ ಸರ್ಕಾರಿ ನೇಮಕಾತಿಗಳಿಂದ ಅವಕಾಶ ವಂಚಿತರಾಗಿದ್ದಾರೆ.ಕಾರಣ ಬಣಜಿಗ ಸಮುದಾಯವನ್ನು ಪರಿಚ್ಛೇದ 16(4) ರ ಅಡಿಯಲ್ಲಿ ಗ್ರುಪ್ ಡಿ ಬದಲಿಗೆ ಗ್ರುಪ್ ಬಿ ಅಡಿಯಲ್ಲಿ ವರ್ಗೀಕರಿಸಬೇಕೆಂದು ಉಚ್ಚ ನ್ಯಾಯಾಲಯ ಪೀಠದ ಆದೇಶ ಪ್ರಕಾರ ಬಣಜಿಗ ಸಮುದಾಯಕ್ಕೆ ನ್ಯಾಯ ಒದಗಿಸಲು ಸಂಬಂಧಿಸಿದ ಇಲಾಖೆಗೆ ಸೂಕ್ತ ಆದೇಶ ನೀಡಲು ವಿನಂತಿಸುತ್ತೇವೆ ಎಂದರು.
ಮನವಿ ಸ್ವೀಕರಿಸಿ ಜಿಲ್ಲಾಧಿಕಾರಿ ಸುರೇಶ್ ಬಿ ಇ ಟ್ನಾಳ್ ಮಾತನಾಡಿ, ಸಂಬಂಧಪಟ್ಟ ಸಚಿವಾಲಯಕ್ಕೆ ಕಳಿಸಲಾಗುವುದು ಎಂದು ಹೇಳಿದರು.ಅಪರ ಜಿಲ್ಲಾಧಿಕಾರಿ ಸಿದ್ದರಾಮೇಶ್ವರ,ರಾಜ್ಯ ಉಪಾಧ್ಯಕ್ಷ ಅಂದಪ್ಪ ಜವಳಿ, ಗೌರವಾಧ್ಯಕ್ಷ ಸಂಗಣ್ಣ ಟೆಂಗಿನಕಾಯಿ,ಉಪಾಧ್ಯಕ್ಷ ಮಲ್ಲಣ್ಣ ಪಾವಲಿ, ಶರಣಪ್ಪ ಬಳಗಾನೂರ, ಶರಣಪ್ಪ ಗದ್ದಿ, ರಾಚಪ್ಪ ಅಂಗಡಿ, ಪ್ರ.ಕಾರ್ಯದರ್ಶಿ,ಬಸವರಾಜ ಪಗಡದಿನ್ನಿ, ಕಾರ್ಯದರ್ಶಿ ಬಸವರಾಜ ಜೋಳದ,ತಾಲೂಕಾಧ್ಯಕ್ಷ ಶಾಂತಪ್ಪ ಸೋಮಲಾಪುರ, ಪ್ರಶಾಂತ ಪ್ರಭುಶೆಟ್ಟರ, ಶಿವಕುಮಾರ ಅರಲೂರ, ಕಪ್ಪತ್ತೆಪ್ಪ ಅಂಗಡಿ, ಪ್ರಭು ಹೊಸಂಗಡಿ, ರಾಜ್ಯ ಸಮಿತಿ ಸದಸ್ಯ ಬಸವರಾಜ ಪಡಿ, ವಿಶ್ವನಾಥ ಮಳಗಿ, ಗುರುರಾಜ ಹಲಗೇರಿ, ವಿರೂಪಾಕ್ಷ ಕೊರಲಹಳ್ಳಿ, ಅನಿಲ ನಾಲವಾಡದ, ಬಸವರಾಜ ವೀರಶೆಟ್ಟರ, ಬಸವರಾಜ ಹುಬ್ಬಳ್ಳಿ, ಪ್ರಭು ಉಪನಾಳ, ಸುನೀಲ್ ಹೆಸರೂರು, ರಾಜು ಬಂಗಾರಶೆಟ್ಟರ್, ರಾಜು ಬೆಳವಣಿಕಿ,ವಿಜಯ ಮಹಾಂತೇಶ ಗಲಗಲಿ, ಶರಣು ಅಗಡಿ, ಪ್ರಭು ಹೊಂಬಾಳ, ಶರಣಪ್ಪ ಗುತ್ತಿ, ಈಶಪ್ಪ ಅಂಗಡಿ, ಈಶಪ್ಪ ನಾಲ್ವಡ ಸೇರಿದಂತೆ ಅನೇಕರು ಇದ್ದರು.