ಸಾರಾಂಶ
- ವಿದ್ಯಾರ್ಥಿನಿಯರಿಗೆ ಸಾಮಾಜಿಕ ನಡವಳಿಕೆಗಳ ಬಗ್ಗೆ ಮಾಹಿತಿ
- - -ಕನ್ನಡಪ್ರಭ ವಾರ್ತೆ ಹರಿಹರ
ದಾವಣಗೆರೆ ಜಿಲ್ಲಾ ನಾಗರಿಕ ಜಾರಿ ಹಕ್ಕು ನಿರ್ದೇಶನಾಲಯದ ಅಧಿಕಾರಿಗಳು ಬುಧವಾರ ಹಾಸ್ಟೆಲ್‌ಗೆ ಭೇಟಿ, ವ್ಯವಸ್ಥೆಗಳ ಪರಿಶೀಲನೆ ನಡೆಸಿದರು.ನಗರದ ಜೆ.ಸಿ. ಬಡಾವಣೆಯ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಕ್ಕೆ ಜಿಲ್ಲಾ ನಾಗರಿಕ ಜಾರಿ ಹಕ್ಕು ನಿರ್ದೇಶನಾಲಯದ ಸಿಪಿಐ ಎಂ.ವಿ. ಮೇಘರಾಜ್ ನೇತೃತ್ವದ ತಂಡ ಬುಧವಾರ ಭೇಟಿ ನೀಡಿ ವಿದ್ಯಾರ್ಥಿನಿಯರಿಗೆ ಸಾಮಾಜಿಕ ನಡವಳಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಹಾಸ್ಟಲ್‌ನಲ್ಲಿ ವಿದ್ಯಾರ್ಥಿನಿಯರು ತಮಗೆ ತೊಂದರೆ, ನ್ಯೂನತೆಗಳು ಕಂಡುಬಂದಲ್ಲಿ ಧೈರ್ಯವಾಗಿ ಮೇಲಾಧಿಕಾರಿಗಳಿಗೆ ತಿಳಿಸುವ ಕೆಲಸ ಮಾಡಬೇಕು. ಮಕ್ಕಳಿಗೆ ಯಾವುದೇ ತೊಂದರೆ ಇದ್ದರೆ ಅದು ನಮ್ಮ ಗಮನಕ್ಕೆ ಬಂದ ಕೂಡಲೇ ತನಿಖೆ ನಡೆಸಿ, ಇಲಾಖೆ ಕ್ರಮ ಕೈಗೊಳ್ಳವುದು ಎಂದರು.ಆಗ ಹಾಸ್ಟೆಲ್ ವಿದ್ಯಾರ್ಥಿನಿಯರು ಹಳಸಿದ ಅನ್ನ ನೀಡಿದ್ದ ಬಗ್ಗೆ ಅಳಲು ತೋಡಿಕೊಂಡರು. ನಾಗರ ಪಂಚಮಿ ಹಬ್ಬದ ಸಂದರ್ಭ ವಿದ್ಯಾರ್ಥಿನಿಯರು ಊರುಗಳಿಗೆ ತೆರಳಿದ್ದರು. ಕೆಲವೇ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿದ್ದೆವು. ಶನಿವಾರ ತಯಾರಿಸಿದ್ದ ಚಿತ್ರಾನ್ನದ ಒಗ್ಗರಣೆಯನ್ನು ಬುಧವಾರದ ದಿನದ ಅನ್ನಕ್ಕೆ ಕಲಸಿ ನೀಡಿದರು. ಹಳಸಿದ್ದರೂ ನಾವು ಅದನ್ನೇ ಊಟ ಮಾಡಬೇಕಾಯಿತು ಎಂದು ದೂರಿದರು.
ಅಹವಾಲು ಆಲಿಸಿದ ಅಧಿಕಾರಿಗಳು, ಇಂದಿನ ಭೇಟಿಯ ವೇಳೆ ಕೆಲವು ನ್ಯೂನತೆಗಳು ಕಂಡುಬಂದಿವೆ. ಅವುಗಳನ್ನೆಲ್ಲ ಮೇಲಾಧಿಕಾರಿಗಳ ಗಮನಕ್ಕೆ ತರುವ ಕೆಲಸ ಮಾಡುತ್ತೇವೆ ಎಂದರು.ಈ ಸಂದರ್ಭ ಪಿಎಸ್ಐ ಸಂಜೀವ್ ಕುಮಾರ್ ಸೇರಿದಂತೆ ಪ್ರೊ ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂರಕ್ಷಣಾ ಸಮಿತಿ ತಾಲೂಕು ಸಂಚಾಲಕ ಪಿ.ಜೆ. ಮಹಾಂತೇಶ್ ಇತರರು ಉಪಸ್ಥಿತರಿದ್ದರು.
- - - -06HRR02: