ಸೇವೆ ದೊಡ್ಡದಿರಲಿ, ಸಣ್ಣದಿರಲಿ ಉತ್ತೇಜಿತರಾಗಿ ಮಾಡುವುದು ಮುಖ್ಯ. ಹೋಬಳಿ ಮಟ್ಟದಲ್ಲಿ 44 ವರ್ಷಗಳ ಹಿಂದೆ ಸಾರ್ವಜನಿಕರ ಸೇವೆ ಮಾಡುತ್ತೇವೆ ಎಂದು ಪ್ರತಿಜ್ಞೆ ಮಾಡಿ ಪ್ರಾರಂಭಿಸಿ ನಿರಂತರ ಸೇವೆ ಮಾಡುತ್ತಿರುವ ಏಕೈಕ ಸಂಸ್ಥೆ ಹಲಗೂರು ಸಂಸ್ಥೆ.
ಕನ್ನಡಪ್ರಭ ವಾರ್ತೆ ಹಲಗೂರು
ಲಯನ್ಸ್ ಕ್ಲಬ್‌ನಿಂದ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಹಾಗೂ ಬಡವರಿಗೆ ಹಸಿವು ನಿವಾರಿಸಲು ಪ್ರತಿದಿನ ನಡೆಯುವ ಅನ್ನದಾಸೋಹ 500 ದಿನ ಪೂರೈಸಿದಕ್ಕೆ ಜಿಲ್ಲಾ ರಾಜ್ಯಪಾಲ ರಾಜಶೇಖರ್ ಪ್ರಶಂಸೆ ವ್ಯಕ್ತಪಡಿಸಿದರು.ಆಸ್ಪತ್ರೆ ಆವರಣದಲ್ಲಿ ರೋಗಿಗಳು, ಬಡವರಿಗೆ ದಿನನಿತ್ಯ ಹಸಿವು ನಿವಾರಣೆ ಕಾರ್ಯಕ್ರಮ ನಡೆಸುತ್ತಿರುವುದು ಶ್ಲಾಘನೀಯ.
ದೇಶದಲ್ಲಿ ಸುಮಾರು 1950 ಲಕ್ಷ ಜನರು ಹಸಿವಿನಿಂದ ಕಂಗೆಡುತ್ತಿದ್ದಾರೆ. 3 ಲಕ್ಷ ಲಯನ್ಸ್ ಕ್ಲಬ್ ಸದಸ್ಯರು ಹಸಿವು ಎಂಬ ಸಮಸ್ಯೆಯನ್ನು ಪ್ರಮುಖವಾಗಿ ಪರಿಗಣಿಸಿ ಕೆಲಸ ಮಾಡುತ್ತಿದ್ದೇವೆ. ಅಕ್ಷಯ ಪಾತ್ರೆ ಇಸ್ಕಾನ್ ಸಂಸ್ಥೆ ಮೊದಲು ಪ್ರಾರಂಭಿಸಿದ ಯೋಜನೆ. ಲಯನ್ಸ್ ಸಂಸ್ಥೆ ಮುಕ್ತ ಮನಸ್ಸಿನಿಂದ ಸಾರ್ವಜನಿಕ ಸೇವೆ ಮಾಡೋಣ ಎಂದು ಪ್ರಾರಂಭಿಸಿದ ಸಂಸ್ಥೆ ಎಂದರು.ಸೇವೆ ದೊಡ್ಡದಿರಲಿ, ಸಣ್ಣದಿರಲಿ ಉತ್ತೇಜಿತರಾಗಿ ಮಾಡುವುದು ಮುಖ್ಯ. ಹೋಬಳಿ ಮಟ್ಟದಲ್ಲಿ 44 ವರ್ಷಗಳ ಹಿಂದೆ ಸಾರ್ವಜನಿಕರ ಸೇವೆ ಮಾಡುತ್ತೇವೆ ಎಂದು ಪ್ರತಿಜ್ಞೆ ಮಾಡಿ ಪ್ರಾರಂಭಿಸಿ ನಿರಂತರ ಸೇವೆ ಮಾಡುತ್ತಿರುವ ಏಕೈಕ ಸಂಸ್ಥೆ ಹಲಗೂರು ಸಂಸ್ಥೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆ ಅಧ್ಯಕ್ಷ ಜಿ.ಎಸ್.ಮನೋಹರ್ ಅಧ್ಯಕ್ಷತೆ ವಹಿಸಿದ್ದರು ಮಾತನಾಡಿದರು. ಇದೇ ವೇಳೆ ವೈದ್ಯಾಧಿಕಾರಿ ಸೌಮ್ಯಶ್ರೀ, ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡುತ್ತಿರುವ ಮಂಗಳಮ್ಮ, ಪಾಸ್ಟ್ ಫುಡ್ ಗಿರೀಶ, ಡೈರಿ ಬಾಬು, ಗಜೇಂದ್ರ, ಜಯಣ್ಣ, ಎ. ಎಸ್.ದೇವರಾಜು ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಡಾ.ಸೌಮ್ಯಶ್ರೀ, ಲಯನ್ಸ್ ಸಂಸ್ಥೆ ಅಧ್ಯಕ್ಷ ಜಿ.ಎಸ್.ಮನೋಹರ್, ಡಾ.ಎ.ಎಸ್.ನಾಗೇಶ್,
ಡಾ.ಶಂಷುದ್ದೀನ್, ಎ.ಟಿ.ಶ್ರೀನಿವಾಸ್, ಕೆ.ಎಸ್.ಸುನೀಲ್ ಕುಮಾರ್, ಧರ್ಮರಾಜ್, ಎ.ಎಸ್.ದೇವರಾಜ್, ಸಿ.ಪ್ರವೀಣ್, ಬಸವರಾಜು, ಗುರುಸಿದ್ದು, ಎನ್. ಕೆ.ಕುಮಾರ್, ಜಯಣ್ಣ, ರಾಜೇಂದ್ರ ಸೇರಿದಂತೆ ಸಂಸ್ಥೆ ಎಲ್ಲಾ ಸದಸ್ಯರು ಇದ್ದರು.ಹಲಗೂರು ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ
ಕನ್ನಡಪ್ರಭ ವಾರ್ತೆ ಹಲಗೂರುರಾಜ್ಯ ಸರ್ಕಾರ ನೀಡುವ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಹಲಗೂರು ಗ್ರಾಪಂ ಆಯ್ಕೆಯಾಗಿದೆ.
ಬೆಂಗಳೂರಿನ ವಿಧಾನಸೌಧದ ಬಾಂಕ್ವೆಟ್ ಹಾಲ್‌ನಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಗ್ರಾಪಂ ಅಧ್ಯಕ್ಷೆ ಗುಲ್ನಾಜ್ ಬಾನು ಮತ್ತು ಪಿಡಿಒ ಕೆ.ಚೆಂದಿಲ್ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರಿಂದ ಪುರಸ್ಕಾರ ಸ್ವೀಕರಿಸಿದರು.ಉತ್ತಮವಾಗಿ ಆಡಳಿತ ನಡೆಸುತ್ತಿರುವ ಗ್ರಾಪಂಗಳನ್ನು ಪ್ರೋತ್ಸಾಹಿಸಲು ಪ್ರತಿ ತಾಲೂಕಿಗೆ ಒಂದು ಪಂಚಾಯ್ತಿಯನ್ನು ಆಯ್ಕೆ ಮಾಡಿ ಪ್ರತಿ ವರ್ಷವೂ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿಗೆ ಆಯ್ಕೆ ಮಾಡಲು ಗ್ರಾಪಂಗಳು ಕಾಯ್ದೆ ಬದ್ಧವಾಗಿ ನಿರ್ವಹಿಸಬೇಕಾದ ಹಾಗೂ ಸ್ವಯಂ ಪ್ರೇರಣೆಯಿಂದ ಕೈಗೊಳ್ಳುವ ಅಭಿವೃದ್ಧಿ ಚಟುವಟಿಕೆಗಳು, ಸರ್ಕಾರ ಕಾಲ ಕಾಲಕ್ಕೆ ರೂಪಿಸಿದ ಕಾರ್ಯಕ್ರಮಗಳ ನಿರ್ವಹಣೆಗೆ ಕೈಗೊಂಡ ಕ್ರಮಗಳು ಒಳಗೊಂಡಂತೆ ಮಾನದಂಡ ಅನುಸರಿಸಲಾಗುತ್ತದೆ.
ಪ್ರಶಸ್ತಿಯಲ್ಲಿ ಪ್ರಮಾಣಪತ್ರ, ಸ್ಮರಣಿಕೆ ಮತ್ತು 5 ಲಕ್ಷ ರು. ಪ್ರೋತ್ಸಾಹ ಧನ ನೀಡಿ ಗೌರವಿಸಲಾಗಿದೆ ಪಿಡಿಒ ಕೆ.ಚೆಂದಿಲ್ ತಿಳಿಸಿದರು.ಈ ಬಾರಿ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಹಲಗೂರಿಗೆ ದೊರಕಿರುವುದು ಸಂತಸ ತಂದಿದೆ ಎಂದು ಅಧ್ಯಕ್ಷೆ ಗುಲ್ನಾಜ್ ಬಾನು ಮತ್ತು ಸದಸ್ಯರು ಸಂತಸ ಹಂಚಿಕೊಂಡಿದ್ದಾರೆ.