ಇನ್ನರ್ ವೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್‌ಗೆ ಜಿಲ್ಲಾ ಗವರ್ನರ್ ಭೇಟಿ

| Published : Nov 11 2025, 03:00 AM IST

ಸಾರಾಂಶ

ಇನ್ನರ್‌ವೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್‌ಗೆ ಜಿಲ್ಲಾ ಗವರ್ನರ್ ಶಬರಿ ಕಡಿದಾಳ್ ಭೇಟಿ ನೀಡಿದರು. ಐಗೂರಿನ ಖಾಸಗಿ ರೆಸಾರ್ಟ್‌ನಲ್ಲಿ ಸಭಾ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಇಲ್ಲಿನ ಇನ್ನರ್‌ವೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್‌ಗೆ ಜಿಲ್ಲಾ ಗವರ್ನರ್ ಶಬರಿ ಕಡಿದಾಳ್ ಭೇಟಿ ನೀಡಿದರು.ಐಗೂರಿನ ಖಾಸಗಿ ರೆಸಾರ್ಟ್‌ನಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ, ಸಂಸ್ಥೆಯ ಪ್ರತಿನಿಧಿಗಳು ಸಂತೋಷದಿಂದ ಸಮಾಜ ಸೇವೆಯನ್ನು ಮಾಡುವ ಮೂಲಕ ಅದು ಜನರ ಹೃದಯ ತಟ್ಟುವಂತಿರಬೇಕು. ಆಗ ಮಾತ್ರ ನಾವು ಮಾಡಿದ ಸೇವೆಗೆ ಮೌಲ್ಯ ಸಿಗುವುದು. ಸಂಸ್ಥೆ ಯಶಸ್ವಿಯಾಗಬೇಕಾದಲ್ಲಿ ಅದಕ್ಕೆ ಎಲ್ಲ ಸದಸ್ಯರು ಕೈ ಜೋಡಿಸಬೇಕು. ವರದಿ ಸಾಲಿನಲ್ಲಿ ಸಾಕಷ್ಟು ಸೇವೆಗಳನ್ನು ಮಾಡುತ್ತಿರುವ ಸಂಸ್ಥೆ ಮುಂದೆಯೂ ಇನ್ನಷ್ಟು ಕೆಲಸ ಮಾಡಬೇಕೆಂದರು.ಕಾರ್ಯಕ್ರಮಕ್ಕೂ ಮುನ್ನ ಬೇಳೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇನ್ನರ್ ವೀಲ್ ಸಂಸ್ಥೆ ಹ್ಯಾಪಿ ಸ್ಕೂಲ್‌ನಲ್ಲಿ ನೀಡಿರುವ ಯೋಜನೆಯನ್ನು ಉದ್ಘಾಟಿಸಿದ ಅವರು, ಯಾವುದೇ ಶಾಲೆಗಳಲ್ಲಿ ಮಾಡಿದ ಯೋಜನೆಗಳಿಂದ ಹೆಚ್ಚಿನ ವಿದ್ಯಾರ್ಥಿಗಳಿಗೆ ಅನುಕೂಲವಾಗುವುದು ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇನ್ನರ್ ವೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ಅಧ್ಯಕ್ಷೆ ತನ್ಮಯಿ ಪ್ರವೀಣ್ ವಹಿಸಿದ್ದರು. ಈ ಸಂದರ್ಭ ಉಪಾಧ್ಯಕ್ಷೆ ಲತಾ ಮಂಜುಮ ಪ್ರಧಾನ ಕಾರ್ಯದರ್ಶಿ ಸುವಿನಾ ಕೃಪಾಲ್, ಖಜಾಂಚಿ ಆಶಾ ಮೋಹನ್, ಐಎಸ್‌ಒ ನಂದಿನಿ ಗೋಪಾಲ್ ಹಾಗೂ ಸಖಿ ಬುಲೆಟಿನ್ ಸಂಪಾದಕಿ ಅಮ್ರಿತಾ ಕಿರಣ್ ಇದ್ದರು.ಇದೇ ಸಂದರ್ಭ ಕಳೆದ ಒಂದು ವರ್ಷದ ಸಾಧನೆಯ ಸಖಿ ಬುಲೆಟಿನ್ ಬಿಡುಗಡೆ ಮಾಡಲಾಯಿತು.