ಸಾರಾಂಶ
ಜಿಲ್ಲಾಸ್ಪತ್ರೆಯ ಮುಖ್ಯಸ್ಥರಾಗಿ ಡಾ. ಸಂಗಪ್ಪ ಗಾಬಿ ಕಾಳಜಿಪೂರ್ವಕ ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಂಡವರು. ಆಸ್ಪತ್ರೆಗೆ ಬರುವ ರೋಗಿಗಳಿಗೆ ಎಲ್ಲ ವಿಭಾಗಗಳಲ್ಲಿ ಸೂಕ್ತ ಮಾಹಿತಿ, ಚಿಕಿತ್ಸೆ ಒದಗಿಸಲು ಶ್ರಮಿಸುತ್ತಿದ್ದಾರೆ.
ಧಾರವಾಡ: ಪ್ರಾಮಾಣಿಕ ವ್ಯಕ್ತಿಗಳನ್ನು ಬೆಂಬಲಿಸುವುದರ ಜತೆಗೆ ಸೂಕ್ತ ರೀತಿಯಲ್ಲಿ ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಧಾರವಾಡ ಧ್ವನಿ ಅಧ್ಯಕ್ಷ ಈಶ್ವರ ಶಿವಳ್ಳಿ ಹೇಳಿದರು.
ವೈದ್ಯಕೀಯ ಕ್ಷೇತ್ರದ ಸೇವೆ ಪರಿಗಣಿಸಿ ಏಷಿಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಕೊಡಮಾಡುವ ಹೆಲ್ತ್ ಕೇರ್ ಎಕ್ಸಲೆನ್ಸ್-2025 ಪ್ರಶಸ್ತಿಗೆ ಭಾಜನರಾದ ಜಿಲ್ಲಾಸ್ಪತ್ರೆಯ ಸರ್ಜನ್, ಪ್ರಸೂತಿ ತಜ್ಞರೂ ಆದ ಡಾ. ಸಂಗಪ್ಪ ಗಾಬಿ ಅವರನ್ನು ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಅವರು ಮಾತನಾಡಿದರು.ಜಿಲ್ಲಾಸ್ಪತ್ರೆಯ ಮುಖ್ಯಸ್ಥರಾಗಿ ಡಾ. ಸಂಗಪ್ಪ ಗಾಬಿ ಕಾಳಜಿಪೂರ್ವಕ ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಂಡವರು. ಆಸ್ಪತ್ರೆಗೆ ಬರುವ ರೋಗಿಗಳಿಗೆ ಎಲ್ಲ ವಿಭಾಗಗಳಲ್ಲಿ ಸೂಕ್ತ ಮಾಹಿತಿ, ಚಿಕಿತ್ಸೆ ಒದಗಿಸಲು ಶ್ರಮಿಸುತ್ತಿದ್ದಾರೆ. ಅಲ್ಲದೇ ಆಸ್ಪತ್ರೆಗೆ ಇನ್ನೂ ಹೆಚ್ಚಿನ ಸೌಕರ್ಯಗಳನ್ನು ಪಡೆದು ಜನರಿಗೆ ವೈದ್ಯಕೀಯ ಸೌಲಭ್ಯ ಕಲ್ಪಿಸುತ್ತಿದ್ದಾರೆ. ತಮ್ಮ ನಗುಮೊಗದ ಸೇವೆಯ ಜತೆಗೆ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಡಾ. ಸಂಗಪ್ಪ ಅವರನ್ನು ಇನ್ನಷ್ಟು ಪ್ರೋತ್ಸಾಹಿಸಬೇಕು ಎಂದರು.
ಸಂಘಟಕರಾದ ಶರಣಗೌಡ ಗಿರಡ್ಡಿ, ವೆಂಕಟೇಶ ರಾಯ್ಕರ್, ಮಂಜುನಾಥ ನೀರಲಕಟ್ಟಿ, ಮಂಜುನಾಥ ಭೋವಿ, ರಾಜೇಶ ಮನಗುಂಡಿ, ಸುರೇಖಾ ಮೇದ, ಪರಮೇಶ್ವರ ಉಳವಣ್ಣವರ, ಪ್ರವೀಣ ಮೊರಬ ಇದ್ದರು.