ಮೂಡಿಗೆರೆಯಲ್ಲಿ 29, 30 ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

| Published : Mar 26 2024, 01:18 AM IST

ಮೂಡಿಗೆರೆಯಲ್ಲಿ 29, 30 ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
Share this Article
  • FB
  • TW
  • Linkdin
  • Email

ಸಾರಾಂಶ

ಮೂಡಿಗೆರೆಯ ಅಡ್ಯಂತಾಯ ರಂಗಮಂದಿರದಲ್ಲಿ ಮಾ. 29-30 ರಂದು 19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ದೂರಿಯಾಗಿ ನಡೆಸಲು ಸಂಪೂರ್ಣ ಸಿದ್ಧತೆ ಆಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.

ಜಿಲ್ಲಾಧಿಕಾರಿಯಿಂದ ರಾಷ್ಟ್ರ ಧ್ವಜಾರೋಹಣ: ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಮೂಡಿಗೆರೆಯ ಅಡ್ಯಂತಾಯ ರಂಗಮಂದಿರದಲ್ಲಿ ಮಾ. 29-30 ರಂದು 19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ದೂರಿಯಾಗಿ ನಡೆಸಲು ಸಂಪೂರ್ಣ ಸಿದ್ಧತೆ ಆಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನಕ್ಕೆ ರಾಜ್ಯ ಕಸಾಪ 3 ಲಕ್ಷ ರು. ಅನುದಾನ ನೀಡಲಿದ್ದು, ಉಳಿದಂತೆ ದಾನಿಗಳ ನೆರವಿನಿಂದ ಸಂಭ್ರಮದಿಂದ ಸಮ್ಮೇಳನ ನಡೆಸಲು ಸಿದ್ಧತೆಗಳಾಗಿದೆ. ಚರ್ಚೆ ವಿಚಾರಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಸಂಭ್ರಮದ ಕನ್ನಡ ಹಬ್ಬವನ್ನಾಗಿ ಸಮ್ಮೇಳನ ನಡೆಸಲಾಗುವುದು ಎಂದರು. ಮಾ. 29 ರಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ರಾಷ್ಟ್ರ ಧ್ವಜಾರೋಹಣ ನೆರವೇರಿಸುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. ಚಂದನ್ ಗ್ರೂಪ್ಸ್‌ನ ಮಂಚೇಗೌಡ ಅವರು ಸಮ್ಮೇಳನಾಧ್ಯಕ್ಷರ ಮೆರವಣಿಗೆ ಉದ್ಘಾಟಿಸಲಿದ್ದಾರೆ. ಆಳ್ವಾಸ್ ವಿದ್ಯಾಸಂಸ್ಥೆ ಮುಖ್ಯಸ್ಥ ಡಾ. ಮೋಹನ್ ಆಳ್ವ ಸಮ್ಮೇಳನ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.ಸಮ್ಮೇಳನಾಧ್ಯಕ್ಷರಾದ ಹಳೇಕೋಟೆ ಎನ್. ರಮೇಶ್‌ ಅಧ್ಯಕ್ಷತೆಯಲ್ಲಿ ನಡೆಯಲಿರುವ 2 ದಿನಗಳ ಕಾರ್ಯಕ್ರಮದಲ್ಲಿ ಅನ್ನದಾತರ ಅಳಲು ಅಕ್ಷೇಪಗಳು, ವರ್ತಮಾನದಲ್ಲಿ ಮಹಿಳೆ ಕನ್ನಡ ಚಳುವಳಿ ಪರಿಣಾಮಗಳು, ನದಿ ಪಾತ್ರಗಳ ಬಗ್ಗೆ ಸಂವಾದ ವಿಚಾರ ಸಂಕಿರಣ ಜಾನಪದ ಪ್ರಕಾರಗಳು ಹಾಗೂ ಕವಿಗೋಷ್ಠಿ ಕಾರ್ಯಕ್ರಮ ಸಂಜೆ ಸಾಂಸ್ಕೃತಿಕ ಕಾರ್ಯ ಕ್ರಮಗಳು ನಡೆಯಲಿವೆ ಎಂದರು. ಈ ವೇಳೆ ಸಾಹಿತ್ಯ ಸಿರಿ ಪ್ರಶಸ್ತಿಯನ್ನು ಎ.ಎಲ್ ಶಂಕರ ನಾರಾಯಣ, ದೀಪಾ ಹಿರೇಗುತ್ತಿ ಇವರಿಗೆ ನೀಡಲಾಗುವುದು ಸಾಹಿತ್ಯ ಪರಿಷತ್‌ನಿಂದ ಮೊದಲ ಬಾರಿಗೆ ಕೊಡಲಾಗುತ್ತಿರುವ ಕನ್ನಡ ಶ್ರೀ ಪ್ರಶಸ್ತಿಯನ್ನು ಮತ್ತಿಕೆರೆ ಗೋಪಾಲ್, ಸತ್ಯನ್ ಅವರಿಗೆ ನೀಡಲಾಗುವುದು, ಪ್ರತಿ ತಾಲೂಕಿನ ಇಬ್ಬರಂತೆ ಜಿಲ್ಲಾ ಮಟ್ಟದ ಕನ್ನಡ ಸಿರಿ ಪ್ರಶಸ್ತಿ ನೀಡಲಾಗುವುದು ಎಂದರು. ಅತ್ಯುತ್ತಮವಾಗಿ ಹೋಬಳಿ ಮಟ್ಟದಲ್ಲಿ ಕಾರ್ಯಕ್ರಮ ಚಟುವಟಿಕೆ ನಡೆಸುತ್ತಿರುವ ಶೃಂಗೇರಿ ತಾಲೂಕಿನ ಅಂಗುರ್ಡಿ ದಿನೇಶ್ ಅವರಿಗೆ ಸಂಘಟನಾ ಚತುರ ಪ್ರಶಸ್ತಿ ನೀಡುವುದಾಗಿ ತಿಳಿಸಿದರು. ಅಂತಿಮವಾಗಿ ಬಹಿರಂಗ ಅಧಿವೇಶನ ಸಮಾರೋಪ ಸಮಾರಂಭ ನಡೆಯಲಿದ್ದು ಹಿರೇಮಗಳೂರು ಕಣ್ಣನ್ ಸಮಾರೋಪ ಭಾಷಣ ಮಾಡಲಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಪ್ರತಿಷ್ಠಿತ ಸಾಹಿತಿ ಹಾಗೂ ಲೇಖಕ ಡಾ. ಶರತ್ ಅನಂತಮೂರ್ತಿ, ಹಿರಿಯ ಪತ್ರಕರ್ತ ಜಿ.ಕೆ ಸತ್ಯ ಮುಂತಾದ ಅನೇಕರು ಭಾಗವಹಿಸಲಿದ್ದು ಸಾಹಿತ್ಯ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮ್ಮೇಳನ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ದೀಪಕ್ ದೊಡ್ಡಯ್ಯ ಎಸ್.ಎಸ್. ವೆಂಕಟೇಶ್, ಸೋಮಶೇಖರ್, ರಂಜನ್ ಅಜಿತ್ ಕುಮಾರ್, ಜಯರಾಮ್, ಜೆ.ಎಸ್. ರಘು, ಆಶಾ ಉಪಸ್ಥಿತರಿದ್ದರು.

ಪೋಟೋ ಫೈಲ್‌ ನೇಮ್‌ 25 ಕೆಸಿಕೆಎಂ 7