ಸಾರಾಂಶ
ಹಿರೇಕೆರೂರು: ಹಾವೇರಿ ಜಿಲ್ಲಾ ೧೪ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಿ. ೨೮ ಮತ್ತು ೨೯ರಂದು ಹಿರೇಕೆರೂರ ಪಟ್ಟಣದ ಪೊಲೀಸ್ ಮೈದಾನದಲ್ಲಿ ನಡೆಸಲಾಗುವುದು ಎಂದು ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲಿಂಗಯ್ಯ ಹಿರೇಮಠ ಹೇಳಿದರು. ಪಟ್ಟಣದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಹಿರೇಕೆರೂರ ಪಟ್ಟಣದಲ್ಲಿ ನಡೆಯುವ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಮಹಿಳಾ ಕ್ರೀಯಾಶೀಲ ಸಾಹಿತಿ ಹಾಗೂ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಂಕಮ್ಮ ಸಂಕಣ್ಣನವರ ಅವರನ್ನು ಆಯ್ಕೆ ಮಾಡಲಾಗಿದೆ. ಸಮ್ಮೇಳನದಲ್ಲಿ ವಿವಿಧ ವಿಭಿನ್ನ ಗೋಷ್ಠಿಗಳು ನಡೆಯಲಿದ್ದು ಪ್ರತಿ ವರ್ಷದ ಸಮ್ಮೇಳನದದಲ್ಲಿ ನಡೆಯುವ ಕಾರ್ಯಕ್ರಮಗಳ ಜತೆಗೆ ಹೊಸ ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಕ್ಕಳು, ಮಹಿಳೆಯರಿಗಾಗಿ ವಿಶೇಷ ಗೋಷ್ಠಿಗಳು ಆಯೋಜಿಸಲಾಗುವುದು. ಹಿರೇಕೆರೂರ ಹಾಗೂ ರಟ್ಟೀಹಳ್ಳಿ ತಾಲೂಕಿನ ಸಹಯೋಗದಲ್ಲಿ ನಡೆಯುವ ಸಮ್ಮೇಳನವನ್ನು ಅವಳಿ ತಾಲೂಕಿನ ವಿವಿಧ ಕನ್ನಡ ಸಂಘಟನೆಗಳು. ಶಿಕ್ಷಣ ಸಂಘಟನೆಗಳು ಕನ್ನಡ ಭಾಷಾ ಪ್ರೇಮಿಗಳು ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸಬೇಕು ಎಂದು ವಿನಂತಿ ಮಾಡಿದರು.ಈ ಸಂದರ್ಭದಲ್ಲಿ ಕಸಾಪ ತಾಲೂಕು ಘಟಕದ ಅಧ್ಯಕ್ಷ ಎನ್. ಸುರೇಶಕುಮಾರ. ಗೌರವಾಧ್ಯಕ್ಷ ಮಹೇಂದ್ರ ಬಡಳ್ಳಿ, ಡಾ. ಎಸ್.ಬಿ. ಚನ್ನಗೌಡ್ರ, ರಾಘವೇಂದ್ರ ಅಗಿಸಿಬಾಗಿಲ, ಪಿ.ಎಸ್. ಸಾಲಿ. ಡಾ. ಬಸವರಾಜ ಪೂಜಾರ, ಎಸ್.ಬಿ. ಚಳಗೇರಿ, ಕುಮಾರ ಮಡಿವಾಳರ. ಕೆ.ಆರ್. ಕೋಣತಿ. ಎಂ.ಎಂ. ಮತ್ತೂರ. ಬಿ.ಟಿ. ಚಿಂದಿ, ಮಂಜುನಾಥ ಕಳ್ಳಿಹಾಳ. ಬಿ.ವಿ.ಸೊರಟೂರ, ಜೆ.ಬಿ. ಮರಿಗೌಡ್ರ. ಹುಚ್ಚಪ್ಪ ಚೌಟಗಿ, ರಾಮಣ್ಣ ತೆಂಬದ, ಬಿ.ಎಂ. ಹಾವೇರಿ. ಎನ್. ಎಸ್. ಚಿಕ್ಕನರಗುಂದಮಠ, ಸಿ.ಬಿ. ಮಾಳಗಿ ಹಾಗೂ ಕಸಾಪ ಪದಾಧಿಕಾರಿಗಳು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))