ಸಾರಾಂಶ
ಆಸಕ್ತರು ಪತ್ರಿಕಾ ಭವನ, ಶಿವಮೊಗ್ಗ ಪ್ರೆಸ್ ಟ್ರಸ್ಟ್ ಆರ್‌ಟಿಒ ರಸ್ತೆ ಶಿವಮೊಗ್ಗಕ್ಕೆ ನೇರವಾಗಿ ಭೇಟಿಯಾಗಿ ಹೆಸರು ನೋಂದಾಯಿಸಿಕೊಳ್ಳಬಹುದು. ಅಥವಾ ಹೊನ್ನಾಳಿ ಚಂದ್ರಶೇಖರ್: 9844518866 , ರಾಮಚಂದ್ರ ಗುಣಾರಿ 9448093362, ಸಂತೋಷ್: 9632541408 ಅವರನ್ನು ವಾಟ್ಸಪ್ ಮೆಸೇಜ್ ಮೂಲಕ ಸಂಪರ್ಕಿಸಿ, ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.
ಶಿವಮೊಗ್ಗ: ಶಿವಮೊಗ್ಗ ಪ್ರೆಸ್ ಟ್ರಸ್ಟ್ ಹಾಗೂ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಸಹಯೋಗದಲ್ಲಿ ಜಿಲ್ಲಾಮಟ್ಟದ ಕರೋಕೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಜಿಲ್ಲೆಯ ಆಸಕ್ತ ಹಾಗೂ ಹವ್ಯಾಸಿ ಗಾಯಕರು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಸಂಘದ ನಿರ್ದೇಶಕ ರಾಮಚಂದ್ರ ಗುಣಾರಿ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಜಿಲ್ಲೆಯ ಆಸಕ್ತ ಗಾಯಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಸ್ಪರ್ಧೆ ಆಯೋಜಿಸಲಾಗಿದೆ. ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, 20ರಿಂದ 35ರ ವಯೋಮಿತಿ ಹಾಗೂ 36 ರಿಂದ 55ರ ವಯೋಮಿತಿಯವರ ನಡುವೆ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯು ಅರ್ಹತಾ ಸುತ್ತು ಒಳಗೊಂಡಿದ್ದು, ಇದರಲ್ಲಿ ಆಯ್ಕೆಯಾಗುವ 20ರಿಂದ 25 ಸ್ಪರ್ಧಿಗಳನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಗುವುದು ಎಂದು ವಿವರಿಸಿದರು.ವಿವಿಧ ಹಂತಗಳ ಸ್ಪರ್ಧೆಯು ನಡೆಯಲಿದೆ. ತೀರ್ಪುಗಾರರ ತೀರ್ಮಾನ ಅಂತಿಮವಾಗಿರುತ್ತದೆ. ಅನಂತರ ಈ ಪೈಕಿ ಅಂತಿಮವಾಗಿ ಆಯ್ಕೆಯಾಗುವ ಸ್ಪರ್ಧಿಗಳ ನಡುವೆ ಫೈನಲ್ ಹಣಾಹಣಿ ನಡೆಯಲಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು ₹200. ಪ್ರವೇಶ ಶುಲ್ಕ ನಿಗದಿಮಾಡಲಾಗಿದೆ. ಡಿ.14ರೊಳಗೆ ಹೆಸರು ನೋಂದಾಯಿಸಿಕೊಳ್ಳುವಂತೆ ಎಂದು ತಿಳಿಸಿದರು.
ಆಸಕ್ತರು ಪತ್ರಿಕಾ ಭವನ, ಶಿವಮೊಗ್ಗ ಪ್ರೆಸ್ ಟ್ರಸ್ಟ್ ಆರ್‌ಟಿಒ ರಸ್ತೆ ಶಿವಮೊಗ್ಗಕ್ಕೆ ನೇರವಾಗಿ ಭೇಟಿಯಾಗಿ ಹೆಸರು ನೋಂದಾಯಿಸಿಕೊಳ್ಳಬಹುದು. ಅಥವಾ ಹೊನ್ನಾಳಿ ಚಂದ್ರಶೇಖರ್: 9844518866 , ರಾಮಚಂದ್ರ ಗುಣಾರಿ 9448093362, ಸಂತೋಷ್: 9632541408 ಅವರನ್ನು ವಾಟ್ಸಪ್ ಮೆಸೇಜ್ ಮೂಲಕ ಸಂಪರ್ಕಿಸಿ, ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ, ಪ್ರೆಸ್‌ಟ್ರಸ್ಟ್ ಖಜಾಂಚಿ ಜೇಸುದಾಸ್ ಇದ್ದರು.
- - - (-ಸಾಂದರ್ಭಿಕ ಚಿತ್ರ)