ಸಾರಾಂಶ
ನೆಲಜಿ ಅಂಬಲ ಶಾಲಾ ಮೈದಾನದಲ್ಲಿ ಅಂಬಲ ಮಹಿಳಾ ಸಮಾಜ ನೆಲಜಿ ವತಿಯಿಂದ ಆಯೋಜಿಸಿದ ಮೂರನೇ ವರ್ಷದ ಜಿಲ್ಲಾ ಮಟ್ಟದ ಮುಕ್ತ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧಾ ಕಾರ್ಯಕ್ರಮದಲ್ಲಿ ಕೋವಿ ಪೂಜೆ.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಸೋಲು, ಗೆಲುವು ಮುಖ್ಯವಲ್ಲ. ಕೋವಿಯನ್ನು ಎಚ್ಚರಿಕೆ ಮತ್ತು ಜವಾಬ್ದಾರಿಯುತವಾಗಿ ಬಳಸುವುದರ ಮೂಲಕ ಭಾಗವಹಿಸುವುದು ಮುಖ್ಯ ಎಂದು ನಿವೃತ್ತ ಸುಬೇದಾರ್ ಮೇಜರ್ ಬಾಳೆಯಡ ಅಪ್ಪಣ್ಣ (ಅಪ್ಪಾಜಿ) ಹೇಳಿದ್ದಾರೆ.ನೆಲಜಿ ಅಂಬಲ ಶಾಲಾ ಮೈದಾನದಲ್ಲಿ ಅಂಬಲ ಮಹಿಳಾ ಸಮಾಜ ನೆಲಜಿ ವತಿಯಿಂದ ಆಯೋಜಿಸಿದ ಮೂರನೇ ವರ್ಷದ ಜಿಲ್ಲಾ ಮಟ್ಟದ ಮುಕ್ತ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧಾ ಕಾರ್ಯಕ್ರಮದಲ್ಲಿ ಕೋವಿ ಪೂಜೆ ನೆರವೇರಿಸಿದ ಬಲಿಕ ತೆಂಗಿನಕಾಯಿಗೆ ಗುಂಡು ಹೊಡೆದು ಉದ್ಘಾಟಿಸಿ ಅವರು ಮಾತನಾಡಿದರು.
ಸೇನೆಯಲ್ಲಿ ಶೂಟಿಂಗ್ ಸಂದರ್ಭ ಕಠಿಣ ಮುಂಜಾಗ್ರತಾ ಕ್ರಮಗಳನ್ನು ವಹಿಸುತ್ತಾರೆ. ಆದರೆ ಇಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ಎಚ್ಚರಿಕೆಯಿಂದ ಕೋವಿ ಬಳಸಬೇಕು ಎಂದು ಕಿವಿಮಾತು ಹೇಳಿದರು.ಅಂಬಲ ಮಹಿಳಾ ಸಮಾಜ ಅಧ್ಯಕ್ಷ ಅಪ್ಪುಮಣಿಯಂಡ ಡೇಸಿ ಸೋಮಣ್ಣ ವಹಿಸಿದ್ದರು. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ವೇದಿಕೆಯಲ್ಲಿದ್ದ ಗಣ್ಯರು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು.ಕಾಪಿ ಬೆಳೆಗಾರ ಎಳ್ತಂಡ ಬೋಪಣ್ಣ, ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ, ನಿವೃತ್ತ ನಬಾರ್ಡ್ ಎಜಿಎಂ
ಮುಂಡಂಡ ಸಿ ನಾಣ್ಣಯ್ಯ , ದಿ ತಾಮರ ಕೊಡಗು ರೆಸಾರ್ಟಿನ ವ್ಯವಸ್ಥಾಪಕ ಕಲ್ಯಾಟಂಡ ಗಿರೀಶ್ ಸುಬ್ಬಯ್ಯ, ಕಾಫಿ ಬೆಳೆಗಾರ ಕೋಟೆರ ಸುರೇಶ್, ಮಾಜಿ ಸೈನಿಕ ಮನವಟ್ಟಿರ ಸಾಬು ಉತ್ತಪ್ಪ, ಅಂಬಲ ಮಹಿಳಾ ಸಮಾಜದ ಸಲಹಾ ಸಮಿತಿಯ ಅಧ್ಯಕ್ಷ ಮನವಟ್ಟಿದ ಕಮಲ ಬೆಳ್ಳಿಯಪ್ಪ ಮತ್ತಿತರರಿದ್ದರು.ನೂತನವಾಗಿ ಆಯ್ಕೆ ಆಗಿರುವ ನಾಪೋಕ್ಲು ಕೊಡುವ ಸಮಾಜದ ಅಧ್ಯಕ್ಷ ಮುಂಡಂಡ ಸಿ. ನಾಣ್ಣಯ್ಯ, ನಿರ್ದೇಶಕಿ ಝಾನ್ಸಿ ಮಂದಪ್ಪ , ಗ್ರಾಮ ಪಂಚಾಯತಿ ಉಪ ಅಧ್ಯಕ್ಷ ಕುಲ್ಲೇಟಿರ ಹೇಮಾ ಅರುಣ್ ಅವರನ್ನು ಸಮಾಜದ ವತಿಯಿಂದ ಸನ್ಮಾನಿಸಲಾಯಿತು.
ಕಲ್ಲರಂಡ ಪ್ರೀತಿ ಸತೀಶ್ ಪ್ರಾರ್ಥಿಸಿದರು. ಕಮಲ ಬೆಳ್ಳಿಯಪ್ಪ ಸ್ವಾಗತಿಸಿದರು.,ಡೇಸಿ ಸೋಮಣ್ಣ ನಿರೂಪಿಸಿ, ವಂದಿಸಿದರು.