ಸಾರಾಂಶ
ನಾಡು ಕಂಡ ಅಪ್ರತಿಮ ರಾಜಕಾರಣಿ ಎಸ್.ಎಂ.ಕೃಷ್ಣ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಯ ಕೀರ್ತಿಯನ್ನೇ ಬೆಳಗಿಸಿದರು.
ಮಂಡ್ಯ: ನಗರದ ಬಾಲಭವನದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದಿಂದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿದರು. ಜಿಲ್ಲಾಧ್ಯಕ್ಷ ತಿಮ್ಮೇಗೌಡ ಗೌಡಯ್ಯನದೊಡ್ಡಿ ಮಾತನಾಡಿ, ನಾಡು ಕಂಡ ಅಪ್ರತಿಮ ರಾಜಕಾರಣಿ ಎಸ್.ಎಂ.ಕೃಷ್ಣ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಯ ಕೀರ್ತಿಯನ್ನೇ ಬೆಳಗಿಸಿದರು. ಮುಖ್ಯಮಂತ್ರಿಯಾಗಿ, ವಿದೇಶಾಂಗ ಸಚಿವರಾಗಿ, ಕೈಗಾರಿಕ ಸಚಿವರಾಗಿ ಹಲವು ಕಾರ್ಖಾನೆಗಳನ್ನು ತಂದು ಉದ್ಯೋಗದಾತಾರಾಗಿದ್ದಾರೆ ಎಂದು ಶ್ಲಾಘಿಸಿದರು. ಜಿಲ್ಲೆಯ ರಾಜಕೀಯ ಕೊಂಡಿ ಕಳಚಿದ್ದು, ಎಸ್.ಎಂ.ಕೃಷ್ಣ ನಿಧನದಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ವಿಷಾದಿಸಿದರು. ಈ ವೇಳೆ ನಗರಸಭೆ ಸದಸ್ಯೆ ಸೌಭಾಗ್ಯ, ಸಂಘದ ಸದಸ್ಯರಾದ ಜಿ.ಬಿ.ನವೀನ್‌ಕುಮಾರ್, ಶ್ರೀಧರ್, ಕೆಂಪರಾಜು, ಅನಂತು, ಕೋಮಲಾ ಭಾಗವಹಿಸಿದ್ದರು.